ಎಲ್ಲ ಪುಟಗಳು

ಲೇಖಕರು: venkatesh
ವಿಧ: ಲೇಖನ
August 05, 2017 257
ಮುಂಬಯಿನ ಯೋಗ ಶಿಕ್ಷಕರಲ್ಲಿ (೫೦ ರ ದಶಕದಿಂದ, ೭೦ ರ ದಶಕದವರೆಗೆ) ಸತತವಾಗಿ ದುಡಿದ  ಸಿ.ಎಂ.ಮಹಾದೇವ ಭಟ್ಟರದು ಒಂದು ಮಹತ್ವದ ಸ್ಥಾನವಾಗಿದೆ. ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಶಿಕ್ಷಣಗಳಿಸಿ, ಅಲ್ಲೇ ಯೋಗವನ್ನೂ,ಸಂಸ್ಕೃತವನ್ನೂ  ಬೋಧಿಸಿದವರಲ್ಲಿ ಶ್ರೀ. ಚಿತ್ರದುರ್ಗ ಮಹಾದೇವ ಭಟ್ಟರೂ ಒಬ್ಬರು. ಅವರ ಇನ್ನಿಬ್ಬರು ಸಹಪಾಠಿಗಳು, ಶ್ರೀ. ಪಟ್ಟಾಭಿ ಜೋಯಿಸ್, ಮತ್ತು, ಶ್ರೀ. ಬಿ.ಕೆ. ಎಸ್ ಆಯ್ಯಂಗಾರ್ ಈ ಮೂರೂ ಯೋಗಾಚಾರ್ಯರೂ ಯೋಗಪ್ರಶಿಕ್ಷಣವನ್ನು ಶ್ರೀ. ಕೃಷ್ಣಮಾಚಾರ್ಯರಿಂದ ಪಡೆದರು. ಮುಂದೆ...
4
ಲೇಖಕರು: addoor
ವಿಧ: ಲೇಖನ
July 31, 2017 240
ನಗುವೊಂದು ರಸಪಾಕವಳುವೊಂದು ರಸಪಾಕ ನಗುವಾತ್ಮ ಪರಿಮಳವ ಪಸರಿಸುವ ಕುಸುಮ ದುಗುಡವಾತ್ಮವ ಕಡೆದು ಸತ್ತ್ವವೆತ್ತುವ ಮಂತು ಬಗೆದೆರಡನುಂ ಭುಜಿಸು – ಮಂಕುತಿಮ್ಮ ಬದುಕಿನಲ್ಲಿ ಸಂತೋಷವೇ ತುಂಬಿರಬೇಕು ಎಂಬಾಶೆ ನಮ್ಮದು. ಅದರಿಂದಾಗಿ ನಾವು ದುಃಖದಲ್ಲಿ ಮುಳುಗುತ್ತೇವೆ. ಇದಕ್ಕೆ ಪರಿಹಾರ ಏನೆಂದರೆ ಜೀವನದಲ್ಲಿ ಸಮಭಾವ ಬೆಳೆಸಿಕೊಳ್ಳುವುದು ಎಂಬ ಸರಳ ತತ್ವವನ್ನು ಈ ಮುಕ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ ಮಾನ್ಯ ಡಿ. ವಿ. ಗುಂಡಪ್ಪನವರು. ಸಮಭಾವ ರೂಢಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ನಮ್ಮ...
5
ಲೇಖಕರು: addoor
ವಿಧ: ಲೇಖನ
July 30, 2017 206
ಕರಾವಳಿ ಕರ್ನಾಟಕದ ಹಾಗೂ ಮಲೆನಾಡಿನ ಹಲವು ಹಳ್ಳಿಗಳಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನೀವು ಕಾಣ ಬಹುದಾದ ಒಂದು ದೃಶ್ಯ: ಹಲಸಿನ ಮರಗಳಿಂದ ಬಿದ್ದು ಕೊಳೆಯುವ ರಾಶಿರಾಶಿ ಹಲಸಿನ ಹಣ್ಣುಗಳು. ಕರ್ನಾಟಕದಲ್ಲಿ ಪ್ರತಿ ವರುಷ ಕನಿಷ್ಠ ೨,೦೦೦ ಕೋಟಿ ರೂಪಾಯಿಯ ಹಲಸು ಹಾಳಾಗುತ್ತಿದೆ ಎಂದು ಅಂದಾಜು. ಎಂತಹ ಸಂಪನ್ಮೂಲಕ್ಕೆ ಎಂತಹ ದುರವಸ್ಥೆ! ಹೀಗೆ ಹಲಸು ಹಾಳಾಗಲು ನಮ್ಮ ಅಲಕ್ಷ್ಯವೇ ಕಾರಣವಲ್ಲವೇ? ಈ ಹಿನ್ನೆಲೆಯಲ್ಲಿ, ಹಲಸಿನ ಬಗೆಬಗೆ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಿಕ್ಕಾಗಿ ಸಂಘಟಿಸಲಾಗುತ್ತಿರುವ...
5
ಲೇಖಕರು: addoor
ವಿಧ: ಲೇಖನ
July 29, 2017 309
ಮಂಗಳೂರಿನ ಕದ್ರಿಪಾರ್ಕಿನಲ್ಲಿ ಅಂದು ಕೃಷಿಮೇಳ. ಸಾವಯವ ಕೃಷಿಕ ಗ್ರಾಹಕ ಬಳಗದ ಸದಸ್ಯರೊಬ್ಬರು ತಾವು ಬೆಳೆಸಿದ ತರಕಾರಿಗಳೊಂದಿಗೆ ಮುಂಜಾನೆಯೇ ಅಲ್ಲಿಗೆ ತಲಪಿದ್ದರು. ಅಲ್ಲಿ ಸಾಲುಗಟ್ಟಿ ನಿಂತಿದ್ದ ಕಾರುಗಳನ್ನು ಕಂಡು ಅವರು ಕೇಳಿದ ಪ್ರಶ್ನೆ: “ಇವರೆಲ್ಲ ಈ ಬೆಳಗ್ಗೆ ಕೃಷಿಮೇಳಕ್ಕೆ ಬಂದಿದ್ದಾರಾ?” ಅದಕ್ಕೆ ಬಳಗದ ಕಾರ್ಯದರ್ಶಿ ರತ್ನಾಕರ ಅವರ ಉತ್ತರ: “ಅಲ್ಲಲ್ಲ, ಅವರೆಲ್ಲ ದಿನವೂ ಇಲ್ಲಿ ವಾಕಿಂಗಿಗೆ ಬರುವವರು.” ಇದನ್ನು ಕೇಳಿದ ಆ ಸದಸ್ಯರ ಉದ್ಗಾರ:”ಓ ದೇವರೇ, ಇವರಿಗೆಲ್ಲ ಬೆಳಗ್ಗೆಬೆಳಗ್ಗೆ...
5
ಲೇಖಕರು: Sangeeta kalmane
ವಿಧ: ಲೇಖನ
July 29, 2017 256
ಓ ಪ್ರಿಯಾ, ಹೇಗಿದ್ದೀಯಾ? ಅದೆಷ್ಟು ವರ್ಷ ಆಗೋಯ್ತೊ ನಿನ್ನ ನೋಡದೆ! ಯಾಕೊ ನಿನ್ನ ಮುನಿಸಿನ್ನೂ ಹೋಗಿಲ್ವೇನೊ? ಅಲ್ಲ ಅಲ್ಲ ಅದು ಮುನಿಸಲ್ಲ. ಮತ್ತೆ ನಾನೆ ನಿನ್ನ ಮಾತಾಡಿಸಬೇಕು ಅಂತ ಇಷ್ಟು ವರ್ಷ ಕಾದೆಯೇನೊ? ಕೊಬ್ಬು ಕಣೊ ನಿನಗೆ. ಅಲ್ಲಾ ಆ ದಿನ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವಾಗ ಅಕಸ್ಮಾತ್ ನೀ ಸಿಕ್ಕಾಗ ಆದ ಸಂತೋಷದಲ್ಲಿ ಮಾತೆ ಹೊರಡಲಿಲ್ಲ. ನೀನೂ ಅವಸರದಲ್ಲಿ ಅಡ್ರೆಸ್ ಕೊಟ್ಟು ಹೊರಟೋದೆ. ಬಾ ಅಂತನೂ ಹೇಳಿಲ್ಲ. ಈಗಲೂ ನಿನ್ನ ಗಿಮಿಕ್ ಬುದ್ಧಿ ಬಿಟ್ಟಿಲ್ಲಾ ಅನ್ನು. ಇರಲಿ ಪರವಾಗಿಲ್ಲ....
0
ಲೇಖಕರು: addoor
ವಿಧ: ಲೇಖನ
July 28, 2017 194
ಮಾರ್ಚ್ ೩, ೨೦೧೬ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ೧೦,೦೦೦ ರೈತ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದರು. ಆ ಪ್ರತಿಭಟನೆಯ ಮುಂದುವರಿದ ಭಾಗವಾಗಿ ೧೬ ಜೂನ್ ೨೦೧೬ರಿಂದ ನಾಗರಿಕರ ನಿರಂತರ ಧರಣಿ ಆರಂಭ - ಕೋಲಾರ ನಗರದ ಕಾಲೇಜ್ ವೃತ್ತದಲ್ಲಿ - ತಮ್ಮ ಜಿಲ್ಲೆಯ ನೀರಿನ ಕೊರತೆಗೆ ಸರಕಾರ ಶಾಶ್ವತ ಪರಿಹಾರ ಒದಗಿಸಬೇಕೆಂಬ ಬೇಡಿಕೆ. ಯಾಕೆಂದರೆ, ೨೦೧೬ರಲ್ಲಿಯೂ...
5
ಲೇಖಕರು: addoor
ವಿಧ: ಲೇಖನ
July 26, 2017 173
ಕೃಷಿರಂಗದ ಬಗ್ಗೆ ಈಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾರೀ ಒಲವು ತೋರಿಸುತ್ತಿವೆ. ಇದಕ್ಕೆ ಕೆಲವು ಪ್ರಧಾನ ಕಾರಣಗಳಿವೆ. ಮೊದಲನೆಯದಾಗಿ, ಇಂದಿಗೂ ಶೇಕಡಾ ೫೦ ಜನರ ವಾಸ ಹಳ್ಳಿಗಳಲ್ಲೇ. ಕೃಷಿರಂಗ ಅಭಿವೃದ್ಧಿ ಹೊಂದಿದರೆ ಅದರಿಂದ ನೇರವಾಗಿ ಲಾಭವಾಗುವುದು ಹಳ್ಳಿಗರಿಗೆ. ಎರಡನೆಯದಾಗಿ, ಬೆಂಬಿಡದ ಬರಗಾಲದಿಂದಾಗಿ ಗ್ರಾಮೀಣ ಜನರು ಕಂಗೆಟ್ಟು ಹೋಗಿದ್ದಾರೆ (ಭಾರೀ ಶ್ರೀಮಂತರಾದ ಕೃಷಿಕರನ್ನು ಹೊರತು ಪಡಿಸಿ). ಈ ಪರಿಸ್ಥಿತಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಹೂಡಿಕೆ ಮಾಡಿದ ಪ್ರತಿಯೊಂದು ರೂಪಾಯಿಯಿಂದ...
4
ಲೇಖಕರು: addoor
ವಿಧ: ಲೇಖನ
July 24, 2017 199
ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ ಮಿಗಿಲಾವುದೆರಡರೊಳು ನಿನ್ನ ಬೆಲೆ ಏನು? ಬಗೆಯದೀ ಲೆಕ್ಕವನು ಜಗದುಣಿಸನುಂಬವನು ಮೃಗ ಮಾತ್ರನಲ್ಲವೇಂ? – ಮರುಳ ಮುನಿಯ ಈ ಜಗತ್ತಿನಿಂದ ನೀನು ಪಡೆದದ್ದು ಎಷ್ಟು? ಈ ಜಗತ್ತಿಗೆ ನೀನು ಕೊಟ್ಟದ್ದು ಎಷ್ಟು? ಇವು ಎರಡರಲ್ಲಿ ಹೆಚ್ಚು (ಮಿಗಿಲು) ಯಾವುದು? ಎಂಬ ಮೂಲಭೂತ ಪ್ರಶ್ನೆಯನ್ನು ಕೇಳಿ, ತಟಕ್ಕನೆ, ಹಾಗಾದರೆ ನಿನ್ನ ಬೆಲೆ ಏನು? ಎಂಬ ಪ್ರಶ್ನೆಯ ಮೂಲಕ ನಮ್ಮನ್ನು ಚಿಂತನೆಗೆ ಒಡ್ಡುತ್ತಾರೆ ಮಾನ್ಯ ಡಿ.ವಿ.ಜಿ.ಯವರು. ಇದು ನಾವು ದಿನದಿನವೂ ಮಲಗುವ...
5

Pages