ಪುಸ್ತಕ ಸಂಪದ

  • "ಸಾಸಿವೆ ತಂದವಳು" ಓದುತ್ತಾ, ಶುರುವಿನಲ್ಲಿ ನನ್ನ ಬಗ್ಗೆನೇ ಓದಿಕೊಳ್ಳುತ್ತಾ ಇದ್ದೆನಾ ಅನ್ನಿಸಿತು. ತಕ್ಷಣವೇ ಭಾರತೀ ಅಕ್ಕನಿಗೆ ಮೆಸೇಜ್ ಕೂಡಾ ಮಾಡಿದೆ. ಓದ್ತಾ ಓದ್ತಾ, ಅವರು ಬರೆದಿದ್ದ ಒಂದೊಂದು ವಿಷಯಗಳೂ ಹಾಗೇ ಕಣ್ಣ ಮುಂದೆ ಬರಕ್ಕೆ ಶುರು ಆದ್ವು. ಹತ್ರತ್ರ 14 ವರ್ಷ ಆಗಿತ್ತು ಈ ಥರ ಕೂತು ಬುಕ್ ಓದದೇ. ಅಡುಗೆನೂ ಮಾಡದೇ ಕೂತು ಓದಿ ಮುಗಿಸಿದೆ,'' 

    ಇವರು ನನಗೆ ಪರಿಚಯ ಆಗಿ 6- 7 ವರ್ಷ ಆಗಿರಬಹುದು. 5 ವರ್ಷದ ಹಿಂದೆ, ನಾನು ಇಲ್ಲಿಗೆ ಬರುವ ಮೊದಲೂ ಈ ಬುಕ್ ತೊಗೊಬೇಕು ಅಂದುಕೊಂಡು, ಅದು ಆಗದೇ ಹಾಗೇ ಬಂದಿದ್ದೆ. 2021 ಅಲ್ಲಿ ಉದಯ್ ಇಂಡಿಯಾ ಗೆ ಬಂದಾಗ ಕೂಡಾ ತರಿಸಲು ಆಗಿರಲಿಲ್ಲ. 2022 ಅಲ್ಲಿ ನಾವೆಲ್ಲಾ ಬಂದಾಗ ಕೂಡಾ ಇವರನ್ನ ಮೀಟ್ ಮಾಡೋಕಾಗಲಿ, ಬುಕ್…

  • ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಯಶೋಧರಾ ದಾಸಪ್ಪ ಅವರು ರಾಜಕಾರಣಿಯಾಗಿ, ಶಾಸನ ಸಭೆಯ ಪ್ರತಿನಿಧಿಯಾಗಿ, ಸ್ವತಂತ್ರ ಭಾರತದಲ್ಲಿ ರಾಜ್ಯದ ಸರಕಾರದ ಮಂತ್ರಿಯಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾದವರು. ದೇಶ ಕಂಡ ಈ ಅಪರೂಪದ ರಾಜಕಾರಣಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರೂ ಆಗಿದ್ದರು. ಇವರು ನಮ್ಮ ರಾಜ್ಯದ ಪ್ರಥಮ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ. ಇವರ ನಂತರ ಈವರೆಗೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ಅಧ್ಯಕ್ಷರ ನೇಮಕ ಆಗಿಲ್ಲ. ಇಂದಿನ ಕಾಂಗ್ರೆಸ್ ಮಂದಿಗೇ ಯಶೋಧರಾ ದಾಸಪ್ಪನವರ ಬಗ್ಗೆ ತಿಳಿದಿರೋದು ಸಂಶಯ. ಯಶೋಧರಾ ಬಗ್ಗೆ, ಅವರ ರಾಜಕೀಯ ಏಳು ಬೀಳುಗಳ ಬಗ್ಗೆ ಸೊಗಸಾಗಿ ಬರೆದಿದ್ದಾರೆ ಲೇಖಕಿ ಡಾ.ಎಚ್.ಎಸ್. ಅನುಪಮಾ. ಅವರು ತಾವು ನಿರೂಪಿಸಿದ ಯಶೋಧರಾ ದಾಸಪ್ಪ ಅವರ ಜೀವನ…

  • ಭಾರತ ಕಂಡ ಶ್ರೇಷ್ಟ ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್ ಅವರು “A Life in Science” ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಈ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಎಂ ಎಸ್ ಎಸ್ ಮೂರ್ತಿ ಇವರು. “ವಿಜ್ಞಾನದೊಳಗೊಂದು ಜೀವನ" ಎಂಬ ಹೆಸರಿನಲ್ಲು ಪ್ರೊ. ರಾವ್ ಅವರ ಆತ್ಮಕಥೆ ಕನ್ನಡಕ್ಕೆ ಬಂದಿದೆ. ಅನುವಾದಕರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ...

    “೧೯೩೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸಿ. ಎನ್. ಆರ್. ರಾವ್ ಇಂದು ವಿಶ್ವವಿಖ್ಯಾತ ರಸಾಯನ ವಿಜ್ಞಾನಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಕಳೆದ ಐದು ದಶಕಗಳಲ್ಲಿ ಟ್ರ್ಯಾನ್ಸಿಶನ್ ಮೆಟಲ್ ಆಕ್ಸೆಡ್‌ಗಳು, ಇನಾರ್ಗ್ಯಾನಿಕ್-ಆರ್ಗ್ಯಾನಿಕ್…

  • ಉತ್ತರಕನ್ನಡದ ಹೆಸರುವಾಸಿ ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅಪರೂಪದ ಪುಸ್ತಕವಿದು. ಕಾಲುದಾರಿಯಲ್ಲಿ ಅಡ್ಡಾಡುವ, ಬೆಟ್ಟಗುಡ್ಡಗಳನ್ನು ಏರಿಳಿಯುವ ಶಿವಾನಂದ ಕಳವೆ ಪ್ರಾಣಿ-ಪಕ್ಷಿ-ಕೀಟಗಳಿಗೆ ದನಿ ಕೊಡುತ್ತಾರೆ.  ಗದ್ದೆತೋಟಗಳ ನಡುವೆ ನಡೆಯುತ್ತಾ, ಬೈಕ್ ಓಡಿಸುತ್ತಾ ಉತ್ತರಕನ್ನಡದ ಮೂಲೆಮೂಲೆಯ ಹಳ್ಳಿ ತಲಪುವ ಅವರು ಗುಡಿಸಲುಗಳ ಒಳಗಿರೋ ಮಾತುಗಳಿಗೆ ಧ್ವನಿಯಾಗುತ್ತಾರೆ. ಎಲ್ಲ ದನಿಗಳಿಗೂ ಅಕ್ಷರದ ರೂಪ ನೀಡಿ, ನಮ್ಮೆದುರು ಅದ್ಭುತ ಚಿತ್ತಾರ ಹರಡುತ್ತಾರೆ.

    “ಸುದ್ದಿ ಕಟ್ಟೆಗೆ ಹೆಜ್ಜೆ” ಎಂಬ ಮುನ್ನುಡಿಯಲ್ಲಿ ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾದ ಹಳ್ಳಿಗಾಡಿನ ತನ್ನ ಆಯ್ದ ನುಡಿಚಿತ್ರಗಳ  ಹಿನ್ನೆಲೆಯನ್ನು ಶಿವಾನಂದ ಕಳವೆ ಬಿಡಿಸಿಟ್ಟ ಪರಿ ಹೀಗೆ: "ಕಾಡುಗುಡ್ಡ ಕಾಲುದಾರಿಯಲ್ಲಿ ನಡೆದು ಹೆದ್ದಾರಿಯ ಸುದ್ದಿ ಕಟ್ಟೆ ಸೇರಬೇಕಿತ್ತು.…

  • ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ.ಶಶಿಕಿರಣ್ ಶೆಟ್ಟಿಯವರು ಬರೆದ ಪುಟ್ಟ ಪುಟ್ಟ ಕತೆಗಳ ಸಂಗ್ರಹವೇ “ಬದುಕ ಬದಲಿಸುವ ಕತೆಗಳು". ಶಶಿಕಿರಣ್ ಇವರು ಈ ಪುಸ್ತಕದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಹಾದು ಹೋದ, ಸಮಾಜದಲ್ಲಿ ನಡೆಯುತ್ತಿರುವ ಮತ್ತು ತಾವು ವಿವಿದೆಡೆಗಳಿಂದ ಕೇಳಿದ ವಿಷಯಗಳನ್ನು ಕತೆಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಕತೆಗಳಿಗೆ ಪುಸ್ತಕವೆಂಬ ಚೌಕಟ್ಟು ಹಾಕಿ ಓದುಗರಿಗೆ ಉಣಬಡಿಸಲು ಹೊರಟಿದ್ದಾರೆ. ಇಲ್ಲಿರುವ ಎಲ್ಲಾ ಕತೆಗಳು ನಮ್ಮ ಸುತ್ತಮುತ್ತಲು ನಡೆಯುವಂಥದ್ದೇ. ಈ ಕಾರಣದಿಂದಲೇ ಕತೆಗಳನ್ನು ಓದುತ್ತಾ ಓದುತ್ತಾ ಅವುಗಳು ನಮಗೆ ಆಪ್ತವಾಗುತ್ತಾ ಹೋಗುತ್ತವೆ. 

    ಲೇಖಕರಾದ ಡಾ.ಶಶಿಕಿರಣ್ ಶೆಟ್ಟಿಯವರ ಬಗ್ಗೆ ಬೆನ್ನುಡಿಯಲ್ಲಿ ಪಿ.ವಿ.ಪ್ರದೀಪ್ ಕುಮಾರ್…

  • ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದು ಒಂದು ಸಾಹಸದ ಕಥೆ. ಏಕೆಂದರೆ ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಹೊರಟಾಗ ನೀವು ನಿಮ್ಮ ಮನದಲ್ಲಿ ಮೂಡಿದ ಕಲ್ಪನಾ ಲಹರಿಗಳನ್ನೆಲ್ಲಾ ಅದರಲ್ಲಿ ಅಳವಡಿಸುವಂತಿಲ್ಲ. ಕಥೆಗೆ ಪೂರಕ ಎಂದು ಅನಗತ್ಯ ವಿಷಯಗಳನ್ನು ತುರುಕುವಂತಿಲ್ಲ. ಇಂತಹ ಕಾದಂಬರಿಗಳನ್ನು ಬರೆಯಲು ತಾಳ್ಮೆ, ತಿರುಗಾಟದ ಹುಚ್ಚು, ಅಧ್ಯಯನ ಪ್ರವೃತ್ತಿ ಎಲ್ಲವೂ ಅತ್ಯಂತ ಅಗತ್ಯ. ಇಂತಹ ಎಲ್ಲಾ ಗುಣಗಳನ್ನು ತುಂಬಿಕೊಂಡಿರುವ ಕನ್ನಡ ಅಪರೂಪದ ಕಾದಂಬರಿಕಾರ ಸಂತೋಷಕುಮಾರ ಮೆಹೆಂದಳೆ ಎಂದರೆ ತಪ್ಪಾಗಲಾರದು. ಏಕೆಂದರೆ ಇವರು ಈ ಹಿಂದೆ ಬರೆದಿರುವ ಕೆಲವು ಕಾದಂಬರಿಗಳನ್ನು ಓದಿದಾಗ ಆ ವಸ್ತು ವಿಷಯಗಳಲ್ಲಿ ಕೈಗೊಂಡ ಆಳವಾದ ಅಧ್ಯಯನದ ವಿಚಾರಗಳು ನಮ್ಮ ಅನುಭವಕ್ಕೆ ಬರುತ್ತದೆ.

    ಅದು…

  • ಕನ್ನಡದ ಸುಪ್ರಸಿದ್ಧ ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಬರೆದ ಪುಸ್ತಕವಿದು. ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 110ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದವರು. ಇದರಲ್ಲಿರುವ ಸೂತ್ರಗಳನ್ನು ಅನುಸರಿಸಿ ಆರೋಗ್ಯವಂತ ವ್ಯಕ್ತಿಗಳಾಗುವುದು ನಮ್ಮ ಕೈಯಲ್ಲೇ ಇದೆ.

    ಈ ಪುಸ್ತಕದ ಮುನ್ನುಡಿಯಲ್ಲಿ ಆರೋಗ್ಯವಂತ ವ್ಯಕ್ತಿಯ ಲಕ್ಷಣಗಳನ್ನು ಅವರು ಹೀಗೆಂದು ತಿಳಿಸಿದ್ದಾರೆ: “ಒಬ್ಬ ವ್ಯಕ್ತಿ ಆರೋಗ್ಯವಂತನಾದ, ಉಪಯುಕ್ತ ಹಾಗೂ ಯಶಸ್ವೀ ವ್ಯಕ್ತಿ ಎನಿಸಿಕೊಳ್ಳಬೇಕಾದರೆ, ಬರಿಯ ದೇಹ ಗಟ್ಟಿ ಮುಟ್ಟಾಗಿದ್ದರೆ ಸಾಲದು. ಮನಸ್ಸೂ ಕೂಡ ಸದೃಢವಾಗಿ ಆರೋಗ್ಯಕರವಾಗಿರಬೇಕು. ಆರೋಗ್ಯಕರ ಮನಸ್ಸಿನ ಲಕ್ಷಣಗಳಿವು: ಸರಾಗವಾಗಿ, ಸುಸಂಸಬದ್ಧವಾಗಿ ಆಲೋಚಿಸುವುದು, ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹಾರವನ್ನು ಕಂಡು ಹಿಡಿಯಲು ಯತ್ನಿಸುವುದು, ಪಂಚೇಂದ್ರಿಯಗಳ ಮೂಲಕ…

  • “ಹೂದೋಟದಲ್ಲಿ ದುರ್ದೈವಿ ಸಂಗ’ ಕವಿ ಸಂಗಪ್ಪ ನಾಗಲಾಪುರ ಅವರ ಕವನ ಸಂಕಲನ. ಈ ಪುಸ್ತಕದ ವಿಶೇಷತೆ ಎಂದರೆ ಸುಮಾರು ೫೦ ವರ್ಷಗಳ ಹಿಂದೆ ಬರೆದ ಕವನಗಳನ್ನು ಮಸ್ಕಿಯ ಅಡ್ಲಿಗಿ ಪ್ರಕಾಶನ ೨೦೨೩ ರಲ್ಲಿ ಪ್ರಕಟಿಸಿದೆ. ಈ ಕವನ ಸಂಕಲನದಲ್ಲಿ ೭೨ ಕವಿತೆಗಳಿವೆ. ಚಿಕ್ಕ ಚಿಕ್ಕ ಕವಿತೆಗಳು ಹಿಡಿದು ದೀರ್ಘ ಕವಿತೆಗಳು ಇವೆ.

    ಕವಿ ಸಂಗಪ್ಪ ನಾಗಲಾಪುರ ಅವರು ತಮ್ಮ ಯೌವನ ಕಾಲದಲ್ಲಿ ಬರೆದ ಕವಿತೆಗಳು. ಕವಿ ನಾಗಲಾಪುರ ಅವರ ಬದುಕಿನ ಸಿಹಿ ಕಹಿ ದುಃಖ ನೋವು ನಿರಾಸೆ ಪ್ರೇಮ ಸರಸ ವಿರಸ ವಿರಹ ಈ ರೀತಿಯ ಅನೇಕ ಮನೋಭಿತ್ತಿಯ ಸಂಗತಿಗಳನ್ನ ಅವರ ಕವಿ ಮನಸ್ಸು ಕಾವ್ಯದಲ್ಲಿ ಬೆಳದಿಂಗಳಂತೆ ಚೆಲ್ಲಿದೆ ಎಂದಿದ್ದಾರೆ. ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ ಲೇಖಕರಾದ ಡಾ. ಮಹಾಂತೇಶ ಪಾಟೀಲ. ಇವರು…

  • ಉದಯೋನ್ಮುಖ ಕಾದಂಬರಿಗಾರ್ತಿ ರಂಜನೀ ಕೀರ್ತಿ ಅವರ ಸಂಗೀತಾತ್ಮಕ ಥ್ರಿಲ್ಲರ್ ಕಾದಂಬರಿ ‘ಪಸಾ’ ಇತ್ತೀಚೆಗೆ ಬಿಡುಗಡೆಯಾಗಿದೆ. ಕಾದಂಬರಿಯು ಅತ್ಯಂತ ರೋಚಕವಾಗಿ ಸಾಗುತ್ತಾ, ಎಲ್ಲಿಯೂ ಬೋರ್ ಹೊಡೆಸದೇ ಮುಂದುವರಿಯುತ್ತದೆ. ಈ ಕಾದಂಬರಿಯ ಕುರಿತಾಗಿ ನಾಡಿನ ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮತ್ತು ಈ ಕೃತಿಗೆ ಬೆನ್ನುಡಿಯನ್ನು ಬರೆದು ಲೇಖಕಿಯ ಬೆನ್ನು ತಟ್ಟಿದ್ದಾರೆ. ಅವರು ಬೆನ್ನುಡಿಲ್ಲಿ ಬರೆದ ವಾಕ್ಯಗಳು ನಿಮ್ಮ ಓದಿಗಾಗಿ…

    ‘ಪಸಾ' ರಂಜನೀ ಕೀರ್ತಿ ಅವರ ರೋಚಕ ಕಿರು ಕಾದಂಬರಿ. ಕಥನದ ವೇಗ ಮತ್ತು ಅನಿರೀಕ್ಷಿತ ತಿರುವುಗಳು ಈ ಕೃತಿಯ ಓದನ್ನು ಒಂದು ತ್ರಿಲಿಂಗ್ ಅನುಭವವಾಗಿಸುತ್ತವೆ. ಪ್ರಖ್ಯಾತ ಶಾಸ್ತ್ರೀಯ ಸಂಗೀತ ವಿದ್ವಾಂಸ…

  • ಪ್ಲಾಸ್ಟಿಕ್ ಎಂಬ ವಸ್ತು ನಮ್ಮ ಪರಿಸರವನ್ನು ಪೆಡಂಭೂತದಂತೆ ಕಬಳಿಸುತ್ತಾ ಹೋಗುತ್ತಿದೆ. ಮಣ್ಣಿನಲ್ಲಿ, ನೀರಿನಲ್ಲಿ ಕರಗದ ಈ ಪ್ಲಾಸ್ಟಿಕ್ ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ಈ ಬಗ್ಗೆ ಹಲವಾರು ಕೃತಿಗಳು ಹೊರಬಂದಿದ್ದರೂ ಪ್ಲಾಸ್ಟಿಕ್ ಮಾಡುವ ಹಾನಿಯ ಬಗ್ಗೆ ಹೇಳುವುದು ಇನ್ನೂ ಉಳಿದಿದೆ. ಈ ಕೃತಿಯಲ್ಲಿ ಪ್ಲಾಸ್ಟಿಕ್ ಕಸವನ್ನು ಹೆಕ್ಕುವವರ ಬಗ್ಗೆ ಲೇಖಕಿ ಎಚ್ ಎಸ್ ಅನುಪಮಾ ಅವರು ಮಾಹಿತಿ ನೀಡುತ್ತಾ ಹೋಗಿದ್ದಾರೆ. ಅವರು ಈ ಕೃತಿಯ ಬಗ್ಗೆ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿದೆ. ಓದಿ…

    “ನಾವೇ ಸೃಷ್ಟಿಸಿದ ಕಸದ ಬಗೆಗೆ ನಮಗೆ ಎಷ್ಟು ಅಸಡ್ಡೆಯೆಂದರೆ ಅದನ್ನು ಮುಟ್ಟಲೂ ಅಸಹ್ಯ. ಕಸ ಎತ್ತಲೆಂದೇ ಒಂದು ಜಾತಿಯನ್ನು…