ಒಂದು ನೀನು ಇನ್ನೊಂದು ಮಧು

ಒಂದು ನೀನು ಇನ್ನೊಂದು ಮಧು

ಬರಹ

ಕೋಪದಲಿ ಕಚ್ಚದಿರು ಬಿರುಸಾಗಿ ತುಟಿಯನು
ನಾಲಿಗೆ ಹೊಂಚು ಹಾಕಿವೆ ಮಧು ಪಾನ ಮಾಡಲು
*** *** ***
ನೆನಪ ರಣಬೇಗೆಯಲಿ ತುಟಿಗಳು ಬಿರುಸಾಗಿವೆ
ಬಿರುಕು ಬಿಟ್ಟ ಸಂಧಿಯಲಿ ತುಂಬು ಮಧುಪಾಕ
*** *** ***
ಮೊಗದಲ್ಲಿರುವ ತುಟಿಗಳು ತುಟಿಗಳಲ್ಲ: ಅವು
ಮಧು ತುಂಬಿದ ಹಚ್ಚ ಹಸಿರಿನ ಎಲೆಗಳು
*** *** ***
ಸವಾರಿ ಮಾಡಲಿ ತುಟಿಯ ಮಧುಕುಂಚ
ನನ್ನ ತುಟಿ ಹಾಳೆಯ ಪ್ರೇಮ ಹೃದಯದಲಿ
*** *** ***
ಭುವಿಯಲಿ ಕಂಡಿದ್ದು ಎರಡೇ ಎರಡು
ಒಂದು ನೀನು ಇನ್ನೊಂದು ಮಧು