ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 16, 2023
ಆಂಧ್ರಪ್ರದೇಶ ಮೂಲದ ವಲ್ಲೂರು ಹುಸೇನಿ ಅವರು ತಮ್ಮ “ಹುಸೇನಿ ದ್ವಿಪದಿಗಳು” ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಕವಿ, ವಿಮರ್ಶಕರೂ ಆದ ನಾಗೇಶ ಜೆ ನಾಯಕ ಇವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ವಲ್ಲೂರು ಹುಸೇನಿ ಅವರು ತಮ್ಮ ಲೇಖಕರ ನುಡಿ “ದಿಲ್ ಕೀ ಬಾತ್" ನಲ್ಲಿ ಮನದಾಳದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದು ಹೀಗೆ... “ಆಂಧ್ರ ಮೂಲದ 'ಹುಸೇನಿ' ಕೇವಲ 'ಕವಿ'ಯೆಂದೆನಿಸಿಕೊಳ್ಳಲು ಅವಸರದಿ ಕೃತಿ ಪ್ರಕಟಿಸಿದರೆಂದ ಹಿರಿಯರ ಮಾತಿಗೆ ಐದು ವರ್ಷಗಳ ಬೊಗಸೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 14, 2023
ತ್ರಿಕೋನ ಪ್ರೇಮದ ಕಥಾ ಹಂದರವನ್ನು ಹೊಂದಿರುವ "ಚಂದ್ರಮಾನೆ" ಎಂಬ ಕಾದಂಬರಿಯನ್ನು ಬರೆದವರು ಕಗ್ಗೆರೆ ಪ್ರಕಾಶ್. ಇವರು ತಮ್ಮ ಈ ಪುಟ್ಟ ಕಾದಂಬರಿಯಲ್ಲಿ ತ್ರಿಕೋನ ಪ್ರೇಮವನ್ನು ಬಹಳ ಸೊಗಸಾಗಿ ಹೇಳ ಹೊರಟಿದ್ದಾರೆ. ಈ ಬಗ್ಗೆ ಅವರೇ ತಮ್ಮ ಮಾತು ‘ನಿಮ್ಮೊಂದಿಗೆ..." ಇಲ್ಲಿ ಹೇಳಿದ್ದು ಹೀಗೆ… “ಕಥಾನಾಯಕ ‘ಚಂದ್ರ’ ಅರವತ್ತು ವರ್ಷ ವಯಸ್ಸಿನ ಗಂಡ. ಕಥಾನಾಯಕಿ ‘ಮಾನೆ’ ಐವತ್ತು ವರ್ಷದ ಹೆಂಡತಿ. ಇವರಿಬ್ಬರ ಜೋಡಿಯ ಕಾದಂಬರಿ ಶೀರ್ಷಿಕೆಯೇ ‘ಚಂದ್ರಮಾನೆ.’ ಇವರಿಬ್ಬರ ನಡುವೆ ವಿಲನ್‌ನಂತೆ ಬರುವ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
September 14, 2023
ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾದ ಕುವೆಂಪು ಅವರು ಬರೆದ ಒಂಭತ್ತು ಕತೆಗಳು ಈ ಸಂಕಲನದಲ್ಲಿವೆ. ಗ್ರಾಮೀಣ ಬದುಕನ್ನು ಕಟ್ಟಿ ಕೊಡುವ ಇಲ್ಲಿನ ಕೆಲವು ಕತೆಗಳಲ್ಲಿ ಕುವೆಂಪು ಅವರ ಬಾಲ್ಯದ ಅನುಭವಗಳ ಪ್ರಭಾವ ಗಾಢವಾಗಿದೆ. ಮೊದಲ ಕತೆ "ಸನ್ಯಾಸಿ". ಸಂಸಾರ ತೊರೆದು, ಸನ್ಯಾಸಿ ದೀಕ್ಷೆ ಪಡೆದು ನೆಮ್ಮದಿ ಕಂಡುಕೊಂಡ ಚೈತನ್ಯ ಅನಂತರ ಅಚಾನಕ್ ದ್ವಂದ್ವವನ್ನು ಎದುರಿಸಬೇಕಾಗುತ್ತದೆ. ತನ್ನ ಗುರುಗಳ ಆಶೀರ್ವಾದದಿಂದಲೇ ಆತನು ಆ ದ್ವಂದ್ವದಿಂದ ಹೊರಬರುವುದು ಈ ಕತೆಯ ಹಂದರ. ಅಧ್ಯಾತ್ಮದ ಹಾದಿಯಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 12, 2023
೧೯೭೫ರ ಜೂನ್ ೨೫ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತದೆ. ನಂತರದ ೬೩೫ ದಿನಗಳು ಭಾರತದ ಇತಿಹಾಸದ ಕರಾಳದಿನಗಳಾಗಿ ದಾಖಲಾಗಿವೆ. ಭಾರತದ ಪ್ರಜಾಪ್ರಭುತ್ವವನ್ನೂ, ಸ್ವಾತಂತ್ರ್ಯವನ್ನೂ ಅತಿಕ್ರಮಿಸಿ ನುಂಗಿದ ಸರ್ವಾಧಿಕಾರಿಯ ಆಜ್ಞೆಯಂತೆ ಭಾರತದ ಸಂವಿಧಾನಕ್ಕೆ ವಿರುದ್ಧವಾದ ರಾಜನೀತಿ, ಜನರ ಮನಸ್ಸಿನಲ್ಲಿ ಭಯಾತಂಕಗಳ ಕರಾಳ ನೆನಪುಗಳನ್ನು ಅಚ್ಚೊತ್ತಿ ಬಿಟ್ಟಿದೆ. ತುರ್ತು ಪರಿಸ್ಥಿತಿಯ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಹೊರಬಂದಿವೆ. ಈಗ ಹೊರಬಂದಿರುವ “ತುರ್ತು ಪರಿಸ್ಥಿತಿಯ ಕರಾಳ…
ವಿಧ: ರುಚಿ
September 12, 2023
ಹಳ್ಳಿಯಲ್ಲಿ ನೀರು ಮಾವಿನಕಾಯಿ ಎಂದು ಹೇಳುವುದಿದೆ. ಮೂರು ಮಧ್ಯಮಗಾತ್ರದ ಮಾವಿನಕಾಯಿಗಳನ್ನು ತೊಳೆದು ಸ್ವಲ್ಪ ಬೇಯಿಸಿಕೊಳ್ಳಬೇಕು. ಗಟ್ಟಿಯಾಗಿದ್ದರೆ ಕುಕ್ಕರಲ್ಲಿಯೂ ಬೇಯಿಸಬಹುದು. ತಣ್ಣಗಾದ ಮೇಲೆ ಬೇಯಿಸಿದ ಕಾಯಿಗಳನ್ನು ಹಿಚುಕಿಟ್ಟುಕೊಳ್ಳಬೇಕು. ಒಂದು ಬಾಣಲೆಗೆ ಒಗ್ಗರಣೆ ವಸ್ತುಗಳನ್ನು (ವಿಶೇಷವಾಗಿ ಚಿಟಿಕೆ ಜೀರಿಗೆ,ಉದ್ದಿನಬೇಳೆ,ನಾಲ್ಕು ಕಾಳು ಮೆಂತೆ)ಹಾಕಿ ಎಣ್ಣೆ ಅಥವಾ ತುಪ್ಪ ಸೇರಿಸಿ. ಕರಿಬೇವು, ಮೆಣಸು, ಬೆಳ್ಳುಳ್ಳಿ, ಇಂಗು, ಶುಂಠಿ ಸೇರಿಸಿ ಚೆನ್ನಾಗಿ ಹುರಿಯಬೇಕು. ಗಾಂಧಾರಿ ಮೆಣಸು…
ಲೇಖಕರು: Kavitha Mahesh
ವಿಧ: ರುಚಿ
September 10, 2023
ಖರ್ಜೂರದಲ್ಲಿರುವ ಬೀಜವನ್ನು ಮೊದಲಿಗೆ ಬಿಡಿಸಿ. ನಂತರ ಖರ್ಜೂರ, ಶುಂಠಿ, ಚಕ್ಕೆ, ಬೆಳ್ಳುಳ್ಳಿ, ಮೆಣಸಿನ ಹುಡಿ, ಏಲಕ್ಕಿ, ವಿನೆಗಾರ್, ಸಕ್ಕರೆ, ಉಪ್ಪು ಮೊದಲಾದುವುಗಳನ್ನು ಒಂದು ಪಾತ್ರೆಗೆ ಹಾಕಿ ಖರ್ಜೂರ ಗಟ್ಟಿಯಾಗುವವರೆಗೆ ಕುದಿಸಬೇಕು. ನಂತರ ಈ ಮಿಶ್ರಣವನ್ನು ಉರಿಯಿಂದ ತೆಗೆದು ಒಣದ್ರಾಕ್ಷಿ ಮತ್ತು ಹುಡಿ ಮಾಡಿದ ಬಾದಾಮಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಬಳಿಕ ಈ ಮಿಶ್ರಣ ಬಿಸಿಯಾಗಿರುವಾಗಲೇ ಗಾಜಿನ ಜಾಡಿಯಲ್ಲಿ ಹಾಕಿ ನಾಲ್ಕು ದಿನಗಳವರೆಗೆ ಮುಚ್ಚಿಟ್ಟು ಬಿಡಿ. ನಾಲ್ಕು ದಿನಗಳ ಬಳಿಕ ಜಾಡಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 09, 2023
‘ಚೋದ್ಯ’ ಅನುಪಮಾ ಪ್ರಸಾದ್‌ ಅವರ ಕಥಾಸಂಕಲನವಾಗಿದೆ. ಏಕಾಂತಕ್ಕಿಳಿದು ಬರೆಯಲು ತೊಡಗುವುದು.. ನಂತರ ಅದು ಬರೆಸಿಕೊಳ್ಳುತ್ತಾ ಹೋಗುವ ಪ್ರಕ್ರಿಯೆ.. ಮತ್ತೆಲ್ಲೊ ಒಂದು ಕಡೆ ಅದೇ ಕಂಡುಕೊಳ್ಳುವ ನಿಲುಗಡೆ.. ಇದೆಲ್ಲ ಸೇರಿದಾಗ ಸಿಗುವ ಮೊತ್ತವೇ ಕಥೆಯೆಂಬ ಚೋದ್ಯ ಅಂತಹ ಕೆಲವು ಈಗ ಮತ್ತೆ ನಿಮ್ಮ ಓದಿಗಾಗಿ ಕಾಯುತ್ತಿವೆ. ಕೈಗೆತ್ತಿಕೊಳ್ಳುವ ನಿಮಗೆ ಶರಣು. ಇಲ್ಲಿರುವ ಕಥೆಗಳಲ್ಲಿ ಕೆಲವು ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ ಹಾಗು ಮಯೂರ, ತುಷಾರ, ತರಂಗ ವಿಶೇಷಾಂಕ, ವಿಜಯವಾಣಿ ವಿಶೇಷಾಂಕ, ಸುಧಾ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
September 07, 2023
ಭಾರತ ಹಬ್ಬಗಳ ದೇಶ. ಇಲ್ಲಿ ಮಳೆಗಾಲದ ಹೊರತಾಗಿ ವರುಷದುದ್ದಕ್ಕೂ ಹಬ್ಬಗಳ ಸಂಭ್ರಮ. ಈ ಪುಸ್ತಕದಲ್ಲಿ ನಮ್ಮ ದೇಶದಲ್ಲಿ ವಿವಿಧ ಧರ್ಮದವರು ಆಚರಿಸುವ 15 ಹಬ್ಬಗಳನ್ನು ಪರಿಚಯಿಸಲಾಗಿದೆ. ವಿವಿಧ ಲೇಖಕರು ಬರೆದಿರುವ ಮಾಹಿತಿಪೂರ್ಣ ಲೇಖನಗಳನ್ನು ಎ.ಆರ್. ರಂಗರಾವ್ ಸರಳ ಭಾಷೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬುದ್ಧ ಪೂರ್ಣಿಮಾ, ಬಿಹು, ರಥ ಯಾತ್ರೆ, ರಕ್ಷಾ ಬಂಧನ್, ಓಣಂ, ಈದ್, ಗಣೇಶ ಚತುರ್ಥಿ, ದುರ್ಗಾ ಪೂಜೆ, ದಸರಾ, ದೀಪಾವಳಿ, ಕ್ರಿಸ್‌ಮಸ್, ಲೋಡಿ, ಪೊಂಗಲ್, ಹೋಳಿ, ನವರೋಜ್ - ಈ ಹಬ್ಬಗಳ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 07, 2023
ಕೇವಲ ೫೨ ಪುಟಗಳಲ್ಲಿ ಬಹಳ ಸೊಗಸಾದ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ ಉದಯೋನ್ಮುಖ ಕವಯತ್ರಿ ಡಿ. ಅರುಂಧತಿ. ಇವರು ಬರೆದ ಕವನಗಳ ಸಂಕಲನ “ಜೀವಜಾಲದ ಸಗ್ಗ” ದ ಬಗ್ಗೆ ಲೇಖಕರಾದ ಜಿ ವಿ ಆನಂದಮೂರ್ತಿ ತಮ್ಮ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ... “ಸಾರ್ವಜನಿಕ ಜೀವನ, ದಲಿತ ಮತ್ತು ರೈತ ಚಳವಳಿಗಳೊಂದಿಗಿನ ನಿರಂತರ ಸಂಪರ್ಕ, ಮಹಿಳಾ ಸಂಘಟನೆ, ಸಾಹಿತಿ ಕಲಾವಿದರೊಂದಿಗೆ ಬೆರೆವ ಗುಣ, ನಿರ್ಲಕ್ಷಿತ ಸಮುದಾಯಗಳಿಗೆ ತೋರುವ ಕಾರುಣ್ಯ ಹಾಗೂ ವೈದ್ಯ ವೃತ್ತಿಯಲ್ಲಿ ಹಲವಾರು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 05, 2023
ನೀಲಿ ನಕ್ಷೆ’ ಅಮಿತಾ ಭಾಗವತ್‌ ಅವರ ರಚನೆಯ ಕಾದಂಬರಿಯಾಗಿದೆ. ಕಡಲ ಕಿನಾರೆಯಲ್ಲೆ ಹುಟ್ಟಿದ ನದಿಯಂಥ ಸರಯೂಳ, ಕಾಣದ ಕಡಲ ಕಡೆಗಿನ ತುಡಿತದ ಹೊಳಪಿನ ಕಥನ ಇದು. ಲವಲವಿಕೆಯ ಸಣ್ಣ ಊರಾದ ಕಾರವಾರದಿಂದ, ಹತ್ತನೇ ತರಗತಿಯ ನಂತರ, ಕೇವಲ ಸಿನೆಮಾದಲ್ಲಷ್ಟೆ ಕಂಡಿದ್ದ ಮುಂಬಯಿ ಶಹರಕ್ಕೆ ಬಂದ ಹುರುಪಿನ ಕಿಶೋರಿ ಸರಯೂ, ಆ ಮಹಾನಗರದ 'ಮಗಜಮಾರಿ'ಯ ಗೌಜಿಯಲ್ಲಿ ತನ್ನ ಹೆಜ್ಜೆ ದನಿಗಳನ್ನು ಹೊಸದಾಗಿ ಆಲಿಸುತ್ತ, 'ಕಿಟಕಿಯನ್ನು ಒದ್ದೆ ಬಟ್ಟೆಯಿಂದ ಒರೆಸುತ್ತ', ರೂಪುಗೊಂಡ ನಿಬಿಡ ಆವರಣ ಇದು. ಸಮಾಜ ಹೇರುವ ಅಯಾಚಿತ…