ಎಲ್ಲ ಪುಟಗಳು

ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
October 12, 2023
ಇದರಲ್ಲಿವೆ "ಬದುಕು ಬದಲಿಸುವ 18 ಜನರ” ಕಥೆಗಳು. ಪ್ರತಿಯೊಂದು ಕಥೆ ಓದಿದಾಗಲೂ ನಮ್ಮಲ್ಲಿ ಮೂಡುವ ಪ್ರಶ್ನೆ:  ಬದುಕಿನಲ್ಲಿ ಹೀಗೂ ಗೆಲ್ಲಲು ಸಾಧ್ಯವೇ? “ಸಾಧ್ಯ" ಎಂದು ಆಗಷ್ಟೇ ಓದಿದ ಸತ್ಯಕಥೆ ಸಾರಿಸಾರಿ ಹೇಳುತ್ತದೆ. “ಪ್ರತಿ ಅವಮಾನ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸಲಿ” ಎಂಬ ಮೊದಲ ಬರಹವನ್ನು ಲೇಖಕರು ಶುರು ಮಾಡೋದು ಹೀಗೆ: "ನಾವು ಯಾವಾಗ್ಲು ಹಾಗೆ, ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ನಮ್ಮನ್ನು ನಾವೇ ಮರೆತು ಬಿಡುತ್ತೇವೆ. "ಛೇ, ಅವನ್ನ ನೋಡು ಹಾಗಿದಾನೆ. ನನ್ನ ನೋಡು ಹೀಗಿದೀನಿ. ಎಲ್ಲದಕ್ಕೂ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 11, 2023
ಛಂದ ಪುಸ್ತಕ ಪ್ರಕಾಶನದ ನೂರನೇ ಪುಸ್ತಕವಾಗಿ “ಸರಿಗನ್ನಡಂ ಗೆಲ್ಗೆ" ಪ್ರಕಟವಾಗಿದೆ. ಪತ್ರಕರ್ತ ಹಾಗೂ ಮುಖಪುಟ ವಿನ್ಯಾಸಗಾರರಾದ ‘ಅಪಾರ' ಇವರು ಈ ಪುಸ್ತಕದ ಲೇಖಕರು. ಇವರು ಕನ್ನಡದ ಬೆರಗನ್ನು ಕುರಿತ ೬೦೦ ಸ್ವಾರಸ್ಯಕರ ಕಿರು ಟಿಪ್ಪಣಿಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇವೆಲ್ಲವೂ ‘ಕಲರ್ಸ್ ಕನ್ನಡ’ ಟಿವಿ ಚಾನೆಲ್ ನಲ್ಲಿ ಪ್ರಸಾರವಾದ ಕಿರುಟಿಪ್ಪಣಿಗಳು. ಕಿರುತೆರೆಯಲ್ಲಿ ಬರುತ್ತಿದ್ದ “ಕನ್ನಡತಿ" ಧಾರಾವಾಹಿಯನ್ನು ಇನ್ನಷ್ಟು ಆಸಕ್ತಿದಾಯಕವನ್ನಾಗಿಸಲು ಮಾಡಿದ ಕಿರು ಪ್ರಯತ್ನವೇ ‘…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 09, 2023
ಮಕ್ಕಳಿಗಾಗಿ ಕಾದಂಬರಿ ಬರೆಯುವವರು ಅಪರೂಪದಲ್ಲಿ ಅಪರೂಪ. ಏಕೆಂದರೆ ಮಕ್ಕಳಿಗೆ ಸುದೀರ್ಘ ಓದು ಹಿಡಿಸುವುದಿಲ್ಲ. ಅಷ್ಟೊಂದು ತನ್ಮಯತೆಯಿಂದ ಓದಲು ಅವರಿಗೆ ಕಷ್ಟವಾಗುತ್ತದೆ. ಓದುತ್ತಾ ಓದುತ್ತಾ ಹಿಂದಿನ ಕಥೆ ಮರೆತುಹೋಗುತ್ತದೆ ಎಂಬೆಲ್ಲಾ ಆಪಾದನೆಗಳ ನಡುವೆ ಲೇಖಕರಾದ ಹ ಸ ಬ್ಯಾಕೋಡ ಅವರು “ಜುಟ್ಟಕ್ಕಿ" ಎನ್ನುವ ಸ್ವಾರಸ್ಯಕರವಾದ ಕಾದಂಬರಿಯನ್ನು ಹೊರತಂದಿದ್ದಾರೆ. ಈ ಕಾದಂಬರಿಗೆ ಅವರು ಬರೆದ ಲೇಖಕರ ಮಾತಿನಿಂದ ಆಯ್ದ ಕೆಲವು ಸಾಲುಗಳು ಇಲ್ಲಿವೆ... “ಅಕ್ಷರ ಕಲಿಕೆಗೂ ಮುನ್ನ ಮುಗ್ಧ ಮಕ್ಕಳಲ್ಲಿ ಸರಿ…
ಲೇಖಕರು: Kavitha Mahesh
ವಿಧ: ರುಚಿ
October 08, 2023
ಮೊದಲಿಕೆ ಮಂಡಕ್ಕಿ ಹುರಿದಿಟ್ಟುಕೊಂಡಿರಿ. ನಂತರ ಬಾದಾಮಿ, ಕುಂಬಳಕಾಯಿ ಬೀಜಗಳನ್ನು ಹುರಿಯಿರಿ. ಒಂದು ಪಾತ್ರೆಗೆ ಬೆಲ್ಲ, ನೀರನ್ನು ಹಾಕಿ, ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ತುಪ್ಪವನ್ನು ಸೇರಿಸಿ. ಈಗ ನೊರೆಯಾಗುವವರೆಗೆ ಕುದಿಸಿ. ಹುರಿದ ಮಂಡಕ್ಕಿ ಮತ್ತು ಏಲಕ್ಕಿ ಹುಡಿ, ಬಾದಾಮಿ, ಕುಂಬಳಕಾಯಿ ಬೀಜ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಒಂದು ಬಟ್ಟಲಿಗೆ ತುಪ್ಪವನ್ನು ಸವರಿ ಅದಕ್ಕೆ ಬೇಯಿಸಿದ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಿ. ಒಂದು ನಿಮಿಷ ಸ್ವಲ್ಪ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 06, 2023
ಝೆನ್ ಬೆರಗು (ಸಂಪುಟ- ೧)’ ಕನ್ನಡದ ಝೆನ್ ಕತೆಗಳು ಲೇಖಕಿ ಜಿ.ಆರ್. ಪರಿಮಳಾ ರಾವ್ ಅವರ ಅನುವಾದಿತ ಕತಾ ಸಂಕಲನ. ಈ ಕೃತಿಗೆ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಝೆನ್ ಎಂದರೆ 'ಧ್ಯಾನ' ಎಂದೇ ಅರ್ಥ. ಇದು ಬೌದ್ಧ ಪರಂಪರೆಯ ಮಾತು. 'ಝೆನ್ ಬುದ್ಧಿಸಂ' ಒಂದುಂಟು. ನಾವು ಮಾಡುವ 'ಝೆನ್ ಮಂತ್ರ' ಕತೆಯ ಆಕಾರ ತಾಳಿದಾಗ ಎಷ್ಟೆಷ್ಟು ಬಗೆಯ ವೈವಿಧ್ಯತೆಗೆ ಅವಕಾಶ ಕೊಡುಬಹುದೆಂಬುದನ್ನು ಜಿ.ಆರ್. ಪರಿಮಳಾ ರಾವ್ ತಮ್ಮ 'ಝೆನ್ ಬೆರಗು' ಕತೆಗಳ ಮಾಲೆಯಲ್ಲಿ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
October 05, 2023
“ಎಲೆ ಮರೆಯ ಹಣ್ಣುಗಳು" - ಮರೆಯಲ್ಲೇ ಉಳಿದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಎನ್ನುತ್ತದೆ ಉಪಶೀರ್ಷಿಕೆ. ಇದರಲ್ಲಿರುವ ಒಂಭತ್ತು ಮಹಿಳೆಯರ ಸಂಕಟಗಳ ಕಥನ ಓದುವಾಗ ಕಣ್ಣು ಮಂಜಾಗುತ್ತದೆ. "ದೇವರು ನನಗೇ ಯಾಕೆ ಇಂತಹ ಕಷ್ಟ ಕೊಟ್ಟ?” ಎಂದು ಹಲುಬುವ ಎಲ್ಲರೂ, ಮುಖ್ಯವಾಗಿ ಮಹಿಳೆಯರು ಓದಲೇ ಬೇಕಾದ ಪುಸ್ತಕವಿದು. ಇವುಗಳ ಹಿನ್ನೆಲೆಯ ಬಗ್ಗೆ "ಓದುವ ಮುನ್ನ”ದಲ್ಲಿ ಲೇಖಕಿ ಬರೆದಿರುವ ಮಾತುಗಳು: “ಜೀವನದಲ್ಲಿ ಎಂದೋ ಕೇಳಿದ ಸುದ್ದಿಗಳು, ನಡೆದ ಘಟನೆಗಳು, ಭೆಟ್ಟಿಯಾದ ವ್ಯಕ್ತಿಗಳು ಎಲ್ಲವೂ ನನ್ನ ನೆನಪಿನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 04, 2023
ರವಿ ಬೆಳಗೆರೆಯವರ ಅಕಾಲ ನಿಧನದ ಬಳಿಕ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆದ, ಪ್ರಕಟವಾಗದೇ ಉಳಿದಿದ್ದ, ಅಪೂರ್ಣವಾಗಿದ್ದ ಬರಹಗಳು ಒಂದೊಂದಾಗಿ ಪುಸ್ತಕರೂಪದಲ್ಲಿ ಹೊರ ಬರುತ್ತಿದೆ. ಅದೇ ಸಾಲಿಗೆ ಸೇರುವ ಒಂದು ಪುಸ್ತಕ ಇತ್ತೀಚೆಗೆ ಹೊರ ಬಂದಿದೆ. ಈ ಪುಸ್ತಕದ ಬಹಳಷ್ಟು ವಿಷಯಗಳನ್ನು ರವಿ ಬೆಳಗೆರೆ ತಮ್ಮ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದಿದ್ದಾರೆ. ಒಂದು ಸಮಯದಲ್ಲಿ ನಕ್ಸಲ್ ಚಳುವಳಿಯ ಮೇಲೆ ಒಲವಿದ್ದ ರವಿ ಬೆಳಗೆರೆ ಪತ್ರಕರ್ತರಾಗಿದ್ದ ಸಮಯದಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಸ್ಥಾಪಕ…
ವಿಧ: ಪುಸ್ತಕ ವಿಮರ್ಶೆ
October 03, 2023
ಹದಿನೈದು ಸಣ್ಣ ಕತೆಗಳ ಪುಟ್ಟ ಪುಸ್ತಕ. ಎಲ್ಲ ಕತೆಗಳನ್ನು ಓದಿ ಮುಗಿಸಿದ ಬಳಿಕ ಪ್ರತಿ ಕಥೆಯ ಪಾತ್ರಗಳೂ ಕಾಡುತ್ತವೆ. ಕಾರಣ ಕತೆಗಾರ್ತಿ ಕಟ್ಟಿಕೊಟ್ಟ ಬಗೆಯೇ ಹಾಗಿದೆ. ಬಹುಶಃ ಉತ್ತರ ಕನ್ನಡ ಜಿಲ್ಲೆಯ ಓದುಗರಿಗೆ ಹೆಚ್ಚು ಆಪ್ತವಾಗುವ ಸಂಕಲನ ಇದು. ಇಲ್ಲಿಯ ಭಾಷೆ, ಜನ, ಕಥೆಯ ಜಗತ್ತು ಮತ್ತು ಅಲ್ಲಿಂದಲೇ ಹೆಕ್ಕಿ ತಂದಂತಿರುವ ಪಾತ್ರಗಳು ನಮ್ಮ ಊರಲ್ಲೇ ಇದ್ದವರು ಅನ್ನಿಸುವಂತಿದೆ. ಹಾಗೆ ನೋಡಿದರೆ ಪ್ರತಿ ಮನೆಯಲ್ಲೂ ಕತೆಗೊಂದು ಪಾತ್ರ ದೊರೆಯುತ್ತದೆ. ಎಷ್ಟೋ ಮನೆಯ ಕತೆ ಒಂದಕ್ಕೊಂದು ತೀರಾ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 01, 2023
ಇತ್ತೀಚೆಗೆ "ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ  ಭಾವಸಂಗ್ರಹ"  ಎಂಬ ಪುಸ್ತಕವು https://archive.org/details/mahabharata-tatparyanirnaya-bhavasangraha-sri-raghavendra-tirtha-raja.-s.-gururajacharya ಈ ಕೊಂಡಿಯಲ್ಲಿ ಸಿಕ್ಕಿತು.   ಮಹಾಭಾರತ ತಾತ್ಪರ್ಯ ನಿರ್ಣಯವು ದ್ವೈತ ತತ್ವಶಾಸ್ತ್ರದ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ವೈದಿಕ ಮಹಾಕಾವ್ಯ.  ಇದರಲ್ಲಿ ಮಹಾಭಾರತ ಅಷ್ಟೇ ಅಲ್ಲ, ರಾಮಾಯಣ ದ ಕಥೆಯೂ ಇದೆ. ಗೂಗಲ್ ಮಾಡಿದಾಗ ಅದು ವಿಷ್ಣು ಪಾರಮ್ಯವನ್ನು ಹೇಳುತ್ತದೆ ಎ೦ದು…
ಲೇಖಕರು: Kavitha Mahesh
ವಿಧ: ರುಚಿ
October 01, 2023
ದಪ್ಪ ತಳವಿರುವ ಪ್ಯಾನ್ (ಬಾಣಲೆ) ತೆಗೆದುಕೊಂಡು ಬಿಸಿ ಮಾಡಿ, ನಂತರ ಒಂದು ಚಮಚ ತುಪ್ಪ ಹಾಕಿ, ತುಪ್ಪ ಕರಗಿದಾಗ ತುಂಡರಿಸಿದ ಬಾದಾಮಿ, ಗೋಡಂಬಿ ಹಾಕಿ ಹುರಿದು ಒಂದು ಕಪ್ ಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ಅವುಗಳನ್ನು ತರಿತರಿಯಾಗಿ ರುಬ್ಬಿಕೊಳ್ಳಿರಿ. ಒಣ ಹಣ್ಣುಗಳನ್ನು ತರಿತರಿಯಾಗಿ ರುಬ್ಬಿದ ನಂತರ ಅದಕ್ಕೆ ಕೊಬ್ಬರಿ ಹಾಕಿ ಮತ್ತೆ ಪ್ಯಾನ್ ನಲ್ಲಿ ೨ ನಿಮಿಷ ಹುರಿಯಿರಿ. ಈಗ ನೀವು ಕಾಲು ಕಪ್ ತುಪ್ಪ ಹಾಕಿ, ಅದಕ್ಕೆ ಕಲ್ಲು ಸಕ್ಕರೆ, ನಂತರ ಹುಡಿ ಮಾಡಿಟ್ಟ ಒಣ ಹಣ್ಣುಗಳು ಹಾಕಿ ಸ್ವಲ್ಪ ಹುರಿದು…