ಪುಸ್ತಕ ಸಂಪದ

  • ರವಿ ಬೆಳಗೆರೆಯವರ ಅಕಾಲ ನಿಧನದ ಬಳಿಕ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆದ, ಪ್ರಕಟವಾಗದೇ ಉಳಿದಿದ್ದ, ಅಪೂರ್ಣವಾಗಿದ್ದ ಬರಹಗಳು ಒಂದೊಂದಾಗಿ ಪುಸ್ತಕರೂಪದಲ್ಲಿ ಹೊರ ಬರುತ್ತಿದೆ. ಅದೇ ಸಾಲಿಗೆ ಸೇರುವ ಒಂದು ಪುಸ್ತಕ ಇತ್ತೀಚೆಗೆ ಹೊರ ಬಂದಿದೆ. ಈ ಪುಸ್ತಕದ ಬಹಳಷ್ಟು ವಿಷಯಗಳನ್ನು ರವಿ ಬೆಳಗೆರೆ ತಮ್ಮ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದಿದ್ದಾರೆ. ಒಂದು ಸಮಯದಲ್ಲಿ ನಕ್ಸಲ್ ಚಳುವಳಿಯ ಮೇಲೆ ಒಲವಿದ್ದ ರವಿ ಬೆಳಗೆರೆ ಪತ್ರಕರ್ತರಾಗಿದ್ದ ಸಮಯದಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಸ್ಥಾಪಕ ಕೊಂಡಪಲ್ಲಿ ಸೀತಾರಾಮಯ್ಯ ಅವರ ಸಂದರ್ಶನ ಮಾಡಿದ್ದರು. ಈ ಸಂದರ್ಶನದ ಪೂರ್ಣ ಪಾಠವನ್ನು 'ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ' ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.

  • ಹದಿನೈದು ಸಣ್ಣ ಕತೆಗಳ ಪುಟ್ಟ ಪುಸ್ತಕ. ಎಲ್ಲ ಕತೆಗಳನ್ನು ಓದಿ ಮುಗಿಸಿದ ಬಳಿಕ ಪ್ರತಿ ಕಥೆಯ ಪಾತ್ರಗಳೂ ಕಾಡುತ್ತವೆ. ಕಾರಣ ಕತೆಗಾರ್ತಿ ಕಟ್ಟಿಕೊಟ್ಟ ಬಗೆಯೇ ಹಾಗಿದೆ. ಬಹುಶಃ ಉತ್ತರ ಕನ್ನಡ ಜಿಲ್ಲೆಯ ಓದುಗರಿಗೆ ಹೆಚ್ಚು ಆಪ್ತವಾಗುವ ಸಂಕಲನ ಇದು. ಇಲ್ಲಿಯ ಭಾಷೆ, ಜನ, ಕಥೆಯ ಜಗತ್ತು ಮತ್ತು ಅಲ್ಲಿಂದಲೇ ಹೆಕ್ಕಿ ತಂದಂತಿರುವ ಪಾತ್ರಗಳು ನಮ್ಮ ಊರಲ್ಲೇ ಇದ್ದವರು ಅನ್ನಿಸುವಂತಿದೆ. ಹಾಗೆ ನೋಡಿದರೆ ಪ್ರತಿ ಮನೆಯಲ್ಲೂ ಕತೆಗೊಂದು ಪಾತ್ರ ದೊರೆಯುತ್ತದೆ. ಎಷ್ಟೋ ಮನೆಯ ಕತೆ ಒಂದಕ್ಕೊಂದು ತೀರಾ ಭಿನ್ನವೇನಲ್ಲ. ಹಾಗಾಗಿ ಈ ಕಥೆಗಳು ಇಲ್ಲಿ ಬಳಸಿದ ಭಾಷೆಯನ್ನು ಹೊರತು ಪಡಿಸಿ ಭಾವವಾಗಿ ಎಲ್ಲರ ಮನಸ್ಸನ್ನು ತಟ್ಟುತ್ತವೆ.

    ಕಥೆಗಳು ಸರಳ ಇದ್ದಷ್ಟು ಇಡಿಯಾಗಿ ಓದುಗರನ್ನು ತಲುಪುತ್ತದೆ…

  • ವೀರಲೋಕ ಪ್ರಕಾಶನ ಸಂಸ್ಥೆಯಿಂದ ಹೊರಬಂದಿರುವ ನಂದಿನಿ ಹೆದ್ದುರ್ಗ ಅವರ ಕವಿತೆಗಳ ಸಂಗ್ರಹ ‘ಒಂದು ಆದಿಮ ಪ್ರೇಮ. ತಮ್ಮ ಕವಿತೆಗಳ ಬಗ್ಗೆ, ಅವುಗಳು ಹುಟ್ಟಿದ ಸಮಯ ಮೊದಲಾದುವುಗಳ ಬಗ್ಗೆ ಖುದ್ದು ಕವಯತ್ರಿ ನಂದಿನಿ ಅವರು ತಮ್ಮ ಮೊದಲ ಮಾತಿನಲ್ಲಿ ಬರೆದದ್ದು ಹೀಗೆ…

    “ಮದ್ಯಾಹ್ನ ಮೌನವಾಗಿದೆ. ಥೇಟು ನನ್ನಂತೆ. ನನ್ನದು ಇಳಿಹೊತ್ತಾ ನಡುಮದ್ಯಾಹ್ನವಾ ತಿಳಿಯುತ್ತಿಲ್ಲ. ತಿಳಿದು ಮಾಡುವುದಾದರೂ ಏನು. ತೃಣಮಪಿ ನ ಚಲತಿ ತೇನವಿನಾ. ಕಾಲ ತನ್ನಷ್ಟಕ್ಕೆ ತಾನು ಎಳೆಬೆಳಗು ನಡುಬಿಸಿಲು ಇಳಿಸಂಜೆಯೂ ಹೌದು. ಬಿಸಿಲು ಹಾದು ಹೋಗಿ ಬೆಚ್ಚಗಿರುವ ಈ ಮೆಟ್ಟಿಲುಗಳ ಮೇಲೆ ಕೂತು ಯೋಚಿಸುತ್ತಿದ್ದೇನೆ. ಮಳೆ ಮುನಿಸಿಕೊಂಡ ಹೊತ್ತು. ಏನಾದರೂ ಬರೆಯಬೇಕಿತ್ತು. ಏನೂ ಹೊಳೆಯುತ್ತಿಲ್ಲ. ಅಸಲಿಗೆ ಏನೂ…

  • ನಾಗೇಶ್ ಜೆ ನಾಯಕ ಇವರು ಬರೆದಿರುವ ನೂತನ ಪುಸ್ತಕ “ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು" . ಈ ಕೃತಿಗೆ ಲೇಖಕರಾದ ಪ್ರಕಾಶ ಗ.ಖಾಡೆ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ನಿಮ್ಮ ಓದಿಗಾಗಿ...

    “ಕನ್ನಡದ ಹೆಸರಾಂತ ಸಾಹಿತಿಗಳು , ಮಿತ್ರರಾದ ಸವದತ್ತಿಯ ನಾಗೇಶ ಜೆ. ನಾಯಕ ಅವರು ನಮ್ಮ ನಡುವಿನ ಅತ್ಯಂತ ಕ್ರಿಯಾಶೀಲ ಲೇಖಕರು. ಅವರ ಬರವಣಿಗೆ ವೈವಿಧ್ಯಮಯವಾದುದು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಬರೆದು ಛಾಪು ಮೂಡಿಸಿದ್ದಾರೆ. ಅವರ ಕಾವ್ಯವಂತೂ ಸವಿಯಾದುದು. ಗಜಲ್ ಮೂಲಕ ಗುರುತಿಸಿಕೊಂಡು ಅನೇಕ ಗಜಲ್ ಸಂಕಲನಗಳನ್ನು ಕೊಟ್ಟು ಜನಪ್ರಿರಾದವರು. ಓದಿನ ಹಸಿವನ್ನು ಸದಾ ಹಸಿಯನ್ನಾಗಿಯೇ ಇಟ್ಟುಕೊಂಡು ಬಂದು ನಿರಂತರ…

  • ಉಡುಪಿ ಜಿಲ್ಲೆಯ ಕುಂದಾಪುರ ಹತ್ತಿರದ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮಾಹಿತಿ ನೀಡುವ ಪುಸ್ತಕ ಇದು. ಸಾಲಿಗ್ರಾಮದ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮುಂಚೆಯೂ ಕೆಲವು ಪುಸ್ತಕಗಳು ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾದ ಕೆಲವು ಆಕರ ಪುಸ್ತಕಗಳು: ಕೋಟ ಶಂಕರನಾರಾಯಣ ಕಾರಂತರ "ಕೂಟ ಮಹಾಜಗತ್ತು, ಕೂಟ ಬ್ರಾಹ್ಮಣರ ಮೂಲ ಮತ್ತು ಸಾಲಿಗ್ರಾಮ ಕ್ಷೇತ್ರ ಮಹಾತ್ಮ್ಯೆ” ಪುಸ್ತಕ; ವಿದ್ವಾಂಸ ಮತ್ತು ಸಂಶೋಧಕರಾಗಿದ್ದ ಡಾ. ಪಾ. ನ. ಮಯ್ಯರು ರಚಿಸಿರುವ “ಕೋಟದವರು" ಎಂಬ ಗ್ರಂಥ. ಇದು ಅವುಗಳ ಸಾಲಿಗೆ ಸೇರುವ ಮತ್ತೊಂದು ಗಮನಾರ್ಹ ಪ್ರಕಟಣೆ.

    ಇದರ ಲೇಖಕರಾದ ಎ.ಎಸ್.ಎನ್. ಹೆಬ್ಬಾರರು ಅನೇಕ ಆಕರ ಗ್ರಂಥಗಳು, ಪತ್ರಿಕೆಗಳು, ದಾಖಲೆಗಳನ್ನು ಅಧ್ಯಯನ ಮಾಡಿ ಇದನ್ನು ರಚಿಸಿದ್ದಾರೆ. ಇವರು, ಉಡುಪಿಯ…

  • ಜಗದೀಶ ಬ ಹಾದಿಮನಿ ಅವರು ಬರೆದ ಕಥೆಗಳ ಸಂಗ್ರಹವೇ “ಕಾಡ ನಾಡ ತೋಳಗಳು". ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಶ್ರೀಶೈಲ ಆರ್. ಗೋಲಗೊಂಡ ಇವರು. ತಮ್ಮ ಮುನ್ನುಡಿಯಲ್ಲಿ ಇವರು ಬರೆದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ...

    “ಸಾಹಿತ್ಯದ ಓದು-ಬರಹ ಹಾಗೂ ಸಂಘಟನೆಗಳಲ್ಲಿ ನಿರಂತರತೆಯನ್ನು ಮೈಗೂಡಿಸಿಕೊಂಡಿರುವ ನನ್ನ ಆತ್ಮೀಯ ವಿದ್ಯಾರ್ಥಿ ಮಿತ್ರರೂ ಮತ್ತು ಕನ್ನಡ ಉಪನ್ಯಾಸಕರೂ ಆಗಿರುವ ಜಗದೀಶ, ಬ. ಹಾದಿಮನಿ ಅವರು ಈಗಾಗಲೇ 'ಮುಗ್ಧೆ' ಕವನ ಸಂಕಲನ (2018) 'ಪ್ರೇಮಮಯಿ' ಖಂಡ ಕಾವ್ಯ (2019) ಹಾಗೂ 'ಬೆರಳಚಂದ್ರ'- ಗೀತನಾಟಕ (2020) ಪ್ರಕಟಿಸಿ ಕನ್ನಡ ಕಾವ್ಯ ಲೋಕದಲ್ಲಿ ಪ್ರತಿಭಾ ಸಂಪನ್ನ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ದಿನಗಳ ಹಿಂದೆಯೆ ನನ್ನನ್ನು ಮುಖತಃ…

  • ಹೆಸರಾಂತ ಬರಹಗಾರ್ತಿ ಲತಾ ಗುತ್ತಿಯವರ ನೂತನ ಕಾದಂಬರಿ ‘ಚದುರಂಗ' ಈ ಬೃಹತ್ (೪೭೦ ಪುಟಗಳು) ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಬಸವರಾಜ ಕಲ್ಗುಡಿ. ಇವರು ತಮ್ಮ ಮುನ್ನುಡಿಯಲ್ಲಿ ಕಾದಂಬರಿಯ ಕುರಿತಾಗಿ ಬಹಳ ಸೊಗಸಾಗಿ ವರ್ಣನೆ ಮಾಡಿದ್ದಾರೆ. ಇವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...

    “ಲತಾ ಗುತ್ತಿ ಅವರು ಕನ್ನಡದ ಹೆಸರಾಂತ ಬರಹಗಾರರು. ಇವರು ಮುಖ್ಯವಾಗಿ ಕಾದಂಬರಿ, ಕಾವ್ಯ, ಪ್ರವಾಸ ಮತ್ತು ಕಥಾ ಸಾಹಿತ್ಯದಲ್ಲಿ ತಮ್ಮ ಹೆಸರನ್ನು ಗಟ್ಟಿ ಗೊಳಿಸಿಕೊಂಡಿದ್ದಾರೆ. ಜೀವನ ಚರಿತ್ರೆ, ಅನುವಾದ ಮುಂತಾದ ಪ್ರಕಾರಗಳಲ್ಲಿಯೂ ಇವರು ಗುರುತರವಾದ ಕೆಲಸವನ್ನು ಮಾಡಿದ್ದಾರೆ. ಕನ್ನಡದ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳು ಇವರ ಬರವಣಿಗೆಗೆ ಸಂದಿವೆ. ಲತಾ…

  • ಕನ್ನಡ ಸಾಹಿತ್ಯಕ್ಕೊಂದು ಅಪೂರ್ವ ಕೊಡುಗೆ ಈ ಪುಸ್ತಕ. ತಮಿಳಿನ ಅಗ್ರ ಸಾಹಿತಿ ಡಾ. ಸ್ವಾಮಿನಾಥ ಅಯ್ಯರ್ ಅವರ ಆಯ್ದ ಪ್ರಬಂಧಗಳ ಈ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದವರು ಬಿ.ಜಿ.ಎಲ್. ಸ್ವಾಮಿ ಅವರು.

    ಮುನ್ನುಡಿಯಲ್ಲಿ ಮೂಲ ಲೇಖಕರನ್ನು ಬಿ.ಜಿ.ಎಲ್. ಸ್ವಾಮಿಯವರು ಪರಿಚಯಿಸಿದ ಪರಿ: “ಕಳೆದ ನೂರು ವರ್ಷಗಳಲ್ಲಿ ತಮಿಳು ನುಡಿ ಸಮೃದ್ಧಿ ಹೊಂದುವುದಕ್ಕೆ ಇಬ್ಬರು ಮಹಾ ಮೇಧಾವಿಗಳು ಕಾರಣವೆಂದು ಹೇಳಬಹುದು. ಒಬ್ಬರು ಪಾಂಡಿತ್ಯ, ಸಂಶೋಧನೆ, ಮುದ್ರಣ ಸಾಮರ್ಥ್ಯ ಮತ್ತು ಋಜುತ್ವವುಳ್ಳವರು. ಮತ್ತೊಬ್ಬರು ಕವಿತ್ವಶಕ್ತಿ, ದೇಶಭಕ್ತಿ, ಭಾವನಾಸಂಪತ್ತುಗಳು ಹೆಚ್ಚಾದವರು. ಮಹಾಮಹೋಪಾಧ್ಯಾಯ ದಾಕ್ಷಿಣಾತ್ಯ ಕಲಾನಿಧಿ ಡಾಕ್ಟರ್ ಸ್ವಾಮಿನಾಥ ಅಯ್ಯರ್ ಮೊದಲನೆಯವರು. ಕವಿಯರಸ ಸುಬ್ರಹ್ಮಣ್ಯ ಭಾರತಿಯವರು ಮತ್ತೊಬ್ಬರು. ….

    ಸ್ವಾಮಿನಾಥ ಅಯ್ಯರ್…

  • ‘ಯಾಬ್ಲಿ’ ಎಚ್.ಆರ್. ರಮೇಶ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬದುಕಿನ ಅನೇಕ ಸಂಗತಿ ಮತ್ತು ಅನುಭವಗಳಿಗೆ ಮುಖಾಮುಖಿಯಾಗಿ ಅದನ್ನೆಲ್ಲ ಕತೆಯಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಹಿಡಿದಿಡಲು ಪ್ರಯತ್ನಪಟ್ಟರೂ ಸಿಕ್ಕುವುದು ಒಂದು ಚುಕ್ಕಿಯಷ್ಟು ಮಾತ್ರ. ಆ ಅಷ್ಟಾದರೂ ಕತೆಯಲ್ಲಿ / ಕಲೆಯಲ್ಲಿ ಯಥಾವತ್ತಾಗಿ ಮೂಡುವುದಾ, ನೋ ವೇ! ವಾಸ್ತವವೆನ್ನುವುದು ಯಾವ ಕಾರಣಕ್ಕೂ ಭಾಷೆಯಲ್ಲಿ ಇದ್ದ ಹಾಗೆ ಮೂಡುವುದೇ ಇಲ್ಲ. ಅದು ಬೇರೆ ಬಗೆಯಲ್ಲೇ ಇರುತ್ತದೆ. ಏನನ್ನೋ ಹೇಳಲು ಹೋಗಿ ಮತ್ತೊಂದನ್ನು ಹೇಳುವುದು. ಇದು ಅಚ್ಚರಿ. ಹೇಳಬೇಕಾದ ಕತೆಗಳು ಆವಿಯಾಗಿ ಯಾವುದೋ ಮೂಲೆಯಿಂದ ನಮಗೆ ಗೊತ್ತಿಲ್ಲದ ಕತೆಗಳು, ಕತೆಗಳು ಅಲ್ಲ ಎನ್ನಬಹುದಾದವುಗಳು ಹೊರ ಮೂಡುವುವು. ಒಮ್ಮೊಮ್ಮೆ ಮರೆಯಾದ ಕತೆಗಳೇ…

  • ಆಂಧ್ರಪ್ರದೇಶ ಮೂಲದ ವಲ್ಲೂರು ಹುಸೇನಿ ಅವರು ತಮ್ಮ “ಹುಸೇನಿ ದ್ವಿಪದಿಗಳು” ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಕವಿ, ವಿಮರ್ಶಕರೂ ಆದ ನಾಗೇಶ ಜೆ ನಾಯಕ ಇವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ವಲ್ಲೂರು ಹುಸೇನಿ ಅವರು ತಮ್ಮ ಲೇಖಕರ ನುಡಿ “ದಿಲ್ ಕೀ ಬಾತ್" ನಲ್ಲಿ ಮನದಾಳದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದು ಹೀಗೆ...

    “ಆಂಧ್ರ ಮೂಲದ 'ಹುಸೇನಿ' ಕೇವಲ 'ಕವಿ'ಯೆಂದೆನಿಸಿಕೊಳ್ಳಲು ಅವಸರದಿ ಕೃತಿ ಪ್ರಕಟಿಸಿದರೆಂದ ಹಿರಿಯರ ಮಾತಿಗೆ ಐದು ವರ್ಷಗಳ ಬೊಗಸೆ ತುಂಬಿಸುತ್ತಿದ್ದೇನೆ. ಇಲ್ಲಿ ಬೆನ್ನುಡಿ ಬಿಟ್ಟು ಯಾವುದೇ ಸಾಹಿತಿಗಳ ಮುನ್ನುಡಿ ಮತ್ತು ಅಭಿಪ್ರಾಯಗಳಿರುವುದಿಲ್ಲ. ಓದುಗ ಪ್ರೇಮಿಗಳೇ ಈ ಕೃತಿಗೆ ಮುನ್ನುಡಿಗಾರರೆಂದು ಭಾವಿಸಿ ತಮ್ಮ…