ಒಂದು ಸಣ್ಣ ತಲೆ - ಹರಟೆ

ಒಂದು ಸಣ್ಣ ತಲೆ - ಹರಟೆ

ಬರಹ

ಮೊನ್ನೆ ಸ್ನೇಹಿತರ ಮನೆಯಲ್ಲಿ ಸಂತೋಷ ಕೂಟವೊಂದಕ್ಕೆ ಹೋಗಿದ್ದೆ. ಅನೇಕ ಮನರಂಜನಾ ಕಾಯಱಕ್ರಮಗಳಲ್ಲಿ ಆಶು ಭಾಷಣವೂ ಇತ್ತು. ಎಲ್ಲರೂ ಬಲವಂತವಾಗಿ ನನ್ನನ್ನು ವೇದಿಕೆಗೆ ನೂಕಿದಾಗ ನನಗೆ ಬಂದ ವಿಷಯ ತಲೆ! ಮುಂದೆ ಮ್ಐಕು, ಸಾಕಷ್ಟು ಜನ ಮತ್ತು ಸಾವಱಜನಿಕವಾಗಿ ಧ್ಐಯಱವಾಗಿ ಮಾಡನಾಡಲು ಬಾರದ ಪರಿಸ್ಥಿತಿಯಿಂದ ನನ್ನ ತಲೆ ಬಿಸಿಯಾಯಿತು. ಆದರೂ ಸಾವರಿಸಿಕೊಂಡು ನನ್ನ ತಲೆಯಾಂತರಾಳದಲ್ಲಿ ಅಲ್ಲಲ್ಲಿ ಹುದುಗಿದ್ದನ್ನು, ನೆನಪು ಬಂದಷ್ಟನ್ನು ಹೆಕ್ಕಿ ತೆಗೆದು ನಾಲ್ಕು ಮಾತು ಹೇಳುವಷ್ಟರಲ್ಲಿ ಸಾಕು ಸಾಕಾಗಿತ್ತು. ಮನೆಗೆ ಬರುವ ದಾರಿಯುಲ್ಲಿ ನಿಧಾನವಾಗಿಯೋಚಿಸಿದಾಗ ತಲೆಯ ಬಗ್ಗೆ ಸಾಕಷ್ಟು ವಿಷಯಗಳು ಪುಂಖಾನುಪುಂಖವಾಗಿ ನನ್ನ ತಲೆಯಿಂದ ಬರತೊಡಗಿದವು. ಆ ಸಮಯಕ್ಕೆ ಸರಿಯಾಗಿ ಸ್ಪಂದಿಸದ ನನ್ನ ತಲೆಗೆ ಒಂದು ಪುಟ್ಟ ಏಟನ್ನೂ ಕೊಟ್ಟೆ ಎನ್ನಿ. ಮನೆಗೆ ಬಂದೊಡನೆ ನನ್ನ ತಲೆ ತಲೆಯ ಬಗ್ಗೆ ನೀಡಿದ ವಿಷಯಗಳನ್ನು ದಾಖಲಿಸಿದೆ.

ಏನಾದರೂ ದಡ್ಡ ಕೆಲಸ ಮಾಡಿದರೆ ಸಾಮಾನ್ಯರ ಪ್ರತಿಕ್ರಿಯೆ ಅಂದರೆ, ಏನೋ ನಿಂಗೆ ತಲೆ ಇಲ್ವಾ? ಅಂತ. ಕಣ್ಣಿಗೆ ಅಷ್ಟು ಚೆನ್ನಾಗಿ ಕಾಣುವ ಎದುರಿಗಿರುವ ವ್ಯಕ್ತಿಯ ತಲೆಯನ್ನು ನೋಡುತ್ತಲೇ ತಲೆ ಇಲ್ವಾ ಎಂದು ಕೇಳುವವನಿಗೇ ತಲೆ ಒಳಗೆ ಏನಾದರೂ ಇದೆಯಾ ಅಥವಾ ಕಣ್ಣು ಕಾಣುತ್ತದಾ ಎಂದು ಅನಿಸುವುದಿಲ್ಲವೇ? ತಲೆಯೊಳಗೆ ಬುದ್ಧಿ ಇಲ್ಲಾ ಎಂದರೆ ಹೆಚ್ಚು ಸಮಯೋಚಿತವಾದೀತು; ಆ ತಲೆಯ (ಅಲ್ಪ ಸ್ವಲ್ಪ) ಮಯಾಱದೆಯೂ ಉಳಿದೀತು. ಹೆಚ್ಚಾಗಿ ಮಾತನಾಡುವವರನ್ನು ಕಂಡಾಗ ಜನರೆನ್ನುತ್ತಾರೆ: ಸುಮ್ಮನೇ ನನ್ನ ತಲೆ ತಿನ್ನಬೇಡ, ಹೋಗು ಅಂತ. ಅಬ್ಬಬ್ಬಾ! ತಲೆ ತಿನ್ನುವವರೂ ಇದ್ದಾರೆಯೇ ಎಂದು ಆ ತಲೆಗೆ ಎಷ್ಟು ಗಾಭರಿಯಾಗಿರಬೇಡ ಅಥವಾ ಹಾಗೆಂದವನಿತೆ ನಾನ್ಯಾವಾಗ ಪ್ರಾಣಿಗಳ ಲಿವರ್, ಬೋಟಿ, ಕ್ಐ ಕಾಲು ಇತ್ಯಾದಿಗಳನ್ನು ತಿನ್ನುವುದನ್ನು ಬಿಟ್ಟು ತಲೆ ತಿನ್ನಲು ಪ್ರಾರಂಭಿಸಿದೆ ಎಂಬ ಪ್ರಶ್ನೆಯೂ ಬಂದೀತಲ್ಲವೇ?

ಒಮ್ಮೆ ಇಬ್ಬರು ಜಗಳವಾಡುತ್ತಿದ್ದರು. ನಿನಗೆ ತಲೆ ತಿರುಗ್ರಾ ಇದೆ ಎಂದು ಒಬ್ಬ ಬ್ಐದರೆ ಇನ್ನೊಬ್ಬ ಕೂಡ ನಿನಗೂ ತಲೆ ತಿರುಗ್ತಾ ಇದೆ ಎಂದ. ಆದರೆ, ಇಬ್ಬರ ತಲೆಯೂ ಒಂದಿಷ್ಟೂ ತಿರುಗದ್ದನ್ನು ಕಂಡ ನಾನು ನನ್ನ ತಲೆ ತಿರುಗುತ್ತಿದೆಯೋ ಎಂದು ಕ್ಐ ಮುಟ್ಟಿ ನೋಡಿಕೊಂಡಾಗ ನನ್ನ ತಲೆಯೂ ತಿರುಗದೇ ಇರುವುದನ್ನು ಕಂಡು ಮ್ಐ ಪರಚಿಕೊಂಡೆ. ಬಹುಶ: ಈಗ ತಲೆ ತಿರುಗುವ ಸರದಿ ನಿಮ್ಮದಾಗಿರಬಹುದು!?! ವ್ಐದ್ಯರ ಬಳಿ ಹೋದಾಗ ಕೂಡ ಅನೇಕರು ಹೇಳುವುದನ್ನು ನಾವು ಕೇಳಿದ್ದೇವೆ: ಡಾಕ್ಟ್ರೇ, ನನಗೆ ತಲೆ ತಿರುಗುತ್ತಿದೆ! ತಲೆಯೊಳಗೇನೋ ತಳಮಳವಾಗಿದೆ ಎನ್ನುವ ಬದಲು ಈ ರೀತಿ ತಲೆಯನ್ನು ಸುಮ್ಮನೆ ತಿರುಗುತ್ತಿದೆ ಎನ್ನುವುದು ತರವೇ? ಇನ್ನು ತಲೆಯನ್ನು ಇಷ್ಟ ಬಂದ ಹಾಗೆ ತಿರುಗಿಸಲು ಅದಕ್ಕೇನು ತಿರುಗುಣಿ ಇದೆಯೇ ಅಥವಾ ಅದೇನು ಬುಗುರಿಯೇ? ಮತ್ತೆ ಕೆಲವರ ಮಾತು ನೋಡಿ: ಅವರಿಗೇನ್ರೀ ಸಾಕಷ್ಟು ದುಡ್ಡಿದೆ. ಆದರೆ ತಲೆಯೇ ನಿಲ್ಲಲ್ಲಾ ಎಂದು. ಆದರೆ ತಲೆ ನಿಲ್ಲಲು ಅದಕ್ಕೇನು ಕಾಲಿದೆಯೇ? ಇನ್ನು ಕೆಲವು ಶಿಕ್ಷಕರು ಹುಡುಗರಿಗೆ ಹೇಳುವ ಮಾತು ನೋಡಿ: ಸ್ವಲ್ಪ ತಲೆ ಓಡಿಸಿ ನೋಡಿ, ನಿಮಗೇ ಉತ್ತರ ತಿಳಿದೀತು ಎಂದು. ತಲೆಯನ್ನು ಓಡಿಸುವ ಪರಿ ಎಂತಪ್ಪಾ ಅನ್ನಿಸದೇ? ಮತ್ತೆ ಕೆಲವರೆನ್ನುತ್ತಾರೆ: ತಲೆಯನ್ನು ಸರಿಯಾಗಿ ಉಪಯೋಗಿಸಿ! ಉಪಯೋಗಿಸಲದೇನು ಸೋಪೇ, ಬಟ್ಟೆಯೇ ಅಥವಾ ಇನ್ನ್ಯಾವುದೇ ವಸ್ತುವೇ? ಬುದ್ಧಿ ಉಪಯೋಗಿಸಿ ಎಂದರೆ ಸರಿಯಪ್ಪಾ. ಇದೆಲ್ಲಾ ದೇಹಕ್ಕೆ ಶಿಖರಪ್ರಾಯವಾಗಿರುವ ತಲೆಯ ಬಗ್ಗೆ ನಾವು ಮಾಡುತ್ತಿರುವ ಅಪಮಾನ, ಅವಹೇಳನ ಮತ್ತು ತೋರಿತ್ತಿರುವ ಉದಾಸೀನ ತಾನೇ? ತಲೆಯೇ ಇಂದ್ರಿಯಗಳೆಲ್ಲದರ ಮ್ಐನ್ ಸ್ವಿಚ್. ತಲೆ ಕೆಲಸ ಮಾಡದಿದ್ದರೆ ಉಳಿದುದದೆಲ್ಲವೂ ಕೇವಲ ಅಲಂಕಾರಿಕ ವಸ್ತುಗಳು. ಆದರೂ ಮನಬಂದಂತೆ ತಲೆಯ ಬಗ್ಗೆ ಲಘುವಾಗಿ ಮಾತಾಡುವುದು ನಿಜವಾದ ತಲೆ ಇರುವ ಮನುಜನಿಗೆಷ್ಟು ಸೂಕ್ತ? ನೀವೇನಂತೀರಿ?

ಇನ್ನು ಪುರಾಣಗಳಲ್ಲಿ ತಲೆಯ ಕಥೆ ನೋಡಿ. ತಾಯಿಯ ಆಜ್ಞೆ ಪಾಲಿಸಲು ತಲೆದಂಡ ಕೊಟ್ಟ ಪಾವಱತಿ ಪುತ್ರ ಗಣಪ. ತನ್ನ ತಲೆಯ ಮೇಲೆಯೇ ಮೋಹಿನಿಯ ಚಾಕಚಕ್ಯತೆಯಿಂದ ಕ್ಐಯಿಟ್ಟುಕೊಂಡು ಬೂದಿಯಾದ ಭಸ್ಮಾಸುರ. ರಾವಣನಿಂದ ತಲೆಯ ಮೇಲೆ ಗುದ್ದಿಸಿಕೊಂಡ ಬಾಲಗಣಪ. ಹಿರಣ್ಯಕಶುಪಿವಿನ ಸಂಹಾರಕ್ಕೆ ಸಿಂಹ ತಲೆ ಧರಿಸಿದ ನರಸಿಂಹ (ಹರಿ) - ಹೀಗೆ ಹಲವು. ಇನ್ನು ರಾವಣದ ಹತ್ತು ತಲೆ ಬಗ್ಗೆ ವಿಶೇಷ ವ್ಯಾಖ್ಯಾನ ಅನಗತ್ಯ! ಮನುಜನ ತಲೆ ಹೋಗಿ ಆನೆಯ ತಲೆಯಲ್ಲಿ ಬಾಳಬೇಕಾದ ಗಣಪನ ಪರಿ, ತನ್ನ ಕ್ಐಯನ್ನು ತಲೆ ಮೇಲಿಟ್ಟುಕೊಂಡು ಸ್ವತ: ನಾಶನಾದ ಭಸ್ಮಾಸುರನ ಪರಿ, ಹತ್ತು ತಲೆಗಳನ್ನು ನಿವಱಹಿಸಬೇಕಾದ ರಾವಣನ ಪರಿ - ನಿಮ್ಮ ಊಹೆಗೇ ಬಿಟ್ಟದ್ದು. ಪುರಾಣಾಂತರಾಳದಲ್ಲಿ ಇನ್ನೆಷ್ಟು ಇಂತಹ ತಲೆ ಪುರಾಣಗಳಿವೆಯೋ? ತಲೆವಂತರೇ ಬೆಳಕು ಚೆಲ್ಲಬೇಕು.

ಹೀಗೆ ತಲೆ ಬಗ್ಗೆ ಚಿಂತನ-ಮಂಥನ ನಡೆದಿರುವಾಗ ಫಕ್ಕನೆ ಹೊಳೆದದ್ದು ಮತ್ತೊಂದು ವಿಶಿಷ್ಟವಾದ ತಲೆ ಬಗ್ಗೆ. ಅದೇ ಬಕ್ಕ ತಲೆ! ತಾಮ್ರದ ಬಾಂಡ್ಲೆಯನ್ನೂ ನಾಚಿಸುವ, ಅದಕ್ಕಿಂತಲೂ ಫಳಫಳವೆನ್ನುವ ಮತ್ತು ವಿವಿಧ ಡಿಸ್ಐನ್, ಸ್ಟ್ಐಲ್ ಮತ್ತು ಮಾಡೆಲ್ ಗಳಲ್ಲಿರುವ ಈ ಬಕ್ಕ ತಲೆ ಬಾಂಡ್ಲೆಯ ವಿಚಾರವೇ ಬೇರೆ. ಭೂಮಿಯ ತಾಪಮಾನ ಏರಿಕೆಯಾಗುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ, ಇದಕ್ಕೆ ಬಕ್ಕತಲೆಯವರೂ ಒಂದು ಪ್ರಮುಖ ಕಾರಣವೆಂದರೆ ನಿಮಗೆ ಮಂಡೆ ಬಿಸಿಯಾದೀತಲ್ಲವೇ? ಹೌದು, ಅದು ನಿಜ! ಲಕ್ಷಾಂತರ ಬಕ್ಕತಲೆ ಮಂದಿ ಬಿಸಿಲಿನಲ್ಲಿ ಅಡ್ಡಾಡುವಾಗ, ಅವರ ತಲೆಯ ಮೇಲೆ ಬಿದ್ದ ಸೂಯಱನ ಬೆಳಕು ಪ್ರತಿಫಲನಗೊಂಡು ಆ ಪ್ರಕ್ರಿಯೆಯಿಂದ ವಾತಾವರಣದ ಶಾಖ ಇನ್ನೂ ಹೆಚ್ಚಾಗುತ್ತಿದೆ ಎಂದು ಆ ಬಗ್ಗೆಯೇ ಡಾಕ್ಟರೇಟ್ ಥೀಸೀಸ್ ರೆಡಿ ಮಾಡುತ್ತಿರುವ ಇಲ್ಲಿನ ಲೋಕಲ್ (ಬಕ್ಕತಲೆ) ಪ್ರೊಫೆಸರ್ ಒಬ್ಬರು ಅಪ್ಪಣೆ ಕೊಡಿಸಿದ್ದಾರಂತೆ! ಆದುದರಿಂದ ಬಕ್ಕತಲೆಯವರೆಲ್ಲರಿಗೂ ಉಚಿತವಾಗಿ ಟೋಪಿ ಇಲ್ಲವೇ ಸುಂದರ ವಿಗ್ ಗಳನ್ನು ಉಚಿತವಾಗಿ ಕೂಡಲೇ ಸಕಾಱರ ವಿತರಿಸಿ ಮುಂದಿನ ಅನಾಹುತವನ್ನು ತಡೆಗಟ್ಟಬೇಕೆಂದು ಪರಿಸರವಾದಿಗಳು ಮತ್ತು ಬುದ್ಧಿಜೀವಿಗಳೂ ಸಕಾಱರವನ್ನು ಒತ್ಥಾಯಿಸುತ್ತಿದ್ದಾರಂತೆ! ಜನರ ತಲೆ ಕಾಪಾಡುವ ಸೋಗಿನಲ್ಲಿ ವಾತಾವರಣದ ತಾಪ ಕಡಿಮೆ ಮಾಡಲು ಸಕಾಱರ ಬಕ್ಕತಲೆಗಳನ್ನು ಮುಚ್ಚಲು ಅನೇಕ ನಗರಗಳಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆಂದೂ ಇದರಿಂದ ತಮ್ಮ ಸೌಂದಯಱ ಪ್ರದಶಱನಕ್ಕೆ ಅಡ್ಡಿಯಾಗಿದೆಯೆಂದೂ ನಾಮಱಲ್ ತಲೆಯವರು ಆಕ್ಷೇಪವನ್ನೆತ್ತಿದ್ದಾರಂತೆ! ಹೀಗೇ ಮುಂದುವರಿದರೆ ತಾವೂ ಬಕ್ಕತಲೆ ಸಂಘದ ಸದಸ್ಯರಾಗುವ ಕಾಲ ದೂರವಿಲ್ಲವೆಂದೂ ಕೊರಗುತ್ತಿದ್ದಾರಂತೆ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸರಗೊಂಡಿರುವ ಬಕ್ಕತಲೆಯವರು ಬಿಸಿಲಲ್ಲಿ ಅಡ್ಡಾಡಲು ಬಲು ಮುಜುಗರಪಟ್ಟುಕೊಳ್ಳುತ್ತಿದ್ದಾರಂತೆ! ಬಕ್ಕತಲೆಯವರಿಗೆ ಹಾರ್ಟ್ ಅಟ್ಯಾಕ್ ಸಂಭವವೂ ಹೆಚ್ಚೆಂದು ಅಂತಜಾಱಲ ಮಾಹಿತಿ ತಿಳಿಸಿರುವುದು ಬಕ್ಕತಲೆಯವರ ನಿದ್ದೆ ಕೆಡಿಸಿದೆಯಂತೆ. ಅಯ್ಯೋ, ಈ ಬಕ್ಕ ತಲೆಗಳನ್ನು ಸವರಿ ಸಾಂತ್ವನ ಹೇಳುವವರಿಲ್ಲವೇ?

ಆದರೆ, ಸುಮ್ನನೆ ಬಕ್ಕತಲೆಯವರೆಂದು ಹೀಗಳೆಯದಿರಿ. ಬಲ್ಲವರೇ ಬಲ್ಲರು ಈ ಬಕ್ಕತಲೆಯ ಮಹಿಮೆಯನು. ಹೆಚ್ಚುತ್ತಿರುವ ಖಚುಱ-ವೆಚ್ಚಗಳ ಈ ಕಾಲದಲ್ಲಿ ಎಣ್ಣೆ, ಸೀಗೇಪುಡಿ, ಶಾಂಪೂ, ಸೋಪು ಇತ್ಯಾದಿ ಖಚುಱಗಳನ್ನು ಉಳಿಸಿ, ಕನ್ನಡಿಯ ಮುಂದೆ ವ್ಯಥಱವಾಗಿ ತಲೆ ತೀಡಿಕೊಳ್ಳುವಲ್ಲಿಯೇ (ಹಾಗೆಯೇ ಸುಂದರ ಕನಸುಗಳನ್ನು ಕಾಣುವಲ್ಲಿಯೇ) ಕಳೆದು ಹೋಗುತ್ತಿದ್ದ ಅಮೂಲ್ಯವಾದ ಸಮಯವನ್ನು ಉಳಿಸುವ ಈ ಬಕ್ಕತಲೆ ಸಾಮಾನ್ಯವೇ? ಕೂದಲು ಬೆಳ್ಳಗಾದಾಗ ಹೇರ್ ಡ್ಐ ಮಾಡಿಕೊಳ್ಳುವ ಜಂಜಾಟ, ಶ್ರಮ, ಖಚುಱ ಕೂಡ ಇವರಿಗಿಲ್ಲ! ಡ್ಯಾಂಡ್ರಫ್ ನ ಕಾಟವಂತೂ ಇಲ್ಲವೇ ಇಲ್ಲ. ಅದೇ ರೀತಿ ಮಳೆ ಬಂದಾಗ ಬಕ್ಕತಲೆಯವರಿಗೆ ಛತ್ರಿ ಬೇಡವೇ ಬೇಡ. ಅವರಿಗೆ ತಲೆಯೇ ನೆನೆಯದು. ಮಳೆನೀರಿನ ಹನಿಗಳಿಗಂತೂ ಖುಷಿಯೋ ಖುಷಿ. ಭೂಮಿಗೆ ಬೀಳುವ ಮುನ್ನ ಈ ಜಾರುಬಂಡೆಗಳ (ಬಕ್ಕತಲೆಗಳ) ಮೇಲಿನ ಆಟ ಅವುಗಳಿಗೆ ಬಲು ಇಷ್ಟ. ಕೆಲವು ಮನೆ ಹನಿಗಳಂತೂ ಕುಣಿದು ಕುಪ್ಪಳಿಸಿ ಕುಪ್ಪಳಿಸಿ ನಲಿಯುವ ದ್ಐಶ್ಯವಂತೂ ನೋಡಿದವರಿಗೆ ನಯನ ಮನೋಹರ. ಸುತ್ತಲೂ ಭೋಗಱರೆಯದೇ ನವಿರಾಗಿ ಜಾರುವ ನೀರಿನ ಧಾರೆಯಂತೂ ಒಂದು ಮಿನಿ ನಯಾಗರ! ತನ್ನ ಮಕ್ಕಳ ಖುಷಿ ಕಂಡ ವರುಣ ಕೂಡ ಬಕ್ಕತಲೆ ಸಂತತಿ ಸಾವಿರವಾಗಲಿ ಎಂದು ಹರಸುತ್ತಾನಂತೆ! ಹಾಗೆಂದೇ ಅಕಾಲದಲ್ಲೂ ಮಳೆಯಾಗುತ್ತಿದೆಯೆಂದೂ ನಮ್ಮ 'ಮಣ್ಣಿನ ಮಕ್ಕಳೂ' ಕುಣಿಯುತ್ತಿದ್ದಾರಂತೆ!

ಸಾಮಾನ್ಯವಾಗಿ ಬಕ್ಕತಲೆಯವರು ಎಂದರೆ ಬುದ್ಧಿವಂತರು ಅನ್ನುತ್ತಾರೆ. ಸಾಮಾನ್ಯವಾಗಿ ಗಂಡಸರಲ್ಲೇ ಬಕ್ಕತಲೆಯವರು ಹೆಚ್ಚು. ಆದುದರಿಂದ ಹೆಂಗಸರಿಗಿಂತ ಗಂಡಸರೇ ಹೆಚ್ಚು ಬುದ್ಧಿವಂತರೆಂದು ಹೇಳಬಹುದೇ? ಹೆಂಗಸರ ಮುಂದೆ ಈ ಮಾತು ಹೇಳುವ ಧೈಯಱವಿದ್ದರೆ, ಅದರಲ್ಲೂ ವಿಶೇಷವಾಗಿ ಬಕ್ಕತಲೆಯವರು, ನಿಮ್ಮ ತಲೆಯ ಸುರಕ್ಷತೆ ಬಗ್ಗೆ ಕಡೆ ಎಚ್ಚರವಿರಲಿ. ಹೆಂಗಸರಲ್ಲಿ ಬಕ್ಕತಲೆಯವರು ಅಪರೂಪ. ಬಹುಶ: ಹಾಗೆಂದೇ 'ಹೆಂಗಸರ ಬುದ್ಧಿ ಮೊಣಕಾಲು ಕೆಳಗೆ' ಎಂಬ ಮಾತೂ ಬಂದಿರಬಹುದೇನೋ? ಇದಕ್ಕೆ ಪ್ರತಿಯಾಗಿ ತಲೆಯ ಮೇಲೆ ಕೂದಲು ಇಲ್ಲದಿರುವುದೇ ತಲೆಯೊಳಗೆ ಬುದ್ಧಿ ಕೂಡ ಇಲ್ಲದಿರುವ ಸ್ಪಷ್ಟ ಸಂಕೇತ ಎಂದು ನಮ್ಮ ಕೆಲವು ಸಕೇಶ ನಾರೀಮಣಿಗಳು ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಪ್ಪಣೆ ಕೊಡಿಸಿದ್ದಾರಂತೆ. ಆದಾಗ್ಯೂ ಎಣ್ಣೆ ನೀರು ಹಾಕಲು ಬಲು ಸುಲಭವಾಗಿರುವ, ಕೋಪ ಬಂದಾಗ ಮಟ್ಟಲು ಅನುರೂಪವಾಗಿರುವ, ತುತುಱ ಸಂದಭಱಗಳಲ್ಲಿ ಅದನ್ನೇ ತಮ್ಮ ಕನ್ನಡಿಯನ್ನಾಗಿ ಉಪಯೋಗಿಸಬಹುದಾಗಿರುವ ಮತ್ತು ಅವಶ್ಯ ಬಿದ್ದಾಗ ಮಕ್ಕಳ ಮ್ಋದಂಗ, ತಬಲ ಅಭ್ಯಾಸಕ್ಕೂ ಅನುಕೂಲಕರವಾಗಿರುವ ಈ multi-session, multi-dimensional and multi-utility ತಲೆಯೇ ಸುಂದರ ಎಂದು ಬಹುಮಂಡಿ (ಹೆಸರನ್ನು ತಿಳಿಸಲಿಚ್ಛಿಸದ) ಮಹಿಳೆಯರು ಪ್ರ್ಐವೇಟ್ ಆಗಿ ಹೇಳಿಕೊಂಡಿಯೂ ಇದ್ದಾರಂತೆ!

ತಲೆಯೋ ಬಕ್ಕತಲೆಯೋ ಅದಿಲ್ಲದೇ ನಾವಿಲ್ಲ. ನಾವಿಲ್ಲದೇ ಅದು ಇಲ್ಲವೇ ಇಲ್ಲ. ಪಾಲಿಗೆ ಬಂದದ್ದೇ ಪಂಚಾಮ್ಐತ! ಅಂತೆಯೇ ಒಮ್ಮೊಮ್ಮೆ ತಲೆಯೊಳಗೇ ಬುದ್ಧಿಯೋ ಬುದ್ಧಿಯೊಳಗೆ ತಲೆಯೋ ಎಂಬ ಪ್ರಶ್ನೆ ಕೂಡ ಕಾಡುತ್ತದೆ. ಮಾತುಮಾತಿಗೂ ತಲೆ ತಲೆಯೆಂದು ಹೀಗಳೆಯದಿರಿ | ತಲೆಯ ಮಹಿಮೆಯ ನೀವೇನ ಬಲ್ಲಿರಿ || ಎನ್ನುತ್ತಾರಂತೆ ಆಧುನಿಕ ರಚನೆಕಾರರು. ಇಲ್ಲದಿದ್ದರೆ ನಿಮ್ಮ ತಲೆಭಾರ ಇನ್ನೂ ಹೆಚ್ಚಾದೀತೆಂದೂ, ಬೇತಾಳಕ್ಕೆ ಉತ್ತರ ಹೇಳದಿದ್ದರೆ ಸಾವಿರ ಹೋಳಾಗುವ ವಿಕ್ರಮನ ತಲೆಯ ಗತಿ ಬಂದೀತೆಂದೂ ತಲೆ ಒಳಗೆ ಅಲ್ಪ-ಸ್ವಲ್ಪವಿರುವ ಕೆಲವರು ಎಚ್ಚರಿಸುತ್ತಿದ್ದಾರಂತೆ. ಕೊಲೆ ಇತ್ಯಾದಿ ಘೋ ಅಪರಾಧ ಮಾಡಿ ಗಲ್ಲು ಶಿಕ್ಷೆಗೆ ಒಳಗಾದರೂ (ಅಫ್ಜಲ್ ಗುರು ನೀವಲ್ಲದಿದ್ದರೆ!) ಬರುವ ಸಂಚಕಾರ ತಲೆಗೇ. ನೀವೂ ನಿಮ್ಮ ತಲೆಯೂ ಸದಾ ಜೋಪಾನ ಮತ್ತು ಮೇಲಿನದೇನಾದರೂ ನಿಮ್ಮ ತಲೆಗೆ ಹೋಗಿ, ಯಾವಾಗ ತಲೆಯೆತ್ತಿ ನಡೆಯಬೇಕು, ಯಾವಾಗ ತಲೆ ಬಾಗಿಸಿ ನಡೆಯಬೇಕು ಎಂಬುದು ಮನದಟ್ಟಾಗಿದ್ದಲ್ಲಿ ನಾನೂ ಧನ್ಯ - ನೀವೂ ಧನ್ಯ ಎಂಬಲ್ಲಿಗೆ ಈ ತಲೆ ಪುರಾಣವೆಂಬ ಸಣ್ಣ ತಲೆ ಹರಟೆ ಪ್ರಸಂಗವು ಮುಗಿದುದು.... ಮಂಗಳಂ ಜಯ ಮಂಗಳಂ...!!
"ಸರ್ವೇ ಶಿರಾ: ಸುಖಿನೋ ಭವಂತು"