ಎಚ್ಚರ! ವೈಟ್ ಬ್ರೆಡ್ ಸೇವನೆಯಿಂದ ಕ್ಯಾನ್ಸರ್ ಸಾಧ್ಯತೆ

ಎಚ್ಚರ! ವೈಟ್ ಬ್ರೆಡ್ ಸೇವನೆಯಿಂದ ಕ್ಯಾನ್ಸರ್ ಸಾಧ್ಯತೆ

ಇಂದಿನ ವಿಷಯ ನಿಮ್ಮ ಮತ್ತು ನಿಮ್ಮ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದೆ. ಬಿಳಿ ಬ್ರೆಡಿನ ಸೇವನೆಯು ಬಹಳ ಅಪಾಯಕಾರಿ ಆಗಿದ್ದು; ಕ್ಯಾನ್ಸರ್ ಕೂಡ ಆಗಬಹುದು ಎಂದು ಹೇಳಲಾಗಿದೆ. ಇದು ಕೇವಲ ಹೇಳಿಕೊಂಡ ಮಾತು ಅಲ್ಲ; ಇದರ ಕುರಿತು ಸಂಶೋಧನೆಯು ನಡೆದಿದೆ. ಈ ಸಂಶೋಧನೆಯಲ್ಲಿ 1,18,210 ಜನರ ದತ್ತಾಂಶವನ್ನು ವಿಮರ್ಶಿಸಲಾಗಿದೆ. ಅತಿಯಾದ ಬಿಳಿ ಬ್ರೆಡ್ಡಿನ ಸೇವನೆಯಿಂದ ಕೊಲೋ-ರೆಕ್ಟಲ್ ಕ್ಯಾನ್ಸರ್ ಕೂಡ ಆಗಬಹುದು ಎಂದು ಕಂಡು ಹಿಡಿಯಲಾಗಿದೆ. ಇದೇ ಕೊಲೋ-ರೆಕ್ಟಲ್ ಕ್ಯಾನ್ಸರ್ ಆಲ್ಕೋಹಾಲಿನ ಸೇವನೆಯಿಂದಲೂ ಆಗಬಹುದು. ಅಪಾಯಕಾರಿ ಆಲ್ಕೋಹಾಲಿನಿಂದ ಆಗುವ ಕ್ಯಾನ್ಸರ್, ಈಗ ಬಿಳಿ ಬ್ರೆಡ್ ನಿಂದ ಕೂಡ ಆಗುತ್ತಿದೆ ಅಂದರೆ ಆ ಬ್ರೆಡ್ದು ಎಷ್ಟು ಅಪಾಯಕಾರಿ ಆಗಬಹುದು ಎಂದು ಊಹಿಸಬಹುದು!

ನೀವು ಅತೀಯಾಗಿ ಬಿಳಿ ಬ್ರೆಡ್ಡನ್ನು ಸೇವಿಸುತ್ತಿದ್ದರೆ, ಅದನ್ನು ತಕ್ಷಣ ತ್ಯಜಿಸಿರಿ. 16 ನವೆಂಬರ್ 2023ರಂದು ಈ ಸಂಶೋಧನೆಯನ್ನು ನೆರವೇರಿಸಿ, ಪ್ರಕಟಿಸಲಾಗಿತ್ತು. ನೀವು ಆ ಸಂಶೋಧನೆಯನ್ನು ಅಧ್ಯಯನವನ್ನು ಮಾಡಲು ಬಯಸಿದರೆ: "Diet Wide Association, Genetic Susceptibility and Colorectal Cancer Risk: A Prospective Cohort Study" ಹೆಸರಿನಲ್ಲಿ ಸಿಗುತ್ತದೆ. ಈ ಸಂಶೊಧನೆಯಲ್ಲಿ 139 ಆಹಾರ ಪದಾರ್ಥಗಳ ಕುರಿತು ಮತ್ತು ಅವುಗಳ ಪೌಷ್ಟಿಕಾಂಶಗಳ ಮೌಲ್ಯಗಳನ್ನು ಹೇಗೆ ನಿರ್ಧಾರಿಸಲಾಗುತ್ತದೆ ಎಂದು ವಿವರಿಸಲಾಗಿದೆ; ಹಾಗೆಯೇ, ಅವುಗಳು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎಂದೂ ತೋರಿಸಲಾಗಿದೆ.

ಸುಮಾರು 13 ವರ್ಷಗಳಿಂದ ಈ ಸಂಶೋಧನೆ ನಡೆಸಿದ, ಈ ಮಾಹಿತಿಯನ್ನು ಸಂಗ್ರಹಿಸಿ, ಫಲಿತಾಂಶವನ್ನು ಬಹಿರಂಗಗೊಳಿಸಲಾಗಿತ್ತು. ಚೈನಾ ಮತ್ತು ಸ್ಕೊಟಿಷ್ ವಿಶ್ವವಿದ್ಯಾಲಯದ ಸಂಶೋಧಕರು ಈ ಸಂಶೋಧನೆಯನ್ನು ನಡೆಸಿದ್ದರು; UKಯ ಬಯೋ ಬ್ಯಾಂಕಿನಿಂದ ದತ್ತಾಂಶವನ್ನು ತೆಗೆದುಕೊಳ್ಳಲಾಗಿತ್ತು ಮತ್ತು ಆ ಡಾಟಾ ಆಧರಿಸಿ ನಮ್ಮ ಬದಲಾಗುತ್ತಿರುವ ಜೀವನಶೈಲಿಯಿಂದ ನಾವು ಹೇಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದು ಶೊಧಿಸಲಾಗಿದೆ. ಜಗತ್ತಿನ 20ರಿಂದ 25% ಕ್ಯಾನ್ಸರ್ ಕೇವಲ ನಮ್ಮ ಆಹಾರದಿಂದ ಆಗುತ್ತಿದೆ ಎಂದೂ ಕಂಡು ಹಿಡಿಯಲಾಗಿದೆ.

ಅಂದರೆ, ಕ್ಯಾನ್ಸರ್ ರೋಗವನ್ನು ಹುಟ್ಟು ಹಾಕುವಲ್ಲಿ ನಮ್ಮ ನಿತ್ಯದ ಆಹಾರ ಪ್ರಮುಖ ಪಾತ್ರ ವಹಿಸುತ್ತಿದೆ. ಕೊಲೋರೆಕ್ಟಲ್ ಕ್ಯಾನ್ಸರ್ ಕರುಳಿನ ಕ್ಯಾನ್ಸರ್ ಆಗಿದೆ; ಕೊಲೋನ್ ಅಥವಾ ಗುದನಾಳದ ಜೀವಕೋಶಗಳಿಂದ ಪ್ರಾರಂಭಗೊಂಡು ಜೀರ್ಣಾಂಗ ವ್ಯವಸ್ಥೆಯವರೆಗೆ ತಲುಪುತ್ತದೆ. ಈ ಕ್ಯಾನ್ಸರ್ ಜಗತ್ತಿನಲ್ಲಿ ಮೂರನೇ ಸಾಮಾನ್ಯ ಕ್ಯಾನ್ಸರ್ ಆಗಿದೆ; ಹೆಚ್ಚಾಗಿ ವಾರದಿಯಾಗುತ್ತಿರುವ ಕ್ಯಾನ್ಸರ್ ಗಳಲ್ಲಿ ಕೊಲೋ ರೆಕ್ಟಲ್ ಕ್ಯಾನ್ಸರ್ ಮೂರನೇ ಸ್ಥಾನ ಪಡೆದಿದೆ. ಹಾಗೆಯೇ, ಈ ಅಪಾಯಕಾರಿ ಕ್ಯಾನ್ಸರ್ ಗೆ ಬಿಳಿ ಬ್ರೆಡ್ ಮೂಲವಾಗಿದೆ. ಆ 1,18,210 ಅಂಕಿ-ಅಂಶಗಳಲ್ಲಿ 1466 ಕೊಲೋ ರೆಕ್ಟಲ್ ರೋಗಿಗಳು ಪತ್ತೆಯಾದರು; ಅವುಗಳಲ್ಲಿ 842 ಕರುಳಿನ ಕ್ಯಾನ್ಸರ್ ಮತ್ತು 359 ಗುದನಾಳದ ಕ್ಯಾನ್ಸರ್ ರೋಗಿಗಳಾಗಿದ್ದಾರೆ.

ಈ ಸಮಸ್ಯೆ ಉಂಟಾಗಲು ಬಿಳಿ ಬ್ರೆಡ್ ನಲ್ಲಿ ಏನಿದೆ? : ಬಿಳಿ ಬ್ರೆಡ್ ನಲ್ಲಿ ಕಡಿಮೆ ಪೋಷಕಾಂಶಗಳಿವೆ ಎನ್ನಲಾಗಿದೆ. ಇದರಲ್ಲಿ ಕಡಿಮೆ ಗುಣಮಟ್ಟದ ಕ್ಯಾಪ್ಸ್ ಮತ್ತು ಸಕ್ಕರೆ ಇದೆ. ಇದರಲ್ಲಿ ಹೈ ಗ್ಲೈಸೆಮಿಕ್ ಇಂಡೆಕ್ಸ್ ಅತೀಯಾಗಿರುತ್ತದೆ; ಇದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ತ್ವರಿತವಾಗಿ ಏರಿಸುತ್ತದೆ. ಅಮೇರಿಕನ್ ಡೈಬಿಟಿಸ್ ಅಸೋಸಿಯೇಷನ್ ಅವರು ಮಧುಮೇಹ ರೋಗಿಗಳೂ ಬಿಳಿ ಬ್ರೇಡ್ ನ ಸೇವನೆಯನ್ನು ತ್ಯಜಿಸಬೇಕು ಎಂದು ಎಚ್ಚರಿಸಿದ್ದಾರೆ. ಅವರು ಹೋಲ್ ಗ್ರೈನ್ ಬ್ರೆಡ್ ಸೇವಿಸಲು ಸೂಚಿಸಿದರು. ಎರಡು ವರ್ಷಗಳಲ್ಲಿ UK ಯಲ್ಲಿ ಬಿಳಿ ಬ್ರೆಡ್ ನ್ನು ಹೋಲುವಂತಹ ಬ್ರೆಡ್ ಬರಲಿದೆ; ಆದರೆ, ಅವುಗಳಲ್ಲಿ ಉತ್ತಮ ಗುಣಮಟ್ಟದ ಪೋಷಕಾಂಶಗಳಿರುತ್ತದೆ. ಇಂತಹ ಆರೋಗ್ಯಕರ ಬ್ರೆಡ್ ಉತ್ಪಾದಿಸುವಲ್ಲಿ UK ಸರಕಾರವೇ ಹಣ ನೀಡುತ್ತಿದೆ ಎಂದು BBC ವರದಿ ಮಾಡಿದೆ. UK ಸರಕಾರದ ಧನಸಹಾಯದ ಬಳಿಕ ಬಿಳಿ ಬ್ರೆಡ್ಡಿನ ರುಚಿಯಿರುವ ಹೊಸ ಬ್ರೆಡ್ಡಿನ ಶೋಧನೆಗಾಗಿ ವಿಜ್ಞಾನಿಯರು ದುಡಿಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ಆರೋಗ್ಯಕರ ಬ್ರೆಡ್ ಮಾರುಕಟ್ಟೆಗೆ ಬರಲಿದೆ ಎಂದು ವಿಜ್ಞಾನಿಯರು ಹೇಳಿದ್ದಾರೆ.

- ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು