ಪುಸ್ತಕ ಪರಿಚಯ

ಲೇಖಕರು: siddharam
September 02, 2011
ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ ಲಭಿಸಿತ್ತು. ಆದರೆ ಮಹಿಳೆಯೊಬ್ಬರು ಲೈಂಗಿಕ ಕಾರ್ಯಕರ್ತೆಯಾಗಿ ಅನುಭವಿಸಿದ ನೋವನ್ನು ಕಣ್ಣೋಟದಿಂದ ಕಂಡ ಜಗತ್ತನ್ನು ಅನಾವರಣಗೊಳಿಸಿದ ಆತ್ಮಕಥನ ಕನ್ನಡದಲ್ಲಿ ಬಂದಿರುವುದು ವಿಶೇಷ. ಮೂಲತ: ಮಲೆಯಾಳಂ ಭಾಷೆಯ ಜ್ಞಾನ್ ಲೈಂಗಿಕ ತೊಳಿಲಾಳಿ ಎಂಬ ನಳಿನಿ ಜಮೀಲಾರ…
ಲೇಖಕರು: siddharam
November 01, 2010
ಕುಂವೀ ಆತ್ಮಕಥನ - ಗಾಂಧಿ ಕ್ಲಾಸು ಇತ್ತೀಚೆಗೆ ಬಿಡುಗಡೆಯಾದ ಬಹು ನಿರೀಕ್ಷೆಯ ಕುಂವೀ ಆತ್ಮಕಥನ ಗಾಂಧಿ ಕ್ಲಾಸು ಆತ್ಮಕಥನ ರೂಪದ ಕಾದಂಬರಿ ಎನ್ನುವಂತಿದೆ. ಯಾಕೆಂದರೆ ಇಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಕಾದಂಬರಿಯ ರೀತಿಯಲ್ಲಿ ಹೆಣೆಯಲ್ಪಟ್ಟಿವೆಯಲ್ಲದೆ, ಇಲ್ಲಿ ಬರುವ ಎಲ್ಲ ಘಟನೆಗಳೂ ತಮ್ಮ ಜೀವನದ ಶೇ.೯೯ರಷ್ಟು ಸತ್ಯವೆಂದೇ ಕುಂವೀ ಹೇಳುತ್ತಾರೆ.  ಬಾಲ್ಯದಿಂದ ಹಿಡಿದು, ಅಮೆರಿಕಾದ ಅಕ್ಕ ಸಮ್ಮೇಳನದವರೆಗೆ ಬೆಳೆದ ಕುಂವೀಯನ್ನು ನಾವಿಲ್ಲಿ ಕಾಣುತ್ತೇವೆ. ಅಪ್ಪಟ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಷೆಯ…
1
ಲೇಖಕರು: ramaswamy
August 10, 2010
ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ ಎಲ್ಲ ಕವಿಗಳಿಗೂ ಇರುವ ಹಾಗೇ ವೀರಣ್ಣನವರಿಗೂ ಇಲ್ಲಿನ ಕವಿತೆಗಳ ಆಯ್ಕೆಯಲ್ಲಿ ದ್ವಂದ್ವಗಳು ಕಾಡಿರುವ ಕುರುಹುಗಳಿವೆ. ಮೊದಲ ಸಂಕಲನ ಪ್ರಕಟಿಸುವ ಕವಿಗೆ ಕಾಡುವ ವಿಚಿತ್ರ ಸಮಸ್ಯೆಯೆಂದರೆ ಎಲ್ಲವನ್ನೂ ಮೊಗೆ ಮೊಗೆದು ಹೇಳಬೇಕು ಎಂಬ ಉತ್ಸಾಹ ಮತ್ತು…
ಲೇಖಕರು: rjewoor
August 09, 2010
ಕನ್ನಡದ ಪುಸ್ತಕಲೋಕದಲ್ಲಿ ಅವಿಷ್ಕಾರಗಳು ನಡೀತಾನೇ ಇರುತ್ತವೆ. ಮಕ್ಕಳ ಸಾಹಿತ್ಯದಲ್ಲೂ ಇಂತಹ ಪ್ರಯೋಗಗಳಿಗೆ ಕೊರೆತೆಯಿಲ್ಲ. ಮಕ್ಕಳ ಮನ ತಟ್ಟುವ...ಮನರಂಜಿಸುವ ಅದೆಷ್ಟೋ ಪುಸ್ತಕಗಳು ಪ್ರಕಟಗೊಂಡಿವೆ. ಕಾಮಿಕ್ ಪುಸ್ತಕಗಳು ಇದೆ ಸಾಲಿಗೆ ಸೇರುವ ಮತ್ತೊಂದು ಸಚಿತ್ರ ಸಾಹಿತ್ಯವೆಂತಲೇ ಹೇಳಬಹುದು. ಆದ್ರೆ, ಸಾಹಿತಿ ತಿರುಮಲೆ ಎಂ.ಎಸ್.ರಾಮಮೂರ್ತಿ ನಿಜಕ್ಕೂ ಹೊಸ ಪ್ರಯೋಗ ಮಾಡಿದ್ದಾರೆ. ಅಂದ್ರೆ, ಮಕ್ಕಳ ಇಷ್ಟಪಡುವ ವಿಷಯವನ್ನೆ ಆಧರಿಸಿ ಇಡೀ ಕಾದಂಬರಿಯನ್ನ ರಚಿಸಿದ್ದಾರೆ..ಕಾದಂಬರಿ ಮುಖ ಪುಟ ನೋಡಿದರೆ…
ಲೇಖಕರು: h.a.shastry
August 05, 2010
  (ನನ್ನ ಈ ಲೇಖನ ಆಗಸ್ಟ್ ೮, ೨೦೧೦ರ ’ಕರ್ಮವೀರ’ದಲ್ಲಿ ಪ್ರಕಟವಾಗಿದೆ.)  ಎಸ್.ಎಲ್. ಭೈರಪ್ಪನವರು ಮತ್ತೊಮ್ಮೆ ನಮ್ಮ ಮನ-ಮಸ್ತಿಷ್ಕಗಳಿಗೆ ಚುರುಕು ಮುಟ್ಟಿಸಿದ್ದಾರೆ. ’ಕವಲು’ ಕಾದಂಬರಿಯನ್ನು ಕೊಟಿದ್ದಾರೆ.  ’ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು’ ಎಂಬ ಪೂರ್ವನುಡಿ ಹೊಂದಿರುವ ಈ ಕಾದಂಬರಿಯು ತನ್ನೀ ಹಾದಿಯಲ್ಲಿ, ದಾಂಪತ್ಯಜೀವನವೇ ಮೊದಲಾಗಿ ಭಾರತೀಯ ಕುಟುಂಬಪದ್ಧತಿಯು…
ಲೇಖಕರು: h.a.shastry
August 02, 2010
  ಈಚೆಗೆ ನನ್ನ ಕೈಗೊಂದು ಮೌಲಿಕ ಕೃತಿ ಸಿಕ್ಕಿತು. ಕೊಂಡಜ್ಜಿ ಕೆ. ವೆಂಕಟೇಶ್ ಸಂಪಾದಿಸಿರುವ ’ಭೈರಪ್ಪಾಭಿನಂದನಾ’ ಗ್ರಂಥ ಅದು. ೧೯೯೩ರಲ್ಲಿ ಪ್ರಥಮ ಮುದ್ರಣವಾಗಿ ಹೊರಬಂದು ೨೦೦೫ರಲ್ಲಿ ದ್ವಿತೀಯ ಮತ್ತು ವಿಸ್ತೃತ ಮುದ್ರಣ ಕಂಡಿರುವ ಈ ಪುಸ್ತಕ ಅದುಹೇಗೋ ಇದುವರೆಗೆ ನನ್ನ ದೃಷ್ಟಿಯಿಂದ ತಪ್ಪಿಸಿಕೊಂಡುಬಿಟ್ಟಿತ್ತು! ಓದುತ್ತಹೋದಂತೆ ಈ ಕೃತಿಯು ನನ್ನನ್ನು ಹಿಡಿದಿಟ್ಟು ಕುಳ್ಳಿರಿಸಿ ಓದಿಸಿಕೊಂಡಿತು.  ನಮ್ಮ ನಡುವಿನ ಶ್ರೇಷ್ಠ ಸಾಹಿತಿ ಎಸ್.ಎಲ್. ಭೈರಪ್ಪನವರ ಬಗ್ಗೆ ಮತ್ತು ಅವರ ಅನೇಕ ಕೃತಿಗಳ…