ಎಲ್ಲ ಪುಟಗಳು

ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
January 11, 2008
ಜಾಗತೀಕರಣವೆಂಬ ಪೌರುಷ ರಾಜಕಾರಣ ಕಳೆದ ಹತ್ತು ತಿಂಗಳಿಂದ ಸತತವಾಗಿ ಬರೆಯುತ್ತಿದ್ದ 'ವಾರದ ಒಳನೋಟ' ಅಂಕಣಕ್ಕೆ ಹಲವು ರೀತಿಯ ಒತ್ತಡಗಳು ಹಾಗೂ ಮಾನಸಿಕ ಆಯಾಸದ ಕಾರಣಗಳಿಂದಾಗಿ ಅಂತ್ಯ ಹಾಡುವ ಆಲೋಚನೆಯಲ್ಲಿದ್ದಾಗ, ಪತ್ರಿಕೆಯ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆಯವರು ಕಳೆದ ಸಂಚಿಕೆಯಲ್ಲಿ ಕುಪ್ಪಳ್ಳಿಯಲ್ಲಿ ನಡೆದ ಸಮಾಜವಾದಿ ಅಧ್ಯಯನ ಶಿಬಿರದ ಬಗ್ಗೆ ಬರೆದು ನನ್ನನ್ನು ಈ ವಾರದ ಮಟ್ಟಿಗಾದರೂ ಬರೆಯಲು ಪ್ರಚೋದಿಸಿದ್ದಾರೆ. ಮೊದಲಿಗೆ ರೇಷ್ಮೆಯವರ ಬರಹಕ್ಕೆ ಒಂದು ತಿದ್ದುಪಡಿ: ಕುಪ್ಪಳ್ಳಿಯ…
ಲೇಖಕರು: poornimas
ವಿಧ: Basic page
January 11, 2008
ಜೀವನ ------ ರೀತಿಯಂತೆ, ನೀತಿಯಂತೆ ಯಾರು ವಿಧಿಸಿದರು ಸ್ವಾಮಿ ಬದುಕಿಗೊಂದು ಅಳತೆ ಮಾಪನ. ಅಳತೆಗೆ ಸಿಕ್ಕುವುದಲ್ಲ, ಅನುಭೂತಿಗೆ ದಕ್ಕುವುದು ಜೀವನ. ಮೂರ್ಖತನ --------- ಬೊಚ್ಚುಬಾಯಿಂದ ಬೊಚ್ಚುಬಾಯಿಗೆ ಬೆಳದಿಂಗಳನ್ನೇ ಅಂಗೈಲಿ ಹಿಡಿದಿಟ್ಟಂತೆ ಬದುಕಿದ ಶತಾಯುಷಿಗೆ ಕೊಡುಗೆ ’ಬದುಕಲು ಕಲಿಯಿರಿ’ ಹೊತ್ತಗೆ !
ಲೇಖಕರು: agilenag
ವಿಧ: Basic page
January 11, 2008
ಆಂಜನೇಯ ಅವರ ಸಾಹಿತ್ಯ ಸೇವೆ: ಬೆಂಗಾಳೂರ ಭಾಗ್ಯಲಕ್ಷ್ಮಿ ನಾಟಕ ಪ್ರಕಟಣೆಗೊಂಡಿದೆ. ಬೆಂಗಳೂರು ನಿರ್ಮಾಪಕ ರಾಜಾ ಕೆಂಪೇಗೌಡ, ಸಾಮ್ರಾಟ್ ಶ್ರೀಪುರುಷ (ಐತಿಹಾಸಿಕ) ಯಮಬಂಧು (ಹಾಸ್ಯಭರಿತ ನೀತಿಪ್ರಧಾನ), ಬೆಂಗಳೂರಿನಿಂದ ದೆಹಲಿಗೆ (ಪ್ರವಾಸ ಕಥನ) ಇದಲ್ಲದೆ ಸುಮಾರು ೩೦ಕ್ಕೂ ಹೆಚ್ಚು ಕವನಗಳು ಹಲವಾರು ಸಂಚಿಕೆಗಳಲ್ಲಿ ಪ್ರಕಟವಾಗಿವೆ. ನಾಟ್ಯರಾಗ ಎಂಬ ಹೆಸರಿನ ಇತಿಹಾಸಕ್ಕೆ ಸಂಬಂಧಿಸಿದ ಕವನಗಳನ್ನು ಸ್ವತಃ ರಚಿಸಿ, ಧ್ವನಿ ಸುರುಳಿಯಾಗಿ ಹೊರತಂದಿದ್ದಾರೆ. ಇವಲ್ಲದೆ ಹಲವಾರು ಐತಿಹಾಸಿಕ ಮತ್ತು…
ಲೇಖಕರು: agilenag
ವಿಧ: Basic page
January 11, 2008
ಆಂಜನೇಯ ಅವರ ಸಾಹಿತ್ಯ ಸೇವೆ: ಬೆಂಗಾಳೂರ ಭಾಗ್ಯಲಕ್ಷ್ಮಿ ನಾಟಕ ಪ್ರಕಟಣೆಗೊಂಡಿದೆ. ಬೆಂಗಳೂರು ನಿರ್ಮಾಪಕ ರಾಜಾ ಕೆಂಪೇಗೌಡ, ಸಾಮ್ರಾಟ್ ಶ್ರೀಪುರುಷ (ಐತಿಹಾಸಿಕ) ಯಮಬಂಧು (ಹಾಸ್ಯಭರಿತ ನೀತಿಪ್ರಧಾನ), ಬೆಂಗಳೂರಿನಿಂದ ದೆಹಲಿಗೆ (ಪ್ರವಾಸ ಕಥನ) ಇದಲ್ಲದೆ ಸುಮಾರು ೩೦ಕ್ಕೂ ಹೆಚ್ಚು ಕವನಗಳು ಹಲವಾರು ಸಂಚಿಕೆಗಳಲ್ಲಿ ಪ್ರಕಟವಾಗಿವೆ. ನಾಟ್ಯರಾಗ ಎಂಬ ಹೆಸರಿನ ಇತಿಹಾಸಕ್ಕೆ ಸಂಬಂಧಿಸಿದ ಕವನಗಳನ್ನು ಸ್ವತಃ ರಚಿಸಿ, ಧ್ವನಿ ಸುರುಳಿಯಾಗಿ ಹೊರತಂದಿದ್ದಾರೆ. ಇವಲ್ಲದೆ ಹಲವಾರು ಐತಿಹಾಸಿಕ ಮತ್ತು…
ಲೇಖಕರು: rameshbalaganchi
ವಿಧ: Basic page
January 11, 2008
ಎಷ್ಟೋ ದಿನಗಳವರೆಗೆ ಗುರು, ತನ್ನ ಧ್ಯೇಯದ ಪ್ರಾಮುಖ್ಯ, ಹೆನ್ರಿ ಅಲ್ಲಿಗೆ ಬಂದು ತನ್ನ ವೃತ್ತಪತ್ರಿಕೆಯಲ್ಲಿ ಆಶ್ರಮದ ಬಗ್ಗೆ ವರದಿ ಮಾಡಲೇಬೇಕಾದ ತುರ್ತು ಎಲ್ಲವನ್ನೂ ವಿವರಿಸುತ್ತ ನನ್ನಲ್ಲಿ ಸಹನೆಯಿಂದಿದ್ದ. ಕ್ರಮೇಣ ದಿನ ಕಳೆಯುತ್ತಿದ್ದಂತೆ ಹೆನ್ರಿಯು ಬರದಿದ್ದಾಗ ಅವನ ಧೋರಣೆ ಬದಲಾಯಿತು. "ಹೆನ್ರಿ ಏಕೆ ಬರಲಿಲ್ಲ? ನೀನು ಅವನಿಗೆ ಶಿಫಾರಸು ಮಾಡಿ ಬರೆಯಲಿಲ್ಲವೇ? ಆಶ್ರಮದಲ್ಲಿ ನಡೆಯುತ್ತಿರುವುದೆಲ್ಲ ಅವನಲ್ಲಿ ಆಸಕ್ತಿ ಮೂಡಿಸಬಹುದೆಂದು ನಿನಗೆ ಅನ್ನಿಸಲಿಲ್ಲವೇ? ಇದನ್ನೆಲ್ಲ ಪ್ರಪಂಚದ ಗಮನಕ್ಕೆ…
ಲೇಖಕರು: raghavendra.s
ವಿಧ: ಬ್ಲಾಗ್ ಬರಹ
January 11, 2008
ಚರ್ಚ್ ಗೇಟ್ ಸುತ್ತಮುತ್ತಲಿನ ಪ್ರದೇಶ ಮುಂಬೈನಲ್ಲಿ ವ್ಯಾಪಾರ ವಹಿವಾಟುಗಳಿಗೆ ಹೆಸರಾದ ಸ್ಥಳ. ಒಮ್ಮೆ ನಾನು ನನ್ನಿಬ್ಬರು ಸ್ನೇಹಿತರೊಂದಿಗೆ ಕೆಲವು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಚರ್ಚ್ ಗೇಟ್ ಪ್ರದೇಶಕ್ಕೆ ಹೊರಟೆವು. ಮಧ್ಯಾಹ್ನದ ಊಟ ಮುಗಿಸಿ, ಮುಂಬೈ ಲೋಕಲ್ ರೈಲನ್ನು ಹಿಡಿದು ಚರ್ಚ್ ಗೇಟ್ ತಲುಪುವ ಹೊತ್ತಿಗೆ ಗಂಟೆ ಐದಾಗಿತ್ತು. ಸ್ನೇಹಿತರಿಂದ ವರ್ಣನೆಗಳನ್ನು ಕೇಳಿ ಇದೇ ಮೊದಲನೇ ಬಾರಿ ಚರ್ಚ್ ಗೇಟ್ ಗೆ ಬೇಟಿಯಿತ್ತಿದ್ದಿದ್ದರಿಂದ ಸ್ವಲ್ಪ ಕುತೂಹಲವಿತ್ತು.…
ಲೇಖಕರು: shekarsss
ವಿಧ: ಬ್ಲಾಗ್ ಬರಹ
January 11, 2008
ದಿನವು ಹೊಸತು ಹೊಸತು ಬರಲಿ ಹಳೆಯ ನೆನಪುಗಳ ಸುಳಿವಿರದಿರಲಿ ಉಲ್ಲಾಸ, ಉತ್ಸಾಹ ಕುಂದದಿರಲಿ ಹುಡುಕಾಟ ಕೊನೆವರೆಗು ನಿಲ್ಲದಿರಲಿ ಕಲ್ಪನಾ ಲಹರಿ ಕೊನೆಯಾಗದಿರಲಿ ಸೃಜನಶೀಲ ಮನ ಮಟುಕಾಗದಿರಲಿ ಕಂಡ ಕನಸುಗಳು ಕಾಣದಾಗದಿರಲಿ ಅವತರಿಪ ಆಸೆಗಳಿಗೆ ಕಡಿವಾಣವಿರಲಿ ಅರಿವಿನ ಹಸಿವು ಹುಚ್ಚೆದ್ದು ಕುಣಿಯಲಿ ಒಲ್ಲದ ವಿಷಯಗಳು ತಲೆ ಕೆಡಸದಿರಲಿ ಬಲ್ಲವರ ಬಳಿಗೆ ಬಾಗಿಲು ತೆರೆದಿರಲಿ ಕೇಡುಗರ ಕಣ್ಣೋಟ ಇತ್ತ ಬೀರದಿರಲಿ ಅಧಿಕ ಐಶ್ವರ್ಯ ಎನಗೆ ಸಿಗದಿರಲಿ ಮಾನವೀಯತೆ ಎಂದೂ ಬೆಳಗುತಿರಲಿ ಸರಳತೆಯ ಬೇರುಗಳು…
ಲೇಖಕರು: kadalabhaargava
ವಿಧ: Basic page
January 11, 2008
ಎಂದಿನಂತೆ ಕಛೇರಿಯಿಂದ ಸರಿಯಾಗಿ 6:೦೦ ಗಂಟೆಗೆ ಹೊರಟೆ ಮಾರನೆದಿನ ಗೌರಿ ಹಬ್ಬವಾದ ಕಾರಣದಿಂದ ಎಲ್ಲರು ಬೇಗ ಹೊರಡಲು ಅನುವುಮಾಡಿಕೊಳ್ಳುತ್ತಿದ್ದರು. ಗೌರಿ ಹಾಗು ಗಣೇಶ ಹಬ್ಬವು ಶುಕ್ರವಾರ ಹಾಗು ಶನಿವಾರ ದಿನಗಳಂದು ಬಂದಿರುವುದರಿಂದ ಸಹೋದ್ಯೋಗಿಗಳೆಲ್ಲರು ಹಾರೈಸಿಕೊಳ್ಳುತ್ತಿದ್ದರು ಭಾನುವಾರವು ಸೇರಿಸಿ ಮೂರು ದಿವಸಗಳ ರಜೆ ಸಿಕ್ಕಿರುವುದರಿಂದ ಎಲ್ಲರು ಊರಿಗೆ ತೆರಳಲು ಕಾತುರರಾಗಿದ್ದರು.ಕಛೇರಿಯಿಂದ ಹೊರಬಿದ್ದ ಕೂಡಲೇ ಮುಖ್ಯ ರಸ್ತೆಗೆ ಬಂದೆ, ಕಛೇರಿಯು ಎಂ.ಜಿ.ರಸ್ತೆ ಹತ್ತಿರದ ಡಿಕೆನ್ಸ್ ನ್…
ಲೇಖಕರು: ishwar.shastri
ವಿಧ: ಬ್ಲಾಗ್ ಬರಹ
January 11, 2008
ನಾರಿ ಅಬಲೆಯೇ??? ಮಟಮಟ ಮಧ್ಯಾಹ್ನದಲ್ಲಿ ಎತ್ತಿನ ಗಾಡಿಯ ಕಬ್ಬಿನ ರಾಶಿಯ ಮೇಲೆ ಕುಳಿತು ಕಬ್ಬನ್ನು ಸಾಗಿಸುವ ಈ ಮಹಿಳೆಯ ಹೆಸರು ಬಿಯಾಮಾ ಹುಸೇನ ಸಾಹೇಬ ಶೇಖ ನಾಗರಾಳ ಇಲ್ಲಿ ಇವಳೊಬ್ಬಳೇ ಅಲ್ಲ, ಆ ಊರಿನ ಸಮಸ್ಥ ಮಹಿಳೆಯರದೂ ಇದೇ ಕಾಯಕ. ಬಿಸಿಲಿರಲಿ ಮಳೆಯಿರಲಿ ಕಡಿದ ಕಬ್ಬನ್ನು ಸಾಗಿಸುವುದೇ ಇವರ ಉದರಂಭರಣಕ್ಕೆ ದಾರಿ. ಜಾತಗಾರ್ ಜನಾಂಗದ ೫೦೦ ಮನೆಗಳಿರುವ ಈ ಊರಿನಲ್ಲಿ ಪ್ರತಿಯೊಂದು ಮನೆಗಳಲ್ಲೂ ಎತ್ತಿನ ಗಾಡಿ ಇದೆ. ಪ್ರತಿ ಮಹಿಳೆಗೂ ಎತ್ತಿನಬಗ್ಗೆ ಗೊತ್ತು. ಮದ್ಯಾನ್ಹದಲ್ಲಿ ನಿರ್ಜನ…
ಲೇಖಕರು: hpn
ವಿಧ: ಚರ್ಚೆಯ ವಿಷಯ
January 11, 2008
ಸಿಟೀಲಿ ಗುಬ್ಬಚ್ಚಿಗಳು ಮಾಯವಾದವು. ಗಮನಿಸಿದ್ದೀರಾ? ಇದೇ subtle ವಿಷಯದ ಸುತ್ತ ಹೆಣೆದಿರುವ ಕಥೆಯೊಂದು ಅರ್ಥಪೂರ್ಣ ಹಾಗೂ ಕಲಾತ್ಮಕ ಚಿತ್ರವಾಗಿ ಹೊರಬರಲಿದೆ. ಬಿ ಸುರೇಶ್ ರವರು ನಿರ್ಮಿಸುತ್ತಿರುವ "ಗುಬ್ಬಚ್ಚಿಗಳು" ಚಿತ್ರದ ನಿರ್ದೇಶಕ [:http://sampada.net/user/abhaya_simha|ಅಭಯ್ ಸಿಂಹ]. ಕಥೆ [:http://sampada.net/user/ismail|ಇಸ್ಮಾಯಿಲರದ್ದು]. ಈ ದಿನದ ಪ್ರಜಾವಾಣಿ ಹಾಗೂ [:http://www.kannadaprabha.com/NewsItems.asp?ID=KP220080110043022&Title=…