ಪುಸ್ತಕ ಸಂಪದ

  • ‘ಭಾವಾಂಬುಧಿ' ಎನ್ನುವ ಅಪರೂಪದ ಷಟ್ಪದಿ ಸಂಕಲನವನ್ನು ರಚಿಸಿದ್ದಾರೆ ಚನ್ನಕೇಶವ ಜಿ ಲಾಳನಕಟ್ಟಿ. ಇವರ ಬಗ್ಗೆ ಹಾಗೂ ಈ ಕೃತಿಯ ಬಗ್ಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ. ಮಲ್ಲಾರೆಡ್ಡಿಯವರು. ಇವರು ತಮ್ಮ ಬೆನ್ನುಡಿಯಲ್ಲಿ “ಕನ್ನಡ ಸಾಹಿತ್ಯ ಪರಂಪರೆಗೆ ಸುಮಾರು ೨೦೦೦ ವರ್ಷಗಳ ಸಮೃದ್ಧ ಇತಿಹಾಸವಿದ್ದು, ಕಾವ್ಯ ರಚನೆಯಲ್ಲಿ ಬೇರೆ ಬೇರೆ ಭಾಷೆಗಳಿಗಿಂತ ಉತ್ತಮ ಕಾವ್ಯವನ್ನು ರಚಿಸಿದ ಹೆಮ್ಮೆ ನಮ್ಮದಾಗಿದೆ. ಹಳೆಗನ್ನಡ, ಪೂರ್ವಕನ್ನಡ, ನಡುಗನ್ನಡ ಕಾಲದ ಕವಿ ಶ್ರೇಷ್ಟರಾದ ಪಂಪ, ರನ್ನ, ಪೊನ್ನ, ಜನ್ನ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ...ನಂತಹ ಕವಿ ಶ್ರೇಷ್ಟರು ಹಾಗೂ ಇವರ ಹಿಂದಿನವರು ಛಂದಸ್ಸಿಗನುಗುಣವಾಗಿ ರಚಿಸಿದ್ದ ಕಾವ್ಯಗಳು, ಇಂದೂ ಜನ ಮಾನಸದಲ್ಲಿ…

  • ಉದಯೋನ್ಮುಖ ಕಥೆಗಾರ ಸತೀಶ್ ಶೆಟ್ಟಿ ಅವರ ನೂತನ ಕೃತಿ ‘ಕೊನೆಯ ಎರಡು ಎಸೆತಗಳು'. ಈ ಕೃತಿಗೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಹಿರಿಯ ಪತ್ರಕರ್ತರಾದ ಸತೀಶ್ ಚಪ್ಪರಿಕೆ. ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಸಾಲುಗಳು -” ಅಜ್ಜ ನೆಟ್ಟ ಹಲಸಿನ ಮರ' ಓದಿ, ಈಗ ‘ಕೊನೆಯ ಎರಡು ಎಸೆತಗಳು' ಕೃತಿಯನ್ನು ಓದಿದರೆ, ಕಥೆಗಾರ ಸತೀಶ್ ಶೆಟ್ಟಿ ವಕ್ವಾಡಿ ಹೊರಟ ಹಾದಿಯ ಜಾಡು ಹಿಡಿಯಬಹುದು. ಅದರಲ್ಲಂತೂ ಅವರದೇ ಊರಿನ, ಕುಂದಾಪುರ ಭಾಷೆಯ ಪೂರ್ಣ ಪರಿಚಯ ಇರುವ ನನಗೆ ಸತೀಶರ ನಡೆ ಸ್ಪಷ್ಟವಾಗಿ ಅರಿವಿಗೆ ಬಂದಿದೆ.

    ಹೊಸ ಲೋಕವೊಂದನ್ನು ಸೃಷ್ಟಿಸುವ ಸವಾಲು ಅದು. ಒಬ್ಬ ಸೃಜನಶೀಲ ವ್ಯಕ್ತಿಯ ಬದುಕು-ಬರವಣಿಗೆಯ ವಿಕಸನ ಹಂತದಲ್ಲಿ ಇರುವ ಎಲ್ಲ ಅಡೆತಡೆಗಳು ಈ…

  • ಅಲ್ಬೇನಿಯಾ ದೇಶದ ಖ್ಯಾತ ಸಾಹಿತಿ ಮಿಲ್ಲೊಶ್ ಜೆರ್ಜ್ ನಿಕೊಲ್ಲಾ ಇವರ ಕಾವ್ಯನಾಮವೇ ಮಿಜೆನಿ. ಇವರು ಬರೆದದ್ದು ಅಲ್ಬೇನಿಯಾ ಭಾಷೆಯಲ್ಲಿ. ಇವರು ಬರೆದ ಪುಟ್ಟ ಕಥೆಗಳ ಸಂಗ್ರಹವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂ ನಂಜುಂಡ ಸ್ವಾಮಿ ಇವರು. ಅಲ್ಬೇನಿಯಾ ಭಾಷೆಯನ್ನು ಅಲ್ಬೇನಿಯಾ ದೇಶದೊಂದಿಗೆ ಅದರ ನೆರೆಯ ದೇಶಗಳಾದ ಕೊಸೊವೊ, ಗ್ರೀಸ್ ಮತ್ತು ಮೆಸೆಡೊನಿಯಾದಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಈ ಭಾಷೆಯು ಇಂಡೋ ಯುರೋಪಿಯನ್ ಭಾಷಾ ಪಂಗಡಕ್ಕೆ ಸೇರಿದೆ. ಅಲ್ಬೇನಿಯಾ ಭಾಷೆಯಲ್ಲಿ ಮೊದಲ ಪುಸ್ತಕವು ೧೫೫೫ರಲ್ಲಿ ಬರೆಯಲಾಯಿತು ಎಂದು ದಾಖಲೆಗಳು ಹೇಳುತ್ತವೆ. 

    ಮಿಜೆನಿಯವರ ಜೀವಿತಾವಧಿಯಲ್ಲಿ ಅವರ ಯಾವುದೇ ಪುಸ್ತಕಗಳು ಪ್ರಕಟವಾಗದೇ ಹೋದರೂ, ಅವರು ಬರೆದ ಬರಹಗಳು ಪತ್ರಿಕೆಗಳಲ್ಲಿ…

  • ಇಮ್ಮಡಿ ಮಡಿಲು’ ಕೆ.ಎನ್. ಗಣೇಶಯ್ಯ ಅವರ ಕಥಾಸಂಕಲನ. ಕ್ರಿ.ಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ ಮುಳುವಾಗುತ್ತವೆ. ಆ ರತ್ನಗಳಿಂದಾಗಿ ತನ್ನ ಬದುಕಿನ ಕರಾಳ ರಹಸ್ಯವೊಂದರ ಪರಿಚಯವಾದಾಗ, ಸೇನಾಧಿಪತಿ, ಬಾದಾಮಿಯಿಂದಲೇ ತಂದ ಗಣೇಶನ ಮೂರ್ತಿಯಲ್ಲಿ ಮೊರೆ ಹೋಗಿ, ಸನ್ಯಾಸ ಜೀವನ ಸಾಗಿಸುತ್ತಾನೆ. ಆತನಿಗೆ ನೆಮ್ಮದಿ, ಶಾಂತಿ ನೀಡಿದ ಅದೇ ಗಣಪತಿ ಮೂರ್ತಿ, ಸಾವಿರ ವರ್ಷಗಳ ನಂತರ ಮುತ್ತುಸ್ವಾಮಿ ದೀಕ್ಷಿತರ 'ವಾತಾಪಿ ಗಣಪತಿಂ ಭಜೇ' ಕೀರ್ತನೆಗೂ ಸ್ಫೂರ್ತಿಯಾಗುತ್ತದೆ. ಈ ಘಟನೆಗಳ ಸುತ್ತ ಹೆಣೆದ ಚಾರಿತ್ರಿಕ ಕಥೆ 'ಇಮ್ಮಡಿ ಮಡಿಲು'.

    "ಇಮ್ಮಡಿ…

  • ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದ ರೂಸಿ ಎಂ ಲಾಲಾ ಅವರ ಕೃತಿಯೇ ‘ಜೀವಕೋಶಗಳ ಸಂಭ್ರಮಾಚರಣೆ' ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಪಿ.ಎಸ್.ಶಂಕರ್ ಇವರು. ಈ ಕೃತಿಯು ಕ್ಯಾನ್ಸರ್ ಮೇಲೆ ವಿಜಯ ಸಾಧಿಸಿದ ಲೇಖಕರ ಅನುಭವದ ಸಾರ. ಕೃತಿಕಾರ ರೂಸಿ ಎಮ್ ಲಾಲಾ ಅವರ ಬಗ್ಗೆ ಬರೆದು ಅವರ ಮುಂದಿನ ಜೀವನಕ್ಕೆ ಶುಭ ಕೋರಿದ್ದಾರೆ ಟಾಟಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ಗಂತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಎಸ್ ಎಚ್ ಅದ್ವಾನಿಯವರು. ಅವರು ತಮ್ಮ ಶುಭಾಶಯದಲ್ಲಿ ವ್ಯಕ್ತಪಡಿಸಿದ ಭಾವ ಹೀಗಿದೆ-”’ಜೀವಕೋಶಗಳ ಸಂಭ್ರಮಾಚರಣೆ' ಕ್ಯಾನ್ಸರಿನ ಸ್ವರೂಪ, ಅದರ ಕಾರಣಗಳು, ಚಿಕಿತ್ಸೆ ಮತ್ತು ಪರಿಹಾರದ ವಿಸ್ತ್ರತ ವಿವರಣೆ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಾಯಶಃ ಅದು ಕ್ಯಾನ್ಸರ್…

  • ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಕವಿತೆಗಳ ಸಂಗ್ರಹ ‘ವಿಷಾದಗಾಥೆ'. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ, ಕಥೆಗಾರ ಎಸ್. ದಿವಾಕರ್. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿರುವ ಭಾವನೆಗಳ ಆಯ್ದ ಭಾಗ ಇಲ್ಲಿದೆ...

    “ಅರಿಸ್ಟಾಟಲನ ಪ್ರಕಾರರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ ವಸ್ತುವಾಗಿ ಅಥವಾ ಭಾವವಾಗಿ ನೋಡದೆ ಹೋದರೆ ನಿಜಕ್ಕೂ ಹೊಸದೇನನ್ನೂ ಕಾಣಿಸಲಾಗದು. ಗೆಳೆಯ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಈ ‘ವಿಷಾದ ಗಾಥೆ’ಯಲ್ಲಿ ವಸ್ತುಗಳು ತಮ್ಮ ಅಸ್ಮಿತೆಯನ್ನು ಒಂದಿಷ್ಟೂ ಕಳೆದುಕೊಳ್ಳದೆ ರೂಪಕಗಳಾಗಿ ತಮ್ಮದೇ ದನಿಯಲ್ಲಿ ಮಾತಾಡುತ್ತವೆ. ಅವುಗಳ ಅಂತಃಶಕ್ತಿ ಅವರ ಭಾಷೆಯ ಸಂರಚನೆಯಲ್ಲೇ…

  • ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ೨೦೦೭ರಲ್ಲಿ ಹೊರತಂದಿರುವ ಇಟಾಲಿಯನ್ ಭಾಷೆಯ ಕಾದಂಬರಿ ಫೊಂತಮಾರ. ಈ ಕಾದಂಬರಿಯು ಮೊದಲು ಬಿಡುಗಡೆಯಾದದ್ದು ೧೯೫೦ರಲ್ಲಿ. ಅಂದು ಶ್ರೀ ಹೊನ್ನಯ್ಯ ಶೆಟ್ಟಿ ಇವರು ಈ ಪುಸ್ತಕದ ಪ್ರಕಾಶಕರಾಗಿದ್ದರು. ಸುಮಾರು ೪೦ ವರ್ಷಗಳ ಬಳಿಕ ೧೯೯೦ರಲ್ಲಿ ಎರಡನೇ ಮುದ್ರಣ ಕಂಡ ಕೃತಿಯು ನಂತರ ಕರ್ನಾಟಕದ ಸುವರ್ಣ ಮಹೋತ್ಸವದ ಸಮಯದಲ್ಲಿ ಈ ಪುಸ್ತಕವನ್ನು ಮರು ಮುದ್ರಣ ಮಾಡಲಾಗಿದೆ.

    ೧೯೫೦ರ ಸಮಯದಲ್ಲಿ ಈ ಇಟಾಲಿಯನ್ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಕು ಶಿ ಹರಿದಾಸ ಭಟ್ಟರು ಬರೆದ ಮೊದಲ ಮಾತುಗಳನ್ನು ಗಮನಿಸಿದರೆ ನಿಮಗೆ ಕಾದಂಬರಿಯ ಬಗ್ಗೆ ಪುಟ್ಟದಾದ ಮಾಹಿತಿ ಸಿಗುತ್ತದೆ. ಇದರಿಂದ ನಿಮ್ಮ ಓದು ಸುಲಭವಾಗುತ್ತದೆ. ಅವರು ತಮ್ಮ…

  • ಉದಯೋನ್ಮುಖ ಕತೆಗಾರ್ತಿ ಮೇಘನಾ ಕಾನೇಟ್ಕರ್ ಅವರ ನೂತನ ಕಥಾ ಸಂಕಲನ ‘ಲೈಫ್ ನಲ್ಲೊಂದು ಯೂ ಟರ್ನ್'. ಈ ಕಥಾ ಸಂಕಲನಕ್ಕೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಖ್ಯಾತ ಕಾದಂಬರಿಕಾರ, ಅಂಕಣಕಾರರಾದ ಸಂತೋಷಕುಮಾರ್ ಮೆಹೆಂದಳೆ ಇವರು. ಇವರು ತಮ್ಮ ಬೆನ್ನುಡಿಯಲ್ಲಿ “ ಕನ್ನಡ ಕಥೆಗಳ ಸುಗ್ಗಿ ಕಾಲದಲ್ಲಿ ಅನಿರೀಕ್ಷಿತಗಳ ಹೂರಣ, ವಾಸ್ತವವನ್ನು ಮುಖಕ್ಕೆ ರಾಚುವಂತೆ ತೆರೆದಿಡುತ್ತಾ, ಭಾವಾನುಭೂತಿಗಳ ಹಿಂದೆ ಅಡಗಿರಬಹುದಾದ ಕಹಿಸತ್ಯಗಳನ್ನು ನಮಗೆ ಅನುಸಂಧಾನ ಮಾಡಿಸುತ್ತಾ ಸಾಗುವ ಕತೆಗಳ ಲೇಖಕಿ ಮೇಘನಾ ಕಾನೇಟ್ಕರ್ ಕನ್ನಡದ ಸುಲಲೀತ ಬಳಕೆಯಲ್ಲಿ ಗೆದ್ದಿದ್ದರೆ, ನಮ್ಮೊಂದಿಗೆ ಸಾಗುತ್ತಲೇ ಇರುವ ನೈಜ ಘಟನಾವಳಿಗಳನ್ನು ಕತೆಯ ರೂಪಕ್ಕೆ ತಿರುಗಿಸುತ್ತಾ ಓದುಗರನ್ನು ಹಿಡಿದಿಡುವ ತಂತ್ರ…

  • ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಮಾರ್ಗವಿಲ್ಲದ ಮಾರ್ಗ' ಈ ಪುಸ್ತಕ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಹಾಗೂ ಸಂಪಾದಕರು ಡಾ ಎ ವಿ ನರಸಿಂಹಮೂರ್ತಿ. ಪ್ರಧಾನ ಸಂಪಾದಕರಾದ ಪ್ರಧಾನ್ ಗುರುದತ್ತ ಇವರು ತಮ್ಮ ಬೆನ್ನುಡಿಯ ಬರಹದಲ್ಲಿ ಈ ಕೃತಿಗಳನ್ನು ಹೊರತಂದ ಆಶಯದ ಬಗ್ಗೆ ಮಾಹಿತಿ ನೀಡಿದ್ದಾರೆ. “ಭುವನ್ಸ್ ಬುಕ್ ಯೂನಿವರ್ಸಿಟಿ" ಮಾಲೆಯಲ್ಲಿ ಶ್ರೀಸಾಮಾನ್ಯರಿಗೆ ಮಾತ್ರವಲ್ಲದೆ, ಸಾಹಿತ್ಯ ಸಂಸ್ಕೃತಿ ಇತಿಹಾಸಗಳ ಬಗ್ಗೆ ಆಸಕ್ತರಾಗಿರುವ ಎಲ್ಲರಿಗೂ ಬೋಧಪ್ರದವಾಗಿರುವಂಥ ಕಿರುಹೊತ್ತಗೆಗಳನ್ನು ಹೊರತರಲಾಗಿದೆ. ಆಕಾರದಲ್ಲಿ ಕಿರಿದಾದರೂ ಮಹತ್ವದಲ್ಲಿ ಏನೂ ಕಡಿಮೆ ಇಲ್ಲದ ಈ ಪುಸ್ತಕಗಳನ್ನು…

  • ವಿಜಯಲಕ್ಷ್ಮೀ ನಾಗೇಶ್ ಅವರ ‘ಒಂಟಿ ನಾನಲ್ಲ' ಎನ್ನುವ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ವಿಮರ್ಶಕ ವೆಂಕಟೇಶ್ ಮಾನು ಇವರು. ಅವರ ಪ್ರಕಾರ ಈ ಕವನಗಳು ಸಂಯಮದೊಡಲಲ್ಲಿ ಬದುಕಿನ ನೋವುಗಳನ್ನು ಮೌನವಾಗಿ ಅನುಭವಿಸಿದ ಪಳೆಯುಳಿಕೆಗಳಂತಿವೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ವಿಜಯಲಕ್ಷ್ಮೀ ನುಗ್ಗೇಹಳ್ಳಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವ ಹೀಗಿದೆ...

    “ಖಾಸಗಿ ವೃತ್ತಿಯಲ್ಲಿ ಶುಶ್ರೂಶಕಿಯಾಗಿದ್ದು ಜನರ ಸ್ವಾಸ್ಥ್ಯ ನೋಡಿಕೊಳ್ಳುವ ವಿಜಯಲಕ್ಷ್ಮೀ ನಾಗೇಶ್ ಅವರು ತಮ್ಮ ಮನಸ್ಸಿನ ಸ್ವಾಸ್ಥ್ಯಕ್ಕೆ ಸಾಹಿತ್ಯದ ಸಾಂಗತ್ಯವನ್ನು ಬೆಳೆಸಿಕೊಂಡು ಅದರ ಸಂಪ್ರೀತಿಯಲ್ಲಿ ತಲ್ಲೀನವಾಗಿ ತಮ್ಮ ಮೊದಲ…