ಗುರಿಯೊಂದೇ

ಗುರಿಯೊಂದೇ

ಬರಹ

 

 

ಮೇಲ್ಕಂಡ ಚಿತ್ರ ತೆಗೆದದ್ದು ಗ್ನು/ಲಿನಕ್ಸ್ ಹಬ್ಬ ನೆಡೆದ ದಿನದಂದು. ಚಿತ್ರ ತೆಗೆದದ್ದು ಹೆಚ್.ಪಿ.ಎನ್. ಕಾರ್ ನ ಸ್ಟಿಯರಿಂಗ್ ಜೊತೆಗೆ ಸ್ಟೀರಿಯೋದ ಕಂಟ್ರೋಲ್ ಕೂಡ ನನ್ನ ಬೆರಳಿನಂಚಿನಲ್ಲಿದ್ದು ಹರಿ ತನ್ನ ಲೇಖನದಲ್ಲಿ ಪ್ರಸ್ತಾಪಿಸಿದ ಭಾವಗೀತೆ, ರಾಕ್, ಮೆಟಲ್ ಗೀತೆಗಳು ಸ್ಟೀಕರ್ನಲ್ಲಿ ಹರಿದು ಬಂದಾಗ ಅದರ ಧ್ವನಿಯನ್ನ ಹಿಗ್ಗಿಸಿ ತಗ್ಗಿಸಿ ಮಾಡ್ತಿದ್ದ ನನ್ನ ಈ ಬೆರಳನ್ನ ಸೆರೆ ಹಿಡಿದದ್ದು ನನ್ನ ಬೆರಳಿನ ಕೈಚಳಕದ ಬಗ್ಗೆ ಹರಟುತ್ತ (ಹೌದು, ಹಾಡೋಂದಕ್ಕೆ ನಾನೂ ಧ್ವನಿಗೂಡಿಸಬಹುದು ಅಂದಾಗ ಯಾರನ್ನೂ ಕೇಳದೆ ವಾಲ್ಯೂಮ್ ಅನ್ನ ೩೦ರ ಗಡಿದಾಟಿಸುತಿತ್ತು ಅದು ಎಲ್ಲರ ಗಮನಕ್ಕೆ ಬರ್ತಿದ್ದದ್ದು ಹಾಡು ಬದಲಾದಾಗಲೆ ;)). ಇಂದು ಹಳೆಯ ಚಿತ್ರಗಳನ್ನ ತೆಗದು ನೋಡುವಾಗ ಇದು ನನ್ನ ಕಣ್ಣಿಗೆ ಬಿತ್ತು.ಶೀರ್ಷಿಕೆ ಯಾಕೆ ಹೀಗೆ ಅಂದ್ರೆ, ಅವತ್ತು ನಮ್ಮೆಲ್ಲರ ಗುರಿ ಒಂದೇ ಆಗಿತ್ತು, ಮೈಸೂರಿನಲ್ಲಿ ಎಲ್ಲರಿಗೂ ಗ್ನು/ಲಿನಕ್ಸ್ ನ ಬಗ್ಗೆ ತಿಳಿಸೋದು. ನೈಸ್ ರೋಡಿನ ಈ ದೃಶ್ಯ ಇಂದೂ ನನ್ನ ಕಣ್ಣ ಮುಂದೆ ಹಸಿರಾಗಿದೆ.