ಪುಸ್ತಕ ಪರಿಚಯ

ಲೇಖಕರು: metimallikarjun
December 02, 2007
ಡಾ.ಕೆ.ವಿ. ನಾರಾಯಣವರು ಆಧುನಿಕ ಕನ್ನಡ ಜಗತ್ತು ಕಂಡ ವಿಶಿಷ್ಟ ಮತ್ತು ಸೂಕ್ಷ್ಮ ಚಿಂತಕ ಹಾಗೂ ಭಾಷಾಶಾಸ್ತ್ರಜ್ಞ. ಇವರು ಇತ್ತೀಚಿಗೆ ಬರೆದ "ಕನ್ನಡ ಜಗತ್ತು: ಅರ್ಧ ಶತಮಾನ" ಕೃತಿ ಓದಿದ ಮೇಲೆ ನನ್ನಲ್ಲಿ ಹುಟ್ಟಿದ ಚರ್ಚೆ, ವಾಗ್ವಾದ ಮತ್ತು ಸಮರ್ಥನೆಗಳನ್ನು ಕ್ರೋಡಿಕರಿಸಿಕೊಂಡು ಈ ಪುಸ್ತಕವನ್ನು ಕುರಿತು ಕೆಲವು ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುವೆ. ಕನ್ನಡ ಭಾಷೆಯನ್ನು ಕುರಿತು ಹಲವಾರು ವಾಗ್ವಾದಗಳು ನಿರಂತರವಾಗಿ ನಡೆದಿವೆ. ಈ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಪ್ರಾಚೀನತೆ,…
ಲೇಖಕರು: narendra
November 20, 2007
ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸಿಯಾಗಿಸದೇ ಬದುಕಿನೊಳಗೇ ಇರಿಸಿ ಈ ಶೋಧವನ್ನು ನಡೆಸಬೇಕೆನ್ನುವುದು. ಒಂದು ಅರ್ಥದಲ್ಲಿ ಇಲ್ಲಿರುವುದು ಒಂದು ಸಂಘರ್ಷ. ಕಾದಂಬರಿ ಮಾತು, ವಿವರ, ನೋಟಗಳಿಗಿಂತ ಮೌನ, ಅಮೂರ್ತ ಮತ್ತು ಅನೂಹ್ಯಗಳನ್ನೆ ಹೆಚ್ಚು ನೆಚ್ಚಿಕೊಂಡಿರುವಂತಿದೆ. ನಿಜಕ್ಕೂ ಇದೊಂದು ವಿಶಿಷ್ಟ…
ಲೇಖಕರು: narendra
October 08, 2007
ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ್ಲು, ಅಥವಾ ಎಲ್ಲ ಬಗೆಯ ಅತಿಯನ್ನು ಕೊಂಕುವ ಒಂದು ವ್ಯಂಗ್ಯದ ಸೊಲ್ಲು ಇತ್ಯಾದಿಗಳಲ್ಲಿ ಯಾವುದೂ ಆಗಬಹುದಾದ್ದು. ಬಾಳಾಸಾಹೇಬ ಲೋಕಾಪುರ ಸೃಷ್ಟಿಸುವ ನಂದೋವಾಡಿಯ ಮಟ್ಟಿಗೆ ಈ ಉಧೋ ಉಧೋ ಎಂಬ ಜೈಕಾರ ಇದೆಲ್ಲವನ್ನೂ ಸೂಚಿಸುತ್ತದೆ ಎನ್ನಬೇಕು. ಅದನ್ನು ಅದರ ವಿಭಿನ್ನ…
ಲೇಖಕರು: ಅನಿವಾಸಿ
June 26, 2007
ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "…
ಲೇಖಕರು: cmariejoseph
May 30, 2007
"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ" ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನು ಸ್ಪರ್ಶಿಸದೆ ಕೇವಲ…
ಲೇಖಕರು: Shyam Kishore
February 25, 2007
ಕನ್ನಡ ನಾಡು-ನುಡಿಗೆ ಒದಗಿರುವ ದುಃಸ್ಥಿತಿ, ಕಾವೇರಿ ತೀರ್ಪಿನಂತಹ ಅನ್ಯಾಯ ನಮಗೆ ಆಗಿದ್ದರೂ, "ಮುಂದಿನ ವಾರ ಅಧಿವೇಶನ ಸೇರಿ, ವಿಚಾರ ಮಾಡಿ, ಆನಂತರ ನಮ್ಮ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಿದರಾಯಿತು; ಈಗೇನು ಅಂತಹ ಅರ್ಜೆಂಟು?" ಎನ್ನುವಂತೆ ಸುಮ್ಮನಿರುವ ನಮ್ಮ ಮಂತ್ರಿ-ಮಹೋದಯರು, ಇವೇ ಮೊದಲಾದ ಹತ್ತಾರು ವಿಚಾರಗಳು ನಮ್ಮನ್ನು ಆಗಾಗ ಕಾಡುತ್ತಿರುತ್ತವೆ ಅಲ್ಲವೇ? ಆಶ್ಚರ್ಯವೆಂದರೆ ಇದೇ ರೀತಿಯ ಸಮಸ್ಯೆಗಳೇ ಸುಮಾರು ಅರವತ್ತು ವರ್ಷಗಳ ಹಿಂದೆಯೂ (ಅಂದರೆ ಏಕೀಕರಣಕ್ಕೂ ಹತ್ತು ವರ್ಷ ಮೊದಲು…