ಪುಸ್ತಕ ಪರಿಚಯ

ಲೇಖಕರು: hema hebbagodi
May 04, 2013
ಬೇಸಿಗೆಯ ಧಗೆ.. ಹುಳಿಮಾವಿನ ಸಂಗ.. ‘ನನ್ನ ಹೆಸರು ಇಂದಿರಾ.’      ಲಂಕೇಶರ ಮಡದಿ ಇಂದಿರಾ ಲಂಕೇಶರು ಬರೆದಿರುವ “ಹುಳಿಮಾವು ಮತ್ತು ನಾನು” ಪುಸ್ತಕದ ಮೊದಲ ಸಾಲಿದು. ಮೊದಲಿಗೆ ಲಂಕೇಶ್ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಂಡಿದ್ದು ಈ ವರ್ಷದ ಲಂಕೇಶರ ಹುಟ್ಟುಹಬ್ಬದ ಸಂದರ್ಭದಲ್ಲಿ ಪುಸ್ತಕ ರೂಪದಲ್ಲಿ ಓದುಗರ ಕೈ ಸೇರಿತು. ಲಂಕೇಶ್ ಎಂಬ ದೈತ್ಯನೊಂದಿಗೆ ಒಡನಾಡಿದ, ಅವರ ಸಂಗಾತಿಯಾಗಿ ಕಂಡುಂಡ ಬದುಕಿನ ಏಳುಬೀಳುಗಳನ್ನು ಇಂದಿರಾ ಅವರು ತಣ್ಣನೆಯ ಧ್ವನಿಯಲ್ಲಿ ನಿರೂಪಿಸುತ್ತಾರೆ. ಲಂಕೇಶರಂತಹ ಅಸಾಧಾರಣ…
4
ಲೇಖಕರು: makrumanju
May 04, 2013
‘ಕಾವ್ಯ ಮತ್ತು ಏಕೀಕರಣ’ ಪುಸ್ತಕದಲ್ಲಿನ ಕೆಲವು ಸಾಲುಗಳು :  ‘ಕಾವ್ಯ ಮತ್ತು ಏಕೀಕರಣ’ ಎಂಬ ಈ ಪುಸ್ತಕದಲ್ಲಿ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಾಹಿತಿಗಳ ಲೇಖನಿಯಿಂದ ಮೂಡಿಬಂದ ಬರಹಗಳು, ಅದರಲ್ಲೂ ಮುಖ್ಯವಾಗಿ ಕಾವ್ಯಧಾರೆಯ ಪಾತ್ರವನ್ನು ಚರ್ಚಿಸುವ ಕಾರ್ಯ ಮಾಡಲಾಗಿದೆ. ಇಂದಿನ ನಮ್ಮ ವಿಶಾಲ ಕರ್ನಾಟಕ ಉದಯವಾಗಿ ಐವತ್ತಾರು ವರ್ಷಗಳು ತುಂಬಿ ಐವತ್ತೇಳನೆಯ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡ ನಾಡು ರೂಪುಗೊಳ್ಳಲು ಪ್ರಮುಖವಾದ ಏಕೀಕರಣ ಚಳುವಳಿಯನ್ನು ಅವಲೋಕಿಸುತ್ತ, ಈ ಚಳುವಳಿಯ…
ಲೇಖಕರು: makrumanju
May 04, 2013
  ‘ಕಂಬಾರರ ಎರಡು ಕಾದಂಬರಿಗಳು’ ಪುಸ್ತಕದ ಒಳನೋಟ : ಪ್ರಸ್ತುತದ ಈ ಪುಸ್ತಕದಲ್ಲಿ ಕಂಬಾರರ ಕಾದಂಬರಿಗಳಲ್ಲಿ 'ಸಿಂಗಾರೆವ್ವ ಮತ್ತು ಅರಮನೆ' ಹಾಗೂ 'ಶಿಖರಸೂರ್ಯ' ಕಾದಂಬರಿಗಳನ್ನು ಮಾತ್ರ ಅಧ್ಯಯನದ ವಿಷಯವಾಗಿ ತೆಗೆದುಕೊಂಡು ಅವುಗಳು ಬಿಚ್ಚಿಡುವ ವಿಶೇಷ ಅಂಶಗಳನ್ನು ವಿಶ್ಲೇಷಣಾತ್ಮಕ ದೃಷ್ಟಿಯಿಂದ ಅಭ್ಯಸಿಸಿ ಈ ಪುಸ್ತಕವನ್ನು ರಚಿಸಿದ್ದೇನೆ. ಈ ವಿಶ್ಲೇಷಣಾತ್ಮಕ ಅಧ್ಯಯನದ ಸಾರವನ್ನು ಈ ಕೆಳಗಿನಂತೆ ವಿವರಿಸುತ್ತೇನೆ.  'ಸಿಂಗಾರೆವ್ವ ಮತ್ತು ಅರಮನೆ' ಕಾದಂಬರಿಯ ವಸ್ತು ವಿಶ್ಲೇಷಣೆ ಅಧ್ಯಾಯದಲ್ಲಿ…
ಲೇಖಕರು: Mohan V Kollegal
March 17, 2013
ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳನ್ನೊಳಗೊಂಡ ಒಂದು ಕಥಾಸಂಕಲನ. ಎಲ್ಲಾ ಕಥೆಗಳಲ್ಲಿಯೂ ಹೊಸ ಹುಡುಕಾಟವಿದೆ, ಅದ್ಭುತ ಮತ್ತು ನೈಜವೆನಿಸಿಕೊಳ್ಳುವ ಭಾವನೆಗಳನ್ನು ಎಳೆ ಎಳೆಯಾಗಿ ಹರಿಯಬಿಡುವ ನಿರೂಪಣೆಯಿದೆ, ಹೊಸ ಹೊಸ ಭಾವನೆಗಳ ಮಿಳಿತವಿದೆ, ನೋವಿನ ಜೊತೆಗೆ ನಲಿವಿದೆ, ನಂಬಿಕೆ ಅಪನಂಬಿಕೆಗಳ ನಡುವಿನ ಗುದ್ದಾಟವಿದೆ, ಅರ್ಧದಾರಿಗೇ ನಮ್ಮನ್ನು ನಿಲ್ಲಿಸಿಹೋಗುವ ಒಗಟುಗಳಿವೆ, ಪ್ರಶ್ನೆಯಾಗಿ ಕಾಡಿ ಪ್ರಶ್ನೆಯಾಗಿಯೇ ಉಳಿದುಕೊಳ್ಳುವ ಭಾವನೆಗಳಿವೆ, ಜೊತೆಗೆ ಕುಂದಾಪುರ ಕನ್ನಡದ ನವಿರು ಸೊಗಡಿನ…
ಲೇಖಕರು: nageshamysore
March 15, 2013
ಹುಟ್ಟಿದ ನೆಲದಿಂದ ಯಾವ್ಯಾವುದೋ ಅನಿವಾರ್ಯಗಳಿಂದ ಹೊರಗೆ ಬಂದು ನೆಲೆಸಿದ ಮನಗಳಲ್ಲಿ ತಾಯ್ನೆಲದ ತುಡಿತ, ಕಳಚಿದ ಕೊಂಡಿಯಂತಾಗಿ ಏನೋ ಆತ್ಮೀಯವಾದದ್ದನ್ನು ಕಳೆದುಕೊಂಡ ಭಾವನೆ ಸ್ವಂತ ನೆಲದಲ್ಲೆ ಸದಾ ಇರುವವರಿಗಿಂತ ಹೆಚ್ಚು ತೀವ್ರವಾಗಿ ಬಾಧಿಸುವುದು ಸಹಜ. ಅಂಥಹ ಬಾಧೆಗಳೇ ತೀವ್ರವಾಗಿ ಯಾತನೆ, ತುಡಿತಗಳಾದಾಗ , ಆ ಭಾವೋತ್ಕರ್ಷದ ತೀವ್ರತೆ ಅಭಿವ್ಯಕ್ತವಾಗಲೂ ಸೂಕ್ತ ಮಾಧ್ಯಮಕ್ಕಾಗಿ ಹುಡುಕಾಟ ನಡೆಸುವುದು ಅಷ್ಟೇ ಸಹಜ. ಆ ತುಡಿತ, ಯಾತನೆ, ಉಲ್ಲಾಸ, ಮುಗ್ಧತೆ , ಉತ್ಸಾಹಗಳೆಲ್ಲ ಕ್ರಿಯಾಶೀಲತೆಯ ಮಾರ್ಗ…
1
ಲೇಖಕರು: ಮಮತಾ ಕಾಪು
March 11, 2013
ಈ ಪುಸ್ತಕದ ಒಂದೊಂದು ಲೇಖನಗಳೂ ಜೀವನ ಪಯಣಕ್ಕೆ ದಾರಿ ದೀವಿಗೆಯಂತಿದೆ. ಸೋಲನ್ನು ಮೆಟ್ಟಿ ನಿಂತ ಜನರ ಕಥೆಗಳು ನಿಜಕ್ಕೂ ಸ್ಪೂರ್ತಿದಾಯಕ. ಒಮ್ಮೆ ಕಂಬನಿ ತರಿಸುವ, ಹಾಗೆ ಮರುಕ್ಷಣ ಕಚುಗುಳಿ ಇಡುವ, ಗಾಢ ಆಲೋಚನೆಗೆ ದಾರಿ ಮಾಡಿ ಕೊನೆಗೆ ಒಂದು ಸಣ್ಣ ಪಾಠ ಹೇಳಿ ಹೋಗುವ ಲೇಖನಗಳ ಮಾಲೆ. ಬದುಕು ಕಂಡ ಅನುಭವದ ಮಾರ್ಗದರ್ಶನಗಳು ಎಂದಿಗೂ ಸರಿಯಾಗಿಯೇ ಇರುತ್ತವೆ. ಓದಿರದಿದ್ದಲ್ಲಿ ಒಮ್ಮೆ ಓದಿ ನೋಡಿ.. ಅಮ್ಮ ಹೇಳಿದ ಎಂಟು ಸುಳ್ಳುಗಳು ಪ್ರತಿಬಾರಿ ಓದಿದಾಗಲೂ ಹೊಸತೊಂದು ಅನುಭವದ ಪರಿಚಯ ಮಾಡಿಕೊಡುತ್ತದೆ.…