ಅಮ್ಮ ನಿನ್ನ ಕರುಣೆಯ

ಅಮ್ಮ ನಿನ್ನ ಕರುಣೆಯ

ಬರಹ

ಅಮ್ಮ ನಿನ್ನ ಕರುಣೆಯ ಮಡಿಲಲ್ಲಿ ನಾನೀರ ಬೇಕಮ್ಮ
ಅಮ್ಮ ನಿನ್ನ ಮುದ್ದಿನ ಮಗುವಾಗಿ ನಿನ್ನ ನಗೆಸುತಿರಬೇಕಮ್ಮ

ನವಮಾಸದಿ ಕಷ್ಟಪಟ್ಟು ನನಗೆ ಜನ್ಮ ನೀಡಿದೆಯಮ್ಮ
ನನಗೆ ಜನ್ಮ ನೀಡಿ ನೀ ಮರುಜನ್ಮ ಪಡೆದೆಯಮ್ಮ

ಎದೆ ಹಾಲೆಂಬ ಅಮೃತವನು ನೀ ಕೂಡಿಸಿದೆಯಮ್ಮ
ಹರಕಲುಟ್ಟು ಹೊಸಬಟ್ಟೆಯ ನನಗೆ ಉಡಿಸಿದೆಯಮ್ಮ

ಧೀರ್ಘಆಯುಷ್ಯವಂತನಾಗೆಂದು ಅನುದಿನ ಹರೆಸಿದೆಯಮ್ಮ
ನಿನ್ನ ದುಃಖವ ಮರೆತು ನನ್ನ ಕಷ್ಟವ ನೀ ಮರೆಸಿದೆಯಮ್ಮ

ವರಕೊಡುವ ಗುಡಿ ದೇವರನು ನಾ ಕಾಣೆನಮ್ಮ
ಫಲಕೊಡುವ ಕಾಮಧೇನುವಾಗಿ ನಿನ್ನ ನಾ ಕಂಡೆನಮ್ಮ

ತಾಯಿ ಮೊದಲ ಗುರು ಎಂಬ ಗಾದೆಯನು ನಿಜವಾಗಿಸಿದೆಲ್ಲಮ್ಮ
ಎಲ್ಲ ಬಂಧುಗಳನು ನಿನ್ನಲ್ಲಿ ನಾನಿಂದು ಕಂಡೆನಮ್ಮ

ನನ್ನ ಗಾಯದ ನೋವನು ನೀ ಅನುಭವಿಸಿದೆಯಮ್ಮ
ನನ್ನ ಜಯದ ಆನಂದ ಭಾಷ್ಪವನು ನಿನ್ನ ಕಣ್ಣಲ್ಲಿ ನಾ ಕಂಡೆನಮ್ಮ

ಯಾವ ಜನ್ಮದ ಪುಣ್ಯವೊ ನಿನ್ನ ಮಗನಾಗಿ ಹುಟ್ಟಿದೆನಮ್ಮ
ಈ ಋಣವನು ತೀರಿಸಲು ನೊರು ಜನ್ಮ ಸಾಲದಮ್ಮ