ಪುಸ್ತಕ ಪರಿಚಯ

ಲೇಖಕರು: krumadevi
February 25, 2013
ದಿನ ನಿತ್ಯದ ಜೀವನದಲ್ಲಿ, ಸುತ್ತಮುತ್ತಲ ಆಗುಹೋಗುಗಳಲ್ಲಿ, ನೈಸರ್ಗಿಕ ವಿದ್ಯಮಾನಗಳಲ್ಲಿ ಸಂಭವಿಸುವ ಹಲವಾರು ಘಟನೆಗಳು ನಮ್ಮ ಮನಸ್ಸಿನಲ್ಲಿ ಕೌತುಕವನ್ನು, ವಿಸ್ಮಯವನ್ನು, ಪ್ರಶ್ನೆಗಳನ್ನು ಮೂಡಿಸುತ್ತವೆ. ಅದೇ ವಿಜ್ಞಾನ. ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗ. ಇಂದು ಕೃಷಿಯಲ್ಲಿ ವಿಜ್ಞಾನವಿದೆ. ಅಡುಗೆ ಮಾಡುವುದು ಕೂಡ ಒಂದು ವಿಜ್ಞಾನವೆಂದು ಪರಿಗಣಿಸಲ್ಪಟ್ಟಿದೆ.. ಬಟ್ಟೆ ತೊಳೆಯುವುದೂ ವಿಜ್ಞಾನವೇ. ಜೀವನದ ಪ್ರತಿಯೊಂದು ಚಟುವಟಿಕೆಯಲ್ಲೂ ಭೌತ, ರಸಾಯನ, ಜೀವಶಾಸ್ತ್ರಗಳಿವೆ. ಏನು? ಏಕೆ? ಹೇಗೆ…
2
ಲೇಖಕರು: ಮಮತಾ ಕಾಪು
February 20, 2013
ಚಿತ್ರದುರ್ಗ ಎಂದಾಕ್ಷಣ ನೆನಪಿಸಿಕೊಳ್ಳುವುದು, ಗಂಡೆದೆಯ ಭಂಟ ವೀರ ಮದಕರಿ ನಾಯಕ. ತ.ರಾ.ಸು ಅವರ ಕಾದಂಬರಿ -ದುರ್ಗಾಸ್ತಮಾನದಲ್ಲಿ ಈತನ ಐತಿಹಾಸಿಕ ದಾಖಲೆಯನ್ನು ಕಣ್ಣ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಂತಿದೆ. ಈ ಕಾದಂಬರಿಯ ಆದಿಯಿಂದ ಅಂತ್ಯದವರೆಗಿನ ಸರಳ ಭಾಷಾ ಶೈಲಿಯು ಓದುಗನನ್ನು ಎಲ್ಲಿಯೂ ನೀರಸವಾಗುವಂತೆ ಮಾಡದೆ ಸರಾಗವಾಗಿ ಓದಿಸಿಕೊಂಡೇ ಹೋಗುತ್ತದೆ. ಮುಖ್ಯವಾಗಿ ನಾಯಕನಲ್ಲಿನ ದೊರೆಯ ಲಕ್ಷಣಗಳ ಜೊತೆಗೆ ಅವನಲ್ಲಿರುವ ಮನುಷ್ಯತ್ವವೂ ಹೊರ ಹೊಮ್ಮುತ್ತದೆ. ಇದೇ ಗುಣ ದುರ್ಗದಲ್ಲಿನ ಜನರಲ್ಲಿದ್ದು…
7
ಲೇಖಕರು: CanTHeeRava
February 16, 2013
ನಿಮ್ಮ ಓದಿನ ಹಸಿವು ದೊಡ್ಡದಾಗಿಲ್ಲ ಎಂದು ಗೊತ್ತಿದ್ದೂ ಗೊತ್ತಿದ್ದೂ, ೧೪೭೪ ಪುಟಗಳುಳ್ಳ ಸುದೀರ್ಘ ಇಂಗ್ಲಿಷ್ ಕಾದಂಬರಿಯೊಂದನ್ನು ಓದಲು ಆರಿಸಿಕೊಂಡಿರಾದರೆ, ನೀವು ಖಂಡಿತವಾಗಿ ನರಕಯಾತನೆಗೆ ತಯಾರಾಗಿರಲೇಬೇಕು.  ಎರಡು ತಿಂಗಳ ಕಾಲ, ಉಬ್ಬರ-ಇಳಿತಗಳ ಕಥಾ ಹಂದರದ ಜಾಡಿನಲ್ಲಿ ಬಿದ್ದು ಒದ್ದಾಡಿದ ಮೇಲೆ, ಇಂಥ ಒಳ್ಳೆಯ ಪುಸ್ತಕವನ್ನು ಈ ಹಿಂದೆಯೇ ಓದದ ತಪ್ಪಿಗಾಗಿಯೇ ಎರಡು ತಿಂಗಳ ಈ ಓದಿನ ಶಿಕ್ಷೆಯನ್ನು ಅನುಭವಿಸಬೇಕಾಯ್ತು ಎಂದು ನಿಮಗೆ ಅನ್ನಿಸಿದರೆ, ಆ ಕಾದಂಬರಿಗಾಗಿ ಅನುಭವಿಸಿದ ಕಷ್ಟ…
5
ಲೇಖಕರು: ಮಮತಾ ಕಾಪು
February 14, 2013
ಕುವೆಂಪು ಅವರ ಬರಹಗಳಲ್ಲಿ ಮಲೆನಾಡಿನ ಚಿತ್ರಗಳೂ ಒಂದು. ಚಿತ್ರಗಳಿಲ್ಲದೆ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ, ಅಲ್ಲಿನ ಪ್ರಕೃತಿಯ ರಮ್ಯ ಮನೋಹರ ದೃಶ್ಯವನ್ನು ಸೆರೆಹಿಡಿಯುವಂತೆ ಮಾಡುವ, ವಿವರಿಸುವ ಅದ್ಭುತ ಶಕ್ತಿ ಕುವೆಂಪು ಅವರ ಬರಹಗಳದ್ದು. ಈ ಪುಸ್ತಕದಲ್ಲಿ ಮಲೆನಾಡಿನ ಮಡಿಲಲ್ಲಿ ಹಾಯಾಗಿದ್ದ ಕುಪ್ಪಳಿ ಮನೆ, ಕವಿಶೈಲ, ಕುಪ್ಪಳಿ ಮನೆಯ ದಕ್ಷಿಣ ಭಾಗದಲ್ಲಿ ಭೀಮಾಕಾರವಾದ ಪರ್ವತ ಶ್ರೇಣಿಗಳು, ಪಶ್ಚಿಮ ಭಾಗಗಳ ಬೆಟ್ಟಗಳು, ಪೂರ್ವಕ್ಕೆ ಹರಡಿಕೊಂಡ ಅಡಿಕೆ ತೋಟಗಳು ಮುಂತಾದವುಗಳ ವರ್ಣನೆ…
3
ಲೇಖಕರು: ಮಮತಾ ಕಾಪು
February 05, 2013
ಎಚ್ಚೆಸ್ವಿ ಅನಾತ್ಮಕಥನದ ಈ ಬರಹಗಳು ಅವರ ಅಂತರಂಗದಲ್ಲಿ ತುಂಬಿಕೊಂಡಿರುವ ನೆನಪುಗಳ, ಮಧುರ ಭಾವನೆಗಳ, ಅಕ್ಷರ ರೂಪಗಳು. ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ಎಚ್ಚೆಸ್ವಿ 'ಅನಾತ್ಮ ಕಥನ' ಅವರು ಬರೆದಿರುವ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಕೀರ್ಣ ಸಂಪುಟ. ಕನ್ನಡ, ಇಂಗ್ಲೀಷ್ ,ಸಂಸ್ಕೃತ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ನಿರಂತರವಾದ ಅನುಸಂಧಾನ ಎಚ್ಚೆಸ್ವಿ ಅವರ ಭಾವಕೋಶ ಮತ್ತು ಕಾವ್ಯವ್ಯಕ್ತಿತ್ವವನ್ನು ನಿರ್ಮಿಸಿವೆ. ಹಾಗಾಗಿ ಇವರ…
1
ಲೇಖಕರು: ಮಮತಾ ಕಾಪು
January 30, 2013
ಯಾವುದೇ ಪುಸ್ತಕವನ್ನಾದರೂ ಒಮ್ಮೆ ಸಂಪೂರ್ಣ ಓದಿ ನಂತರ ಜೋಪಾನವಾಗಿ ಅದರ ಮೂಲ ಸ್ಥಾನದಲ್ಲಿಟ್ಟುಕೊಳ್ಳುವುದು ರೂಢಿ. ಆದರೆ ಈ ಬಾರಿ ಹಾಗಾಗಲಿಲ್ಲ. ಒಮ್ಮೆ ಓದಿ ಮುಗಿಸಿದ  ಬಳಿಕವೂ ಮತ್ತೆ ,ಮತ್ತೆ ಓದಬೇಕೆಂದನಿಸಿದ್ದು, ಪೂರ್ಣಚಂದ್ರತೇಜಸ್ವಿಯವರ "ಕರ್ವಾಲೋ" ಪುಸ್ತಕ. ಹಾರುವ ಓತಿಕ್ಯಾತನ ಬೆನ್ನತ್ತಿ ಹೋಗುವ ಹೆಸರಾಂತ ವಿಜ್ಞಾನಿ ಕರ್ವಾಲೋ ತೀರಾ ಹಳ್ಳಿಯಲ್ಲಿ ನಡೆಯುವ ಈ ಘಟನೆಯ ಸುತ್ತ ಸುತ್ತುವ ಕಥೆ. ಹಳ್ಳಿಯ ಮಂದಣ್ಣ, ಎಂಗ್ಟ, ಕರಿಯಪ್ಪ, ಮುಂತಾದ ಆ ಹಳ್ಳಿಯ ತೀರಾ ಸಾಮಾನ್ಯ ಜನರೊಂದಿಗೆ ಮಾತ್ರ…
9