ಗುಡಿ ಗುಡಿಯ ಸುತ್ತ...
ಕವನ
ಗುಡಿ ಗುಡಿಯ ಗಂಟೆ
ಢಣ ಢಣನೆ ಢಣಿಸಿ
ಮುಂಜಾನೆ ನಗುತ ಬಂತು
ಹೊದ್ದಿರುವ ರಾತ್ರಿ
ಸುತ್ತೆಲ್ಲ ಕರಗಿ
ಹೊಸತನಕೆ ಬೆಳಕ ತಂತು
ಕತ್ತಲೆಯ ಒಳಕೆ
ಚಿನ್ನಾಟವಾಡಿ
ಹೂಗಳಲಿ ಜೀವ ಬಂತು
ಮೃದುವಾದ ಕೈಗೆ
ದಾಟುತಲೆ ಆಗ
ಮುಡಿಗಳಿಗೆ ಹರುಷ ತಂತು
ಸೊಗಸಾಗಿ ಇಂದು
ಹಸು ಕರುಗಳೆಲ್ಲ
ಬಯಲೀಗೆ ನಲಿದು ಬಂತು
ಹಸಿ ಚಿಗುರ ತಿಂದು
ನೀರನ್ನು ಕುಡಿದು
ತೃಪ್ತಿಯಲಿ ತೇಗ ತಂತು
ಜೀವನದ ಆಟ
ಸೊಗಸಾದ ನೋಟ
ಪ್ರಕೃತಿಯೊಳು ಹಸಿರು ಬಂತು
ರಮಣೀಯ ಹೊಳಪು
ಸೃಷ್ಟಿಯಲೆ ಇರಲು
ಸೊಬಗಿನೊಳು ಖುಷಿಯ ತಂತು
***
ಹನಿ
ನಾವು ಭಾರತೀಯರು
ಸಹಿಷ್ಣುತೆ ವೀರರು
ನಾಡಿಗಾಗಿ ದುಡಿದು
ದೇಶ ಸೇವೆ ಗೈವರು !
***
ಇದು ಭಾರತ
ಕಳ್ಳು ಕುಡಿದವನು ರಸ್ತೆಯಲೆ ತೂರಾಡುವನು
ಹಾರ ಹಾಕಿಸಿಕೊಂಡವನು ಬಹಳ ಮಾತನಾಡುವನು
ಸೊಕ್ಕು ಬಂದವನು ತಿಳಿದಂತೆ ವಾದಿಸುವನು
ದೇಶದಲಿ ಗತಿಯಿಲ್ಲದವನು ಬೀದಿಯಲಿ ಮಲಗುವನು
ನಾಯಕ ನಾನೇನ ಮಾಡಲಿ ಎನ್ನುವನು
ಇವುಗಳೆಡೆ ಉತ್ತಮನು ದೇಶದಿಂದಲೇ ಮಾಯವಾಗುವನು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್