ಎಲ್ಲಿ ಜಾರಿತೋ ಮನವು?

ಎಲ್ಲಿ ಜಾರಿತೋ ಮನವು?

ಬರಹ

ಬಹುಶ್: ತುಂಬಾ ದಿನಗಳ ನಂತರ ಒಬ್ಬಳೆ ಬಸ್ ನಲ್ಲಿ ದೂರ ಪ್ರಯಾಣ ಮಾಡಿದೆ ಅಂತನ್ನಿಸುತ್ತೆ
ಆ ನಾಲ್ಕು ಘಂಟೆಗಳ ಕಾಲ ನಾನು ನಾನೆ ಆಗಿದ್ದೆ. ಒರಿಜಿನಲ್ ರೂಪ ಆಗಿದ್ದೆ.
ಬೆಳಗ್ಗೆ ಚಾರ್ಜ್ ಮಾಡಿರದ ಕಾರಣ ಎರೆಡೂ ಮೊಬೈಲ್ ಆಫ್. ಹಾಗಾಗಿ ನೊ ಕಾಲ್ಸ್. ಇಲ್ಲವಾದರೆ ರಚ್ಚೆ ಹಿಡಿದ ಮಗುವಿನಂತೆ ಅದನ್ನು ಕೈಲೇ ಹಿಡಿದುಕೊಳ್ಳಬೇಕಾಗುತ್ತಿತ್ತು. ಅದನ್ನ ಬ್ಯಾಗಿಗೆ ಹಾಕಿ ನಿರಾಳವಾಗಿದ್ದೆ.

ಬಸ್‌ನಲ್ಲಿ ಹೋಗಿದ್ದರಿಂದ ಲ್ಯಾಪ್‌ಟಾಪ್ ಜೊತೆಗಿರಲಿಲ್ಲ.

ಅಮ್ಮಾ ಏನಾದ್ರೂ ಕೊಡು ಅಂತ ತಲೆ ತಿನ್ನುವ ಮಗು ಇರಲಿಲಲ್ಲ.
ಯಾವ ಕೋರ್ಸ್ ಇದೆ . ಡೀಟೈಲ್ ಹೇಳಿ ಅನ್ನೊ ಎನ್‌ಕೌರಿ ಇಲ್ಲ

ಆರಾಮಾವಾಗಿ ಯಾರೊಡನೆಯೂ ಮಾತಾಡದೆ ಕಾಲ ಕಳೆಯುವ ಖುಶಿ ಇದೆಯಲ್ಲ ಅದನ್ನೂ ಪಡೆಯುವದಕ್ಕೂ ಯೋಗ ಬೇಕು.

ಇಲ್ಲವಾಗಿದ್ದರೆ ಕೆ.ಪಿ.ಎನ್‌ರವರ ಬಸ್ ಅಷ್ಟೊಂದು ಖಾಲಿ ಇರುತ್ತಿರಲಿಲ್ಲ .
ಒಟ್ಟು ಹತ್ತು ಹದಿನೈದು ಜನರು ಒಬ್ಬಬ್ಬರಿಗೆ ಎರೆಡೆರೆಡು ಸೀಟ್ ಸಿಕ್ಕಿತ್ತು :).
ಮಾತಿಗೂ ಯಾರೂ ಸಿಗಲಿಲ್ಲ ಎಲ್ಲಾ ಮೊಬೈಲ್ಗಳ್ಳನ್ನು ಕೈನಲ್ಲಿ ಹಿಡಿದುಕೊಂಡು ಏನೊ ಘನಂದಾರಿ ಕೆಲಸ ಮಾಡುತ್ತಿದ್ದರು. ಕೆಲವರು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಮಹದಾನಂದ ಪಡುತ್ತಿದ್ದರು.
ಇನ್ನೂ ಕೆಲವರು ತಾವು ಬಸ್‌‌ನಲ್ಲಿ ಇರೋದು ಅನ್ನೋದನ್ನೆ ಮರೆತು ಜೋರಾಗಿ ಫೋನ್‌ನಲ್ಲಿ ಮಾತಾಡುತ್ತಿದ್ದರು
ನಾನು ಕುಳಿತಿದ್ದ ಬಸ್ಸೋ ಬರೀ ತಮಿಳಿನ ಹಾಡುಗಳನ್ನೇ ಹಾಕುತಿದ್ದರು. ಅದು ಅವರ ಹಕ್ಕು ಏಕೆಂದರೆ ನಾನು ಹತ್ತಿದು ತಮಿಳು ನಾಡಿನವರ ಬಸ್ಸನ್ನೆ. ಕೆಲವು ಹಾಡುಗಳು ಇಂಪಾಗಿದ್ದವು. ಅದನ್ನೂ ಕೇಳುತ್ತಾ ಕುಳಿತಿರೋಣ ಎಂದರೂ ಬೋರ್‍. ನಮ್ಮ ಭಾಷೆಯ ಹಾಡು ಸವಿದಷ್ಟು ಸಂತಸ ಸಿಗುವುದಿಲ್ಲವಲ್ಲ

ನಿದ್ದೆ ಮಾಡೋಣವೆಂದುಕೊಂಡರೆ ನಿದ್ದೆ ಬರಲಿಲ್ಲ. ನನಗೆ ಪ್ರಯಾಣದ ಸಮಯದಲಿ ನಿದ್ದೆ ಬರುವುದಿಲ್ಲ. ಆ ವಿಚಾರದಲ್ಲಿ ಅದೃಷ್ಟವಂತಳು. ಏಕೆಂದರೆ ದಾರಿ ಪೂರ್ತಿ ನಿಸರ್ಗದ ಚೆಲುವನ್ನೆಲ್ಲಾ ಸವೆಯಬಹುದು.

ಮನದ ತುಂಬಾ ಏನೇನೂ ಸಂಭಂಧವಿರದ ಯೋಚನೆಗಳು.

ಬಸ್ ಇಲ್ಲಿಯೇ ಕಾಡಿನ ಹತ್ತಿರ ನಿಲ್ಲಬೇಕು ರಿಪೇರಿಯಾಗಬೇಕು.
ನಾನು ಇಲ್ಲಿಯೆ ಎಲ್ಲಾದರೂ ತಪ್ಪಿಸಿಕೊಳ್ಳಬೇಕು.

ಯಾವುದಾದರೂ ಹಳ್ಳಿಯಲ್ಲಿ ಹೆಸರೇ ಇಲ್ಲದಂತೆ ಬಾಳಬೇಕು. ಅಲ್ಲಿನ ಜನರಿಗೆ ಅಕ್ಶರ ಕಲಿಸಿ, ವ್ಯವಸಾಯ ಮಾಡಿ...... ಆಂತನ್ನಿಸುತ್ತಿದ್ದಂತೆಯೆ

ಅಯ್ಯೊ ಯಶಿತಾ (ನನ್ನ ಮಗಳು ) ಏನು ಮಾಡ್ತಾಳೆ ಅವಳಪ್ಪ ಬೇರೆ ಮದುವೆ ಮಾಡಿಕೊಂಡರೆ ಅವಳನ್ನ ಯಾರು ನೋಡ್ಕೋತಾರೆ?. ನನ್ನ ಇನ್ಸ್ಟಿಟ್ಯೂಟ್ ಜನ ನನ್ನ ನಂಬಿ ಅವರ ಭವಿಷ್ಯವನ್ನು ಇಲ್ಲಿ ಇಟ್ಟಿದ್ದಾರೆ. ಅವರ ಗತಿ ಏನು? ನಾನು ತಪಿತಸ್ತಳಾಗುತ್ತೇನಲ್ಲವೇ? ಅಂತ ಮತ್ತೊಂದೆಡೆ ಯೋಚನೆ

ಮತ್ತೊಮೆ ಹಿಂದೆ ಶ್ರೀದೇವಿಯವರು ಬರೆದಂತೆ ಮೋಡಗಳಲ್ಲಿ ಕಲೆ ಹುಡುಕುವ ಕೆಲಸ ಶುರು ಮಾಡಿದೆ. ಅಲ್ಲಲ್ಲಿ ಏನೇನೋ ಚಿತ್ತಾರಗಳು. ಯಾವೊದೋ ಒಂದು ಹಾವಿನಂತಹ ವಿಚಿತ್ರ ಪ್ರಾಣಿ ಮೋಡದ ಆಕಾರ ತಾಳಿ ನಮ್ಮ ಬಸ್‌ನ ಜೊತೆಗೆ ಬರುತ್ತಿತ್ತು. ಅದರ ಮುಂದೆ ಬಂದ ಮೀನು, ಜಿಂಕೆ ಹೀಗೆ ಬಂದ ಪ್ರಾಣಿಗಳೆಲ್ಲ ಅದಕ್ಕೆ ಬಲಿಯಾಗುವಂತೆ ಕರಗುತ್ತಿದ್ದವು.

ಸ್ವಲ್ಪ ಹೂತ್ತಿನ ನಂತರ ಒಂದು ಯೊಚನೆ ಬಂತು . ಕಣ್ಣನ್ನ ಕಿರಿದಾಗಿಸಿಕೊಂಡು ನೋಡಿದರೆ ಏನೇನೊ ವಿಚಿತ್ರ ದಾರದಂತಹ ಆಕೃತಿ ಕಾಣುತ್ತವೆ. ಅದನ್ನೂ ಮಾಡಿ ಸ್ವಲ್ಪ ಹೊತ್ತು ನಲಿದೆ

ಬಸ್ ನಿಂತಿತು. ಕಾಫಿಗೋ . ಟಿಫಿನ್‌ಗೊ

ಹಿಂದೆ ಇದ್ದ ವ್ಯಕ್ತಿಯೊಬ್ಬ " ಕ್ಯಾನ್ ಯು ಜಾಯಿನ್ ಮಿ ಫಾರ್ ಕಾಫಿ ? " ಎಂದಾಗ

ಕೆಂಡದಷ್ಟು ಕೋಪ ಬಂತು . ನನ್ನ ಏಕಾಂತ ಕ್ಕೆ ಭಂಗ ಪಡಿಸಿದನಲ್ಲ. ಆದರೂ ಸಾವರಿಸಿಕೊಂಡು " ನೋ ಥ್ಯಾಂಕ್ಸ್ " ಹೇಳಿದೆ. ಆತ ಇಳಿದು ಹೋದ

ಮತ್ತೆ ಶುರು ಕಲ್ಪನಾ ಲಹರಿ

ಆಗಸದಿಂದ ೧೦೦೦ ಕೋಟಿ ಹಣ ಬಂದು ನನ್ನ ಮುಂದೆ ಬೀಳಬೇಕು
ತೆಗೆದುಕೊಂಡು ಹೋಗಿ ನಮ್ಮ ಏರಿಯಾದ ಸೈಟ್‍೬ನೆಲ್ಲಾ ಕೊಂಡು. ಚೆನ್ನಾಗಿರುವ ಮನೆಗಳನ್ನ ಕಟ್ಟಿ ಮನೆ ಬಾಡಿಗೆ ಕಟ್ಟಲಾಗದೆ ಒದ್ದಾಡುತ್ತಿರುವ ಜನರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಕೇವಲ ನಿರ್ವಹಣಾ ವೆಚ್ಚ ಮಾತ್ರ ಪಡೆಯಬೇಕು. ನಮ್ಮ ಏರಿಯಾದಲ್ಲಿ ಮನೆ ಬಾಡಿಗೆಗೆ ಕೊಟ್ಟು ಬಾಡಿಗೆದಾರರನ್ನೆಲ್ಲ ಸುಲಿಗೆ ಮಾಡುತ್ತಿರುವಾ ಮಾಲೀಕರಿಗೆ ಬುದ್ದಿ ಕಲಿಸಬೇಕು.
ಆದರೆ ಐ.ಟಿಯವರಿಗೆ ಏನಂತಹ ಹೇಳಬೇಕು. ಅವರು ನಂಬುತ್ತಾರಾ. ಆಮೇಲೇ ನಂಗೆ ತೊಂದರೆಯಾಗಬಹುದು ...........................

ಹೀಗೆಲ್ಲಾ ಯೋಚಿಸುತ್ತಿದ್ದಂತೆಯೆ ಬಸ್ ಸ್ಟಾರ್ಟ್ ಆಗಿ ಚಂದಾಪುರ ದಾಟಿ ಎಲೆಕ್ಟ್ರಾನಿಕ್ ಸಿಟಿಗೆ ಬಂದು ನಿಂತಿತು.
ನನ್ನ ಯೋಚನೆಗೆ ನಗುತ್ತಾ ಬಸ್ನಿಂದ ಇಳಿದೆ.

ನೆನ್ನೆ