ಎಲ್ಲ ಪುಟಗಳು

ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
October 26, 2023
ಮೈಸೂರಿನ ಪ್ರಸಿದ್ಧ ಕೌನ್ಸಿಲರ್ ಡಾ. ಮೀನಗುಂಡಿ ಸುಬ್ರಹ್ಮಣ್ಯಂ ಹತ್ತು ಸಮಸ್ಯಾವರ್ತನೆಗಳನ್ನು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ. 1996ರಲ್ಲಿ ನಾನು ಓದಿದ್ದ ಈ ಪುಸ್ತಕವನ್ನು ಓದಬೇಕೆಂದು ಕಳೆದ ಸುಮಾರು ಮೂರು ದಶಕಗಳಲ್ಲಿ ಸಾವಿರಾರು ಜನರಿಗೆ ನಾನು ಶಿಫಾರಸ್ ಮಾಡಿದ್ದೇನೆ. ಯಾಕೆಂದರೆ, ಪುಸ್ತಕದ ಶೀರ್ಷಿಕೆ, “ಈ ವರ್ತನೆಗಳು ನಿಮ್ಮಲ್ಲಿ ಇವೆಯೇ?” ಎಂದು ಕೇಳುತ್ತಿಲ್ಲ, ಬದಲಾಗಿ “... ಎಷ್ಟಿವೆ?” ಎಂದು ಕೇಳುತ್ತಿದೆ. “ಅದು ಯಾಕೆ?" ಎಂಬುದನ್ನು ಲೇಖಕರು ಮುನ್ನುಡಿಯಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 25, 2023
ಖ್ಯಾತ ಇಟಾಲಿಯನ್ ಸಾಹಿತಿ ಒರಿಯಾನಾ ಪಲಾಚಿ ಅವರ ಕಾದಂಬರಿ “LETTER TO A CHILD NEVER BORN” ಎಂಬ ಪುಟ್ಟ ಕಾದಂಬರಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದಾರೆ ಜಾನ್ ಶೆಪ್ಲಿ ಎಂಬವರು. ಈ ಇಂಗ್ಲೀಷ್ ಕಾದಂಬರಿಯನ್ನು ಮೂಲಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕನ್ನಡ ಭಾಷೆಗೆ ಅನುವಾದ ಮಾಡಿದ್ದಾರೆ ಲೇಖಕಿ ಸುಧಾ ಆಡುಕಳ. ಅವರು ತಮ್ಮ ಅನುವಾದಿತ ‘ಎಂದೂ ಹುಟ್ಟದ ಮಗುವಿಗೆ ಪತ್ರ’ ಕೃತಿಯ ಕುರಿತು ವ್ಯಕ್ತ ಪಡಿಸಿದ ಭಾವ ಹೀಗಿದೆ... “ಪ್ರಪಂಚದಷ್ಟೇ ಪುರಾತನವಾದ ಪ್ರಶ್ನೆಗಳಿಗೆ ಉತ್ತರವನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 23, 2023
ಫಕೀರ ಕಾವ್ಯನಾಮದ ಶ್ರೀಧರ ಬನವಾಸಿ ಇವರು ಬರೆದ ಕವನ ಸಂಕಲನ ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ' ಎಂಬ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಪ್ರದೀಪಕುಮಾರ್ ಹೆಬ್ರಿ ಇವರು. ಇವರು ಶ್ರೀಧರರ ಕವನಗಳನ್ನು ಬಹಳ ಸೊಗಸಾಗಿ ಅನಾವರಣ ಮಾಡುತ್ತಾ ಮುನ್ನುಡಿಯನ್ನು ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಗಿ… ತಮ್ಮ ಕೃತಿಗಳ ಮೂಲಕ ಕನ್ನಡನಾಡಿನ ಓದುಗರಿಗೆ ಈಗಾಗಲೇ ಪರಿಚಿತರಾಗಿರುವ ಕವಿ ಶ್ರೀಧರ ಬನವಾಸಿ ಅವರು ತಮ್ಮ `ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಕವನ ಸಂಕಲನಕ್ಕೆ…
ಲೇಖಕರು: Kavitha Mahesh
ವಿಧ: ರುಚಿ
October 22, 2023
ಆಲೂಗಡ್ಡೆಯನ್ನು ಕತ್ತರಿಸಿ ಅದರ ಮೇಲೆ ಉಪ್ಪು ಹಾಕಿ ಬದಿಯಲ್ಲಿ ತೆಗೆದಿಡಬೇಕು. ಮೆಂತೆ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹುರಿದು ಅದರ ಜೊತೆ ಹುಣಸೆ ಹುಳಿಯನ್ನು ಸೇರಿಸಿ ಪೇಸ್ಟ್ ರೀತಿ ಮಾಡಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಆಲೂಗಡ್ಡೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು.  ಈಗ ಒಂದು ಚಿಕ್ಕ ಬಾಣಲೆಗೆ ೪-೫ ಚಮಚ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಇಂಗು ಮತ್ತು ಮೊದಲೇ ಮಾಡಿಟ್ಟ ಮೆಂತೆ, ಸಾಸಿವೆ ಪೇಸ್ಟ್ ಹಾಕಿ ಸ್ವಲ್ಪ ಉಪ್ಪು ಹಾಕಬೇಕು. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಹಾಕಿ ೫-೬…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 20, 2023
ಉನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳು ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಬಹಳ ಅಪರೂಪ. ಕೆಲವರು ಸಚಿವರು ಮತ್ತು ಮುಖ್ಯಮಂತ್ರಿಗಳಾಗಿರುವವರು ತಾವು ಅಧಿಕಾರದಲ್ಲಿದ್ದ ಸಮಯದಲ್ಲಿ ತಮ್ಮ ಇಲಾಖೆಯ, ಸರಕಾರದ ಸಾಧನೆಗಳನ್ನು ಡಂಗೂರ ಸಾರಲು ಬೇರೆ ಲೇಖಕರಿಂದ ಲೇಖನಗಳನ್ನು ಬರೆಯಿಸಿ ಪತ್ರಿಕೆಗಳಿಗೆ ರವಾನಿಸುತ್ತಾರೆ. ಆದರೆ ರಾಜಕಾರಣಿಯಾಗಿ, ಮಹತ್ವದ ಹುದ್ದೆಗಳಲ್ಲಿ ಇರುವ ಕೆಲವೇ ಕೆಲವು ಅಪರೂಪದ ಬರಹಗಾರರು ನಮ್ಮ ನಡುವೆ ಇದ್ದಾರೆ. ಅದರಲ್ಲಿ ಪ್ರಮುಖರಾದವರು ಪ್ರಸ್ತುತ ಗೋವಾದ ರಾಜ್ಯಪಾಲರಾಗಿರುವ ಪಿ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
October 19, 2023
ತಮ್ಮ ಜೀವನಾನುಭವವನ್ನು ಭಟ್ಟಿಯಿಳಿಸಿ “ಪುಟ್ಟ ತಮ್ಮನ ಕಗ್ಗ"ದಲ್ಲಿ ನಮಗೆ ಧಾರೆಯೆರೆದಿದ್ದಾರೆ ಅನಂತ ಭಟ್ ಪೊಳಲಿ ಅವರು. ನಾಲ್ಕುನಾಲ್ಕು ಸಾಲಿನ ಇಲ್ಲಿನ ಮುಕ್ತಕಗಳನ್ನು ಓದುವಾಗ ಕವಿತೆ ಇವರಿಗೆ ಒಲಿದು ಬಂದಿದೆ ಎಂಬುದು ಎದ್ದು ಕಾಣಿಸುತ್ತದೆ. ಅನಾಯಾಸವಾಗಿ ಮೂಡಿ ಬಂದಿರುವ ಚಿಂತನೆಗಳು ನಮ್ಮ ಮನ ಬೆಳಗಿಸುತ್ತವೆ. "ನನ್ನ ನುಡಿ"ಯಲ್ಲಿ ಇವು “ಮಿಣುಕು ದೀಪಗಳ ಬೆಳಕ ಹಚ್ಚುವ" ಪ್ರಯತ್ನವೆಂದು ಇವುಗಳ ರಚನಾಕಾರ ಅನಂತ ಭಟ್ ಪೊಳಲಿ ಬರೆದಿದ್ದಾರೆ: “ಈ ಕೃತಿಯು ಒಂದು ಭಾವನಾತ್ಮಕವಾದ ವಿಷಯಗಳ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 18, 2023
“ಓದಿನ ಒಕ್ಕಲು” ಕೃತಿಯು ರಂಗನಾಥ ಕಂಟನಕುಂಟೆ ಅವರ ಸಾಹಿತ್ಯ ಚಿಂತನೆಯ ಬರೆಹಗಳ ಸಂಕಲನವಾಗಿದೆ. ಓದಿನ ಒಕ್ಕಲು' ಸಾಹಿತ್ಯ ಚಿಂತನೆಯ ಬರೆಹಗಳು, ಸಾಹಿತ್ಯದ ಮೂಲಕ ಸಮಾಜ, ಸಂಸ್ಕೃತಿ, ಅಧಿಕಾರ ರಾಜಕಾರಣ, ಭಾಷೆ, ಜನಪದ ಸಾಹಿತ್ಯ, ಹೆಣ್ಣು ಕಥನಗಳನ್ನು ಒಳಗೊಂಡಂತೆ ಲೋಕದ ಸ್ಥಾಪಿತ ಮೌಲ್ಯಗಳನ್ನು, ಬದುಕಿನ ವಿವಿಧ ಮಗ್ಗುಲುಗಳನ್ನು ಮುಖಾಮುಖಿಯಾಗಲು ಯತ್ನಿಸ ಲಾಗಿದೆ. ಸಾಹಿತ್ಯದ ನೆಲೆಯಲ್ಲಿ ನಿಂತು ಲೋಕಸಂವಾದ ಮತ್ತು ವ್ಯಕ್ತಿಯ ಒಳಸಂವಾದ ನಡೆಸಲಾಗಿದೆ. ಲೋಕಸಂವಾದ ನಡೆಸುತ್ತಲೇ ಸಾಹಿತ್ಯ ಸಂವಾದವನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 16, 2023
ಬಸಯ್ಯ ಸ್ವಾಮಿ ಕಮಲದಿನ್ನಿ (ಡಾ ಬಸಯ್ಯ ಸ್ವಾಮಿ) ಅವರು “ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ" ಎಂಬ ಮಾಹಿತಿಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಸುಮಾರು ೧೭೦ ಪುಟಗಳ ತಮ್ಮ ಕೃತಿಗೆ ಬಸಯ್ಯ ಸ್ವಾಮಿಯವರು ಬರೆದ ಲೇಖಕರ ಮಾತಿನಿಂದ ಆಯ್ದ ಸಾಲುಗಳು ಇಲ್ಲಿವೆ... ‘ದೊಡ್ಡ ಕಣ್ಣಿಂದ ಹಿಂದೂಸ್ಥಾನವೆಲ್ಲ ತನ್ನದು' ಎಂಬ ಹೆಮ್ಮೆ ಕೊಚ್ಚಬಹುದಾದರೂ ಯಾವುದನ್ನು ಮುಟ್ಟಿದರೂ ತನ್ನದಲ್ಲ ಎಂಬ ಭಾವ”– ಚಿಗುರಿದ ಕನಸು “ಒಬ್ಬ ಮನುಷ್ಯ ತನ್ನ ದೇಶವನ್ನು ಏಕೆ ಪ್ರೀತಿಸುತ್ತಾನೆ? ಏಕೆಂದರೆ ಅಲ್ಲಿ ರೊಟ್ಟಿ…
ಲೇಖಕರು: Kavitha Mahesh
ವಿಧ: ರುಚಿ
October 15, 2023
ಮೈದಾಹಿಟ್ಟು, ರವೆ ಮತ್ತು ಅಕ್ಕಿಹಿಟ್ಟನ್ನು ಮಿಶ್ರ ಮಾಡಿ, ಸ್ವಲ್ಪ ತುಪ್ಪ, ನೀರು ಸೇರಿಸಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಮತ್ತೊಂದು ಬಾಣಲೆಗೆ ಅರ್ಧ ಕಪ್ ನೀರು, ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಿ. ಸಕ್ಕರೆ ಪಾಕಕ್ಕೆ ಬರುತ್ತಿದ್ದಂತೆಯೇ ಕೇಸರಿ ಬಣ್ಣ, ಏಲಕ್ಕಿ ಹುಡಿ ಸೇರಿಸಿ ಕಲಸಿ ಒಲೆಯಿಂದ ಕೆಳಗಿಳಿಸಿಟ್ಟುಕೊಳ್ಳಬೇಕು.  ಈಗಾಗಲೇ ತಯಾರಿಸಿಟ್ಟ ಮಿಶ್ರಣದಿಂದ ತೆಳುವಾದ ಪೂರಿಯನ್ನು ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಚಿ ಅಂಚುಗಳನ್ನು ಸಮನಾಗಿ ಒತ್ತಿ. ಈಗ ಲಟ್ಟಿಸಿದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 13, 2023
ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರು ಬರೆದಿರುವ “ಹೆಣ್ಣಾಲದ ಮರ" ಎನ್ನುವ ಕವನ ಸಂಕಲನ ಇತ್ತಿಚೆಗೆ ಬಿಡುಗಡೆಯಾಗಿದೆ. ಸುಮತಿಯವರ ಕವನಗಳ ಬಗ್ಗೆ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿಯವರು ತಾವು ಬರೆದ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ... “ಸುಮತಿ ಕೃಷ್ಣಮೂರ್ತಿ ತಮ್ಮ ಅಪಾರವಾದ ಕಾವ್ಯ ಪ್ರೀತಿಯಿಂದ ನನಗೆ ಪ್ರಿಯರಾದವರು. ಹಿಂದಿನಿಂದ ಗೊತ್ತಾದದ್ದು ಅವರು ಸ್ವತಃ ಒಳ್ಳೆಯ ಕವಿ ಎಂಬುದು. ತಮ್ಮ ಕವಿತೆಗಳ ಹಸ್ತ ಪ್ರತಿ ಕಳಿಸಿ ಮುನ್ನುಡಿಯಾಗಿ ಕೆಲವು ಮಾತು ಬರೆದುಕೊಡುವಿರಾ…