ಹೊತ್ತು ಕಂತಿದಾಗ...
ಕವನ
ಹೊತ್ತು ಹೋಗದು ಎನುತ
ಸನಿಹ ಏತಕೆ ಬಂದೆ
ಸತ್ತ ಒಲವಿನ ನಡುವೆ ಸ್ನೇಹವೆಂತು
ಕತ್ತು ತಿರುಗಿಸಿ ನೋಡೆ
ಮುಖದೊಳಗೆ ಗೆಲುವಿಹುದೆ
ಒಡಲು ಬೆಂದಿದೆ ನೋಡು ಮೋಹವೆಂತು
ಚೈತ್ರ ಚಿಗುರದೆ ಇರಲು
ಮುತ್ತು ಬರುವುದೆ ಹೇಳು
ಮತ್ತಿನಲಿ ಚೆಲುವಿಹುದೆ ಕೇಳಲೆಂತು
ಬಾನ ಬಯಲಿನ ಒಳಗೆ
ಮೋಡ ಮುಸುಕಿದ ಹಾಗೆ
ನನಸೆಲ್ಲ ಬಾಡಿರಲು ಅರಳಲೆಂತು
ಉಪ್ಪು ಖಾರದ ನಡುವೆ
ಸವಿ ಹುಳಿಯ ಸಮ್ಮಿಲನ
ಜೊತೆ ಸೇರಿ ಬಾಳಿದರು ಪ್ರೀತಿಯೆಂತು
ರಾತ್ರಿ ಕತ್ತಲೆ ಕಳೆದು
ಬೆಳಕು ಬಂದರು ಜಗಕೆ
ನನಗಿನ್ನು ಬರಲಿಲ್ಲ ಸೌಖ್ಯವೆಂತು
-ಹಾ .ಮ ಸತೀಶ ಬೆಂಗಳೂರು
ಚಿತ್ರ್