ಒಂದು ಪೆನ್ ಡ್ರೈವ್ ಸುತ್ತಾ...
23 hours 54 minutes ago - Shreerama Diwanaಮತ್ತೆ ಬೆತ್ತಲಾದ ಕೆಲವು ಕನ್ನಡ ಟೆಲಿವಿಷನ್ ಸುದ್ದಿ ಮಾಧ್ಯಮಗಳು. ಸಾಮಾನ್ಯವಾಗಿ ಇತ್ತೀಚಿನ ಟೆಲಿವಿಷನ್ ನ್ಯೂಸ್ ಚಾನೆಲ್ ಗಳು ಇನ್ನೂ ಘಟನೆಗಳು ಘಟಿಸುವುದಕ್ಕೆ ಮುನ್ನವೇ ಊಹಾಪೋಹ, ಗಾಳಿ ಮಾತುಗಳ ಆಧಾರದ ಮೇಲೆ ಬ್ರೇಕಿಂಗ್ ನ್ಯೂಸ್ ಮಾಡುವುದನ್ನು ಗಮನಿಸಿದ್ದೇವೆ. ಆದರೆ ಕಳೆದ ಮೂರು ನಾಲ್ಕು ದಿನಗಳಿಂದ ಹಾಸನದಲ್ಲಿ ಕೆಲವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ/ಬಲವಂತದ ಚಿತ್ರೀಕರಣ/ಆ ಮೂಲಕ ಬ್ಲಾಕ್ ಮೇಲ್/ವಿಕೃತ ಕಾಮ/ಅಧಿಕಾರದ ದರ್ಪ ಮತ್ತು ದುರುಪಯೋಗ/ನಂಬಿಕೆ ದ್ರೋಹ/ಅತ್ಯಾಚಾರ/ವ್ಯಭಿಚಾರ ಮುಂತಾದ ಆರೋಪಿಗಳಿಗೆ ಸಾಕ್ಷಿಯಾಗಬಹುದಾದ ಸಿಡಿ/ ಪೆನ್ ಡ್ರೈವ್ ಗಳು ಹಂಚಿಕೆಯಾಗುತ್ತಿದೆ. ಅದು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.
ಮೊದಲಿಗೆ ಇಡೀ ಹಾಸನದ ಮಾತ್ರ ಕುತೂಹಲ ಕೆರಳಿಸಿದ್ದ ಆ ವಿಷಯ ಈಗ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಇಷ್ಟು ದೊಡ್ಡ, ವ್ಯಾಪಕ ಮತ್ತು ಗಂಭೀರ ವಿಷಯವನ್ನು ಸುದ್ದಿ ಮಾಧ್ಯಮಗಳು ಸಂಪೂರ್ಣವಾಗಿ ಮರೆಮಾಚಿವೆ. ಯಾವುದೋ ಒತ್ತಡಕ್ಕೋ, ಆಮಿಷಕ್ಕೋ, ಮುಲಾಜಿಗೋ ಬಲಿಯಾಗಿ ಇದನ್ನು ಒಂದು ಸುದ್ದಿಯಾಗಿ ಪ್ರಸಾರ ಮಾಡುತ್ತಲೇ ಇಲ್ಲ. ಅವರ ದೃಷ್ಟಿಯಲ್ಲಿ ಇದೊಂದು ಮೇಘ ಬ್ರೇಕಿಂಗ್ ನ್ಯೂಸ್ ಆಗಬೇಕಿತ್ತು. ಆದರೆ ಬಹುಶಃ ಒಂದು ಚಾನೆಲ್ ಹೊರತುಪಡಿಸಿ, ಸಂಪೂರ್ಣ ರಾಜ್ಯಕ್ಕೆ ವ್ಯಾಪಿಸಿದ ಮೇಲೆ, ಅದೂ ಮೂರು ದಿನಗಳ ನಂತರ ಪ್ರಸಾರ ಮಾಡಿತು. ಇತರರು ಈ ಬಗ್ಗೆ ಮಾತನಾಡಲೇ ಇಲ್ಲ.
ಒಂದು ವೇಳೆ ತಾಂತ್ರಿಕವಾಗಿ, ನೈತಿಕವಾಗಿ ಅಥವಾ ಕಾನೂನಾತ್ಮಕವಾಗಿ ನ್ಯಾಯಾಲಯದ ನಿಷೇಧವಿದ್ದರು ಸಹ ಇದನ್ನೇ ಪರೋಕ್ಷವಾಗಿ, ಒಂದು ಅಪರಾಧವಾಗಿ, ಯಾರ ಹೆಸರನ್ನು ಪ್ರಸ್ತಾಪಿಸದೆ ಸುದ್ದಿಯಾಗಿ ಪ್ರಸಾರ ಮಾಡಲು ಅವಕಾಶವಿದೆ. ಆ ಪೆನ್ ಡ್ರೈವ್ ದೃಶ್ಯಗಳು ಪ್ರಸಾರ ಮಾಡಲು ಯೋಗ್ಯವಲ್ಲ ನಿಜ. ಆದರೆ ಅದರಲ್ಲಿ ರಾಜ್ಯ… ಮುಂದೆ ಓದಿ...