ಪುಸ್ತಕ ಪರಿಚಯ

ಲೇಖಕರು: narendra
March 09, 2008
ಸಿ.ಎನ್ ರಾಮಚಂದ್ರರ ಮೊತ್ತ ಮತ್ತು ಇತರ ಕಥೆಗಳು ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ತೀರ ಆಪ್ತವಾದ ಧಾಟಿಯಲ್ಲಿ, ಸ್ವಗತದ ವಿನಯವಂತಿಕೆಯನ್ನು ಪಡೆದಿರುವ ಈ ಕಥೆಗಳು ಅದೇ ಕಾರಣಕ್ಕೆ ಓದಿಗೆ ಒಂದು ಬಗೆಯ ಆಹ್ವಾನವನ್ನು ನೀಡುವಂತಿವೆ. ಕೃತಿ: ಮೊತ್ತ ಮತ್ತು ಇತರ ಕಥೆಗಳು(ಕಥಾ ಸಂಕಲನ) ಪುಟ ಸಂಖ್ಯೆ: 120  (ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ "ಒಂದಲ್ಲಾ ಒಂದೂರಿನಲ್ಲಿ" ಹೆಸರಿನ ಕಥೆಗಳಿಗಾಗಿಯೇ ಇರುವ ಹೊಸ ಪತ್ರಿಕೆಯಲ್ಲಿ ಪ್ರಕಟಿತ ಲೇಖನದ ಆಯ್ದ ಭಾಗ.)
ಲೇಖಕರು: narendra
March 01, 2008
ಪ್ರಹ್ಲಾದ ಅಗಸನಕಟ್ಟೆಯವರ `ಮನದ ಮುಂದಣ ಮಾಯೆ' ಸಂಕಲನಕ್ಕೆ ಸಾಹಿತ್ಯ ಅಕೆಡಮಿಯ ಪುರಸ್ಕಾರ ಸಂದಿದೆ. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೊರತಂದಿದೆ. ಅಗಸನಕಟ್ಟೆಯವರ ಕಥೆಗಳ ಓದು ಒಂದು ಚೇತೋಹಾರಿ ಅನುಭವವನ್ನು ನೀಡುವ ಕಸು ಹೊಂದಿವೆ. ಇನ್ನಷ್ಟು ಮತ್ತಷ್ಟು ಇಂಥ ಕಥೆಗಳನ್ನು ಓದುವ ಆಸೆಯನ್ನು ಇವು ಹುಟ್ಟಿಸುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ನಮಗೆ ಯಾವುದೋ ಹೊಸ ಒಳನೋಟ, ಜೀವನ ದರ್ಶನ, ಬದುಕಿಗೆ ಒಂದು ಕಾಣ್ಕೆ ನೀಡುತ್ತವೆ…
ಲೇಖಕರು: narendra
February 25, 2008
ಕೇಶವ ಮಳಗಿಯವರ ನೇರಳೆ ಮರ ಒಂದು ವಿಶಿಷ್ಟ ಕಥಾನಕ! ಒಬ್ಬ ಬರಹಗಾರನ ತಳಮಳಗಳನ್ನು ವಯಸ್ಸಿನ ಹಲವು ಹಂತಗಳಲ್ಲಿ, ಬದುಕಿನ ಹಲವು ತಿರುವುಗಳಲ್ಲಿ ಮತ್ತು ಮನಸ್ಸಿನ ಹಲವು ಪಾತಳಿಗಳಲ್ಲಿ ಅವು ದಾಖಲಾಗುವ ವಿಸ್ಮಯವನ್ನು, ದಾಖಲಾಗುತ್ತ ಅವು ಮಾಡುವ ಚಮತ್ಕಾರವನ್ನು ಮಳಗಿಯವರು ಅಕ್ಷರಗಳಲ್ಲಿ ಹಿಡಿದುಕೊಡಲು ಇಲ್ಲಿ ಪ್ರಯತ್ನಿಸಿದ್ದಾರೆ. ಅನುಭವವೊಂದು ಬರಹಗಾರನನ್ನು ಕಾಡುತ್ತ, ತಟ್ಟುತ್ತ, ತಡವುತ್ತ, ತದುಕುತ್ತ, ಸಂತೈಸುತ್ತ, ಪೊರೆಯುತ್ತ, ತೊರೆಯುತ್ತ, ತಲ್ಲಣಗಳಿಗೆ ನೂಕುತ್ತ ಮತ್ತು…
ಲೇಖಕರು: narendra
February 20, 2008
ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ) ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019 ಪುಟಗಳು:105+6 ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ ಯಾವುದು ಎಂದು ಯೋಚಿಸಿದರೆ ಮನುಷ್ಯನ ಆಳದಲ್ಲಿ ಹುದುಗಿರುವ ತಣ್ಣನೆಯ ಕ್ರೌರ್ಯ, ಎಲ್ಲೋ ಧಿಗ್ಗನೆ ಎದ್ದು ಬರುವ ಮಾನವೀಯ ಪ್ರೀತಿಯ ಸೆಲೆ, ಮನುಷ್ಯ ಸಂಬಂಧಗಳು ಕೂಡುವ, ಕಾಡುವ ಅನನ್ಯ ಪರಿ, ಆಧುನಿಕತೆ…
ಲೇಖಕರು: aniljoshi
January 13, 2008
ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ. ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ…
ಲೇಖಕರು: metimallikarjun
December 02, 2007
ಡಾ.ಕೆ.ವಿ. ನಾರಾಯಣವರು ಆಧುನಿಕ ಕನ್ನಡ ಜಗತ್ತು ಕಂಡ ವಿಶಿಷ್ಟ ಮತ್ತು ಸೂಕ್ಷ್ಮ ಚಿಂತಕ ಹಾಗೂ ಭಾಷಾಶಾಸ್ತ್ರಜ್ಞ. ಇವರು ಇತ್ತೀಚಿಗೆ ಬರೆದ "ಕನ್ನಡ ಜಗತ್ತು: ಅರ್ಧ ಶತಮಾನ" ಕೃತಿ ಓದಿದ ಮೇಲೆ ನನ್ನಲ್ಲಿ ಹುಟ್ಟಿದ ಚರ್ಚೆ, ವಾಗ್ವಾದ ಮತ್ತು ಸಮರ್ಥನೆಗಳನ್ನು ಕ್ರೋಡಿಕರಿಸಿಕೊಂಡು ಈ ಪುಸ್ತಕವನ್ನು ಕುರಿತು ಕೆಲವು ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುವೆ. ಕನ್ನಡ ಭಾಷೆಯನ್ನು ಕುರಿತು ಹಲವಾರು ವಾಗ್ವಾದಗಳು ನಿರಂತರವಾಗಿ ನಡೆದಿವೆ. ಈ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಪ್ರಾಚೀನತೆ,…