ಪುಸ್ತಕ ಪರಿಚಯ

ಲೇಖಕರು: ramaswamy
July 22, 2010
ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . .                                    ‘ಕಡಲಿಗೆಷ್ಟೊಂದು ಬಾಗಿಲು’ ರೂಪ ಹಾಸನ ಅವರ ನಲವತ್ತು ಪದ್ಯಗಳ ಮೂರನೆಯ ಸಂಕಲನ. ‘ಒಂದಷ್ಟು ಹಸಿಮಣ್ಣು’ ‘ಬಾಗಿಲಾಚೆಯ ಮೌನ’ ಸಂಕಲನಗಳಿಂದ ಸಾರಸ್ವತ ಲೋಕದ ಹೆಬ್ಬಾಗಿಲು ಬಡಿದು ಅಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡ ಕೆಲ ಹೆಸರುಗಳಲ್ಲಿ ರೂಪ ಅವರೂ ಒಬ್ಬರು. ವಿವಿಧ ಕವಿಗೋಷ್ಠಿಗಳ ಖಾಯಂ ಹೆಸರುಗಳಲ್ಲಿ ಒಬ್ಬರಾಗಿರುವ ರೂಪ, ಪದ್ಯ ಬರೆಯುವದರ ಜೊತೆಜೊತೆಗೆ ನಾಡಿನ ಬಹುತೇಕ ಯುವ ಬರಹಗಾರರೊಂದಿಗೆ ಸಾಹಿತ್ಯಕ…
ಲೇಖಕರು: ramaswamy
July 18, 2010
ಕೃತಿ: ಅವ್ವನ ಅಂಗನವಾಡಿ ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು  ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪರ್ಧೆಗಳಲ್ಲೂ ತಮ್ಮ ಕವಿತೆಗಳಿಗೆ ಬಹುಮಾನಗಳನ್ನು ಪಡೆಯುವ ಮೂಲಕ ಎಡ ಪಂಥೀಯ ಆಶಯಗಳನ್ನು, ಸಮಾನತೆಯ ಕನಸುಗಳನ್ನೂ ತಮ್ಮ ಬರಗಳುದ್ದಕ್ಕೂ ಕಾಣಿಸುತ್ತಲೇ ಬಂದವರು. ಈಗಾಗಲೇ ‘ನೆರಳು ಮಾತಾಡುವ ಹೊತ್ತು’ (೨೦೦೪) ಕವನ ಸಂಕಲನವನ್ನೂ,…
ಲೇಖಕರು: inchara123
April 22, 2010
ಇಷ್ಟು ದಿವಸ ನಾನ್ಯಾಕೆ ಸಂಪದಕ್ಕೆ ಬರಲಿಲ್ಲ?  (ಯಾರೂ ಕೇಳಲೇ ಇಲ್ಲ! :() ಆದರೂ ನಾನೇ ಹೇಳಿಬಿಡುತ್ತೇನೆ.  ಪರ್ವ ಓದಲು ಶುರು ಮಾಡಿದಂದಿನಿಂದ ಬೇರಾವುದನ್ನೂ ಓದಲಾಗಲೇ ಇಲ್ಲ.    ಪರ್ವ -  ನನ್ನ ಇಷ್ಟು ವರ್ಷಗಳ ಓದಿನಲ್ಲಿ ನನ್ನ ಮನದ ಮೇಲೆ ಬಹು ಪರಿಣಾಮ ಬೀರಿದ ಪುಸ್ತಕ.  ಕುಳಿತಿದ್ದರೂ, ನಿಂತಿದ್ದರೂ, ಕನಸಿನಲ್ಲೂ, ಪಾತ್ರಗಳ ಗುಂಗು.  ಪ್ರತಿಯೊಂದು ಪಾತ್ರದ ಚಿತ್ರಣವನ್ನು ಓದುತ್ತಿದ್ದಾಗಲೂ ನಾನೇ ಆ ಪಾತ್ರವೇನೋ ಎಂಬಂತಹ, ನನ್ನ ಬಗ್ಗೆಯೇ ಬರೆದಿದ್ದಾರೋ ಎಂಬಂತಹ ಭಾವ ಮನದೊಳಗೆ…
1
ಲೇಖಕರು: modmani
March 15, 2010
ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ, ಕನ್ನಡದಲ್ಲಿ ಇಂತಹ ಪುಸ್ತಕಗಳು ಬಹಳ ಕಡಿಮೆ. ಯಂಡಮೂರಿಯವರ ವಿಜಯಕ್ಕೆ ಐದು ಮೆಟ್ಟಿಲುಗಳು ಅಥವಾ ಶಿವ್ ಖೇರಾ ಅವರ "ನೀವೂ ಗೆಲ್ಲಬಲ್ಲಿರಿ" ಪುಸ್ತಕಗಳ ಅನುವಾದ ಬಿಟ್ಟರೆ ಅಂತಹ ಪ್ರಯತ್ನ ಬಂದಿದ್ದು ರವಿ ಬೆಳಗೆರೆ ಅವರಿಂದ. ಆದರೆ…
ಲೇಖಕರು: payanigasatya
February 06, 2010
’ಸುಂಕ’ ಎಂಬ ಕವನದ ಸಾಲುಗಳು ಹಳೇ ಸಂಕ ಲಡ್ಡಾಗಿದೆ ಅದರ ಮೇಲೆ ಬರೇ ತಂಗಾಳಿಯ ಪದಯಾತ್ರೆ ಪಕ್ಕದಲ್ಲೇ ಹೊಸ ಸೇತುವೆ ವಾಹನಗಳಿಗೆ ಈ ಸಾಲುಗಳು ಕಟ್ಟಿಕೊಡುವ ಚಿತ್ರವನ್ನು ನೋಡೋಣ, ಒಂದು ಹಳೆಯ ಸಂಕ; (ಸಂಕ ಅಂದರೆ ಸಣ್ಣ ಹೊಳೆಗೆ ಕಟ್ಟಿರುವ ಸೇತುವೆ, ಮರದ ದಿಮ್ಮಿಯನ್ನೋ, ಅಡಿಕೆ ಮರವನ್ನೋ ಅಡ್ಡಹಾಕಿ ಮಾಡಿರುತ್ತಾರೆ, ಕರಾವಳಿ/ಮಲೆನಾಡಿನ ಕಡೆ ಕಾಣಬಹುದು), ಅದರ ಪಕ್ಕದಲ್ಲಿ ಹೊಸದಾಗಿ ವಾಹನ ಸಂಚಾರಕ್ಕಾಗಿ ನಿರ್ಮಿಸಿರುವ ಹೊಸ ಸೇತುವೆ, ಹೊಸ ಸೇತುವೆ ತೆರೆದಿದ್ದರೂ ಹಳೆಯ ಸಂಕ ಇನ್ನೂ ಇದೆ,…
ಲೇಖಕರು: inchara
June 23, 2009
ನಾನು ಕೂಡಾ ಎಲ್ಲಾ ಪುಸ್ತಕ ಪ್ರೇಮಿಗಳಂತೆ! ಓದಿದ್ದಕ್ಕಿಂತ ಹೆಚ್ಚಾಗಿ ಆ ಪುಸ್ತಕ ಓದಬೇಕು, ಈ ಪುಸ್ತಕ ಓದಬೇಕು ಎನ್ನುವ ಪಟ್ಟಿಯೇ ದೊಡ್ಡದು! ಜೊತೆಗೆ ಒಮ್ಮೆ ಓದಲು ಕುಳಿತರೆ, ಆ ಪುಸ್ತಕ ಪೂರ್ತಿ ಮುಗಿಯುವ ತನಕ ಕುಳಿತಲ್ಲಿಂದ ಏಳಲು ಮನಸ್ಸೇ ಬಾರದು. ಹಾಗಾಗಿ ದೊಡ್ಡ ಪುಸ್ತಕಗಳನ್ನು ಓದುವ ಸಾಹಸವೇ ಮಾಡುವುದಿಲ್ಲ. ಮಾಡಿದರೂ ಅದೆಲ್ಲಾ ರಜವಿರುವಾಗ ಮಾತ್ರ. ಏನಿದ್ದರೂ ಸಣ್ಣ ಕಥೆಗಳು, ಚುಟುಕಗಳು, ಪ್ರಬಂಧಗಳು. ಅದರಲ್ಲೂ ಈ ಲಘು ಹರಟೆಗಳೆಂದರೆ ಬಲು ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ…