ನಿಮ್ಮ ಆಲೋಚನೆಗಳು ಮುಖ್ಯ ಅನ್ನಿಸಿ ಈ ಮಾತು. ಬಿ ಯುವರ್ ಸೆಲ್ಫ್ ಅನ್ನುವುದಕ್ಕೆ "ನೀನೇ ಅಗಿರು" ಅನ್ನುವುದು ಸೂಕ್ತವಾದ ಕನ್ನಡ ಮಾತು.
ಇಂಡಿವಿಜಿಯುಲ್ ಅನ್ನುವ ಮಾತಿನ ತಾಯಿ ಬೇರು "ವಿಭಜಿಸಲಾಗದ" ಇನ್-ಡಿವಿಸಿಬಲ್ ಎಂಬುದರಂಥದ್ದು. ಕನ್ನಡದಲ್ಲಿ ಯಾವುದನ್ನು ಅಖಂಡ, ಪೂರ್ಣ ಅನ್ನುತ್ತೇವೋ ಅದಕ್ಕೆ ಸಮವಾದದ್ದು. ನಾವು ಇಂಡಿವಿಜಿಯುಲ್ ಗಳು ಅಲ್ಲ. ಬೇರೆ ಬೇರೆ "ವ್ಯಕ್ತಿತ್ವ"ಗಳನ್ನು ಬೆಳೆಸಿಕೊಂಡವರು.
ವ್ಯಕ್ತಿತ್ವ ಅನ್ನುವುವುದ ಪರ್ಸನಾಲಿಟಿ. ಪರ್ಸೊನ ಎಂದರೆ ಮುಖವಾಡ. ವ್ಯಕ್ತಿತ್ವಗಳೆಲ್ಲ ಮುಖವಾಡಗಳೇ. ವ್ಯಕ್ತಿತ್ವ ಎಂಬುದು ಏನಿದ್ದರೂ ಇತರರ ಸಲುವಾಗಿ ನಾವು ಧರಿಸಿಕೊಳ್ಳುವ ಮಾಸ್ಕ್‌ಗಳು. ವ್ಯಕ್ತಿತ್ವ ವಿಕಸನ, ಪರ್ಸನಾಲಿಟಿ ಡೆವೆಲಪ್‌ಮೆಂಟ್ ಇವೆಲ್ಲ ಆಳದಲ್ಲಿ ಅಪಾಯಕಾರಿಗಳು. ಪರ್ಸನಾಲಿಟಿ ಅಲ್ಲ ಇಂಡಿವಿಜಿಯಾಲಿಟಿ ಮುಖ್ಯ. ಮನಶ್ಶಾಸ್ತ್ರದಲ್ಲಿ ಇಂಡಿವಿಜುಯೇಶನ್ ಮುಖ್ಯವಾದ ಕಲ್ಪನೆ. ಭಗವದ್ಗೀತೆಯಲ್ಲಿ ಹೇಳುವ ಸ್ವಧರ್ಮ ಮತ್ತು ಸ್ವ-ಭಾವಗಳು ಇಂಡಿವಿಜಿಯಾಲಿಟಿಗೆ ಸಂಬಂಧಿಸಿದವೇ ಹೊರತು ಪರ್ಸನಾಲಿಟಿಗೆ ಅಲ್ಲ. ನಾನು ನಾನೇ ಅಗಿರುವುದು, ಎಲ್ಲ ಸಂದರ್ಭಗಳಲ್ಲೂ, ಎಲ್ಲ ಕಾಲದಲ್ಲೂ ಮುಖ್ಯವೇ ಅಲ್ಲವೇ?
ನೀನೇ ಆಗಿರು