ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 02, 2023
ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರು ತಮ್ಮ ಸಂಪಾದಕತ್ವದ ‘ವಿಶ್ವವಾಣಿ' ಪತ್ರಿಕೆಯ ಸಂಪಾದಕೀಯ ಕಾಲಂನ ಕೊನೆಯಲ್ಲಿ ಬರೆಯುತ್ತಿರುವ ಪುಟ್ಟ ಪುಟ್ಟ ಬರಹಗಳೇ 'ಸಂಪಾದಕರ ಸದ್ಯಶೋಧನೆ'. ಈ ಬರಹಗಳನ್ನು ತಲಾ ನೂರು ಅಧ್ಯಾಯಗಳಂತೆ ಸಂಗ್ರಹಿಸಿ ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ. ಈ ಮೂರೂ ಪುಸ್ತಕಗಳಲ್ಲಿ ಯಾವುದನ್ನು ಬೇಕಾದರೂ ಮೊದಲು ಓದಬಹುದು. ಪುಸ್ತಕದಲ್ಲೂ ಯಾವ ಪುಟದಿಂದಲೂ ನಿಮ್ಮ ಓದನ್ನು ಪ್ರಾರಂಭಿಸಬಹುದಾಗಿದೆ ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ಇದು ನಿಜವೂ ಹೌದು.  ಕಡಿಮೆ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
September 01, 2023
ಕರಕುಶಲ ಕಲೆಗಳು ಅಥವಾ ಗುಡಿಗಾರಿಕೆ ನಮ್ಮ ಸಂಪನ್ನ ಪರಂಪರೆಯ ಭಾಗ. ಭಾರತದ ಪ್ರತಿಯೊಂದು ರಾಜ್ಯವೂ ಅಲ್ಲಿನ ವಿಶೇಷ ಕರಕುಶಲ ಕಲೆಗೆ ಜಗತ್ಪ್ರಸಿದ್ಧ. ಕರಕುಶಲಗಾರರು ರಚಿಸುವ ಕರಕುಶಲ ವಸ್ತುಗಳು ನೋಡಲು ಚಂದ ಮಾತ್ರವಲ್ಲ ಬಳಕೆಗೂ ಅನುಕೂಲವಾದವುಗಳು. ಅವು ಬದುಕಿಗೂ ಒಂದು ಅರ್ಥ ಕೊಡುತ್ತವೆ ಎಂಬುದೇ ಅವುಗಳ ವಿಶೇಷತೆ. ಈ ಪುಟ್ಟ ಪುಸ್ತಕದಲ್ಲಿ ನಮ್ಮ ದೇಶದ ವಿವಿಧ ರಾಜ್ಯಗಳ ಕರಕುಶಲ ಕಲೆ ಹಾಗೂ ಆ ಕುಶಲಕರ್ಮಿಗಳು ನಿರ್ಮಿಸುವ ವಸ್ತುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ರಾಮಾಯಣ ಕಾಲದಿಂದಲೂ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 31, 2023
ನಾಟಕಗಳನ್ನು ಬರೆದು, ಮುದ್ರಿಸಿ ಹೊರತರುವ ನಾಟಕಕಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಬಹುಷಃ ಇದಕ್ಕೆ ಕಾರಣ ಬರೆದ ನಾಟಕಗಳು ರಂಗದ ಮೇಲೆ ಪ್ರದರ್ಶನ ಕಾಣುವುದು ಬಹಳ ಕಡಿಮೆ. ಈ ಕಾರಣದಿಂದ ಬರೆದ ನಾಟಕಗಳು ಪ್ರದರ್ಶನದ ಭಾಗ್ಯವಿಲ್ಲದೆ ಸೊರಗತೊಡಗಿವೆ. ದಶಕಗಳ ಹಿಂದೆ ರಂಗ ಮಂದಿರಗಳಲ್ಲಿ ಬಹಳಷ್ಟು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಈಗ ಇವುಗಳ ಸಂಖ್ಯೆ ಬೆರಳೆಣಿಕೆಯಷ್ಟು.  ಭರವಸೆಯ ನಾಟಕಕಾರ ಎನ್ ಸಿ ಮಹೇಶ್ ಅವರು ಬರೆದ ‘ಸಾಕು ತಂದೆ ರೂಮಿ' ಎಂಬ ನಾಟಕ ಪುಸ್ತಕ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 29, 2023
೨೦೧೮ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಚಿ.ಶ್ರೀನಿವಾಸರಾಜು ದತ್ತಿ ಪ್ರಶಸ್ತಿ ಪಡೆದ ಕೃತಿ ಕವಯತ್ರಿ ಸ್ಮಿತಾ ಮಾಕಳ್ಳಿ ಅವರ ‘ಒಂದು ಅಂಕ ಮುಗಿದು’. ಈ ಕೃತಿಗೆ ಡಾ.ಹೆಚ್.ಎಲ್. ಪುಷ್ಪ ಅವರ ಮುನ್ನುಡಿ ಹಾಗೂ ಸುಬ್ಬು ಹೊಲೆಯಾರ್ ಅವರ ಬೆನ್ನುಡಿ ಬರಹಗಳಿವೆ. ಸುಮಾರು ೧೦೬ ಪುಟಗಳ ಈ ಚೊಚ್ಚಲ ಕವನ ಸಂಕಲನದ ಕವಿತೆಗಳು ಬಹಳ ಸೊಗಸಾಗಿವೆ. ಕೃತಿಗೆ ಮುನ್ನುಡಿ ಬರೆದ ಡಾ ಹೆಚ್ ಎಲ್ ಪುಷ್ಪ ಅವರ ಮಾತುಗಳನ್ನು ಆಯ್ದು ಇಲ್ಲಿ ನೀಡಲಾಗಿದೆ... “ಸ್ಮಿತಾ ಮಾಕಳ್ಳಿಯವರ ಚೊಚ್ಚಲ ಕವನ ಸಂಕಲನದಲ್ಲಿ ಇಂತಹ ನಿರ್ಜನ…
ಲೇಖಕರು: Kavitha Mahesh
ವಿಧ: ರುಚಿ
August 27, 2023
ಮೈದಾಹಿಟ್ಟಿಗೆ ಉಪ್ಪು, ಅಜ್ವಾನ, ಎರಡು ಚಮಚ ಅಡುಗೆ ಎಣ್ಣೆ ಹಾಗೂ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಇಪ್ಪತ್ತು ನಿಮಿಷಗಳ ಕಾಲ ತೆಗೆದಿಡಿ. ಕೊತ್ತಂಬರಿ ಕಾಳು (ಧನಿಯಾ), ಜೀರಿಗೆ ಹಾಗೂ ಸೋಂಪನ್ನು ಹುಡಿ ಮಾಡಿ. ಪಾತ್ರೆಯೊಂದಕ್ಕೆ ಮೂರು ಚಮಚ ಅಡುಗೆ ಎಣ್ಣೆ, ಈರುಳ್ಳಿ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಡಲೆ ಹಿಟ್ಟು, ಮೆಣಸಿನ ಹುಡಿ, ಗರಂ ಮಸಾಲೆ, ಕಾಳುಮೆಣಸಿನ ಹುಡಿ, ಅರಸಿನ ಹುಡಿ, ಇಂಗು ಹಾಗೂ ಈಗಾಗಲೇ ಹುಡಿ ಮಾಡಿಟ್ಟುಕೊಂಡ ಹುಡಿಗಳನ್ನು ಸೇರಿಸಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 26, 2023
‘ನೀರು” ನಾ.ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆಯಾಗುತ್ತದೆ. ನಾ. ಮೊಗಸಾಲೆಯವರ ಕಾದಂಬರಿಗಳು ವಿಶೇಷವಾಗುವುದೇ ಈ ಹೊಳವಿನಿಂದ. ಅವರ ಎಲ್ಲ ಸಾಮಾಜಿಕ ಪ್ರಯೋಗಗಳ ಉತ್ಪನ್ನವಾಗಿ ಸೀತಾಪುರ ಕಾಣಿಸಿಕೊಳ್ಳುತ್ತದೆ. ಪುರಾಣ, ಇತಿಹಾಸ ಪೂರ್ವ ಮತ್ತು ಪ್ರಸ್ತುತ ಭಾರತಗಳು ಅವರ ಸೀತಾಪುರವೆಂಬ ಬಿಂದುವಿನಲ್ಲಿ ಅಭಿಗಮಿಸುತ್ತವೆ. ಸೀತಾಪುರವು ತನ್ನ ರಕ್ತದಲ್ಲೇ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 25, 2023
ಇದು ಒಂದು ಪುಟ್ಟ ಅಂದರೆ 150 ಪುಟಗಳ ಒಂದು ಐತಿಹಾಸಿಕ ಕಾದಂಬರಿ. ಇದನ್ನು ಓದಲು pustaka.sanchaya.net ಅಂತರ್ಜಾಲತಾಣದಲ್ಲಿ 'ಈಶ ಸಂಕಲ್ಪ' ಎಂದು ಹುಡುಕಿದರೆ ಸಿಗುತ್ತದೆ. ದಕ್ಷಿಣ ಭಾರತವನ್ನೆಲ್ಲ ಗೆದ್ದು ದಕ್ಷಿಣಾಪಥೇಶ್ವರ ಎಂದು ಕರೆಸಿಕೊಂಡ, ಕರ್ನಾಟಕ ಸಾಮ್ರಾಜ್ಯದ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯು ಉತ್ತರಾಪಥ (ಉತ್ತರ ಭಾರತ)ದ ಚಕ್ರವರ್ತಿ ಹರ್ಷವರ್ಧನನ ಜತೆಗೆ ತನ್ನ ಸಾಮ್ರಾಜ್ಯದ ಉತ್ತರದ ಸೀಮೆ ಗೋದಾವರಿ ನದಿಯಲ್ಲ ಆದರೆ ನರ್ಮದಾ ನದಿ ಎಂದು ಸಾಧಿಸಲು ಯುದ್ಧ ಮಾಡಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 24, 2023
ನವೀನ್ ಸೂರಿಂಜೆ ಅವರು ಬರೆದ ‘ನೇತ್ರಾವತಿಯಲ್ಲಿ ನೆತ್ತರು' ಕೃತಿ ರಕ್ತಸಿಕ್ತ ಹೋರಾಟದ ಸಮಗ್ರ ಚಿತ್ರಣವನ್ನು ನೀಡುತ್ತದೆ. ೧೮೪ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ಎಸಿಪಿ ಬಿ.ಕೆ.ಶಿವರಾಂ ಅವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ...  “ನವೀನ್ ಸೂರಿಂಜೆಯವರು ತಮ್ಮ `ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕಕ್ಕೆ ಮುನ್ನುಡಿ ಬರೆಯಲು ಹೇಳಿದಾಗ ಒಂದು ಕ್ಷಣ ತಬ್ಬಿಬ್ಬಾದೆ. ಈ ಪುಸ್ತಕವನ್ನು ಕರ್ನಾಟಕ ಕಂಡ ಮಾನವೀಯ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
August 24, 2023
ನಮ್ಮ ಭಾರತದ ಸಾವಿರಾರು ವರುಷ ಪುರಾತನ “ಸಾರ್ವಕಾಲಿಕ ಪುಸ್ತಕ”ಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕ ಇದು. ಇದನ್ನು ಬರೆದವರು ಮನೋಜ್ ದಾಸ್ ಮತ್ತು ಕನ್ನಡಕ್ಕೆ ಅನುವಾದಿಸಿದವರು ಪ್ರಖ್ಯಾತ ಸಾಹಿತಿ ಹಾಗೂ ಕವಿ ಎಂ. ಗೋಪಾಲಕೃಷ್ಣ ಅಡಿಗರು. ಸುಕುಮಾರ್ ಚಟರ್ಜಿ ರಚಿಸಿದ ಚಂದದ ಚಿತ್ರಗಳು ಪುಸ್ತಕಕ್ಕೆ ಮೆರುಗು ನೀಡಿವೆ. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಪುರಾಣಗಳು, ತಿರುಕುರಳ್, ಕಥಾಸರಿತ್ಸಾಗರ, ಪಂಚತಂತ್ರ ಮತ್ತು ಜಾತಕ ಕತೆಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
August 22, 2023
“ವಿನೋದಕ್ಕಾಗಿ ಹೇಳಿದ ಮಾತುಗಳನ್ನು ನಿಜಾರ್ಥದಲ್ಲಿ ಗಂಭೀರವಾಗಿ ಪರಿಗಣಿಸಬೇಡಿ.” ಎನ್ನುವ ಮಾತನ್ನು ಪುಸ್ತಕದ ಮೊದಲ ಪುಟಗಳಲ್ಲೇ ಓದುಗರ ಗಮನಕ್ಕೆ ತಂದಿದ್ದಾರೆ ನ್ಯಾಯವಾದಿಗಳೂ, ಲೇಖಕರೂ ಆಗಿರುವ ಕೆ ಎಂ ಕೃಷ್ಣ ಭಟ್. “ಕುದುರೆ ವ್ಯಾಪಾರ" ಎನ್ನುವ ಲಲಿತ ಪ್ರಬಂಧಗಳ ಕೃತಿಯನ್ನು ಹೊರತಂದಿರುವ ಇವರ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಲೇಖಕರಾದ ಡಾ. ವಸಂತಕುಮಾರ ಪೆರ್ಲ. ಅವರು ತಮ್ಮ ಮುನ್ನುಡಿಯಲ್ಲಿ “ಕೆ ಎಂ ಕೃಷ್ಣ ಭಟ್ಟರು ಕಾಸರಗೋಡು ಜಿಲ್ಲೆಯ ನೀರ್ಚಾಲು ಪ್ರದೇಶದವರು. ೮೩ರ ಈ ಇಳಿವಯಸ್ಸಿನಲ್ಲಿ…