ಗ್ರಹಗಳ ಕೂಟ ಫೆಬ್ರುವರಿ ಮಾರ್ಚ್ ತಿಂಗಳುಗಳಲ್ಲಿ

ಗ್ರಹಗಳ ಕೂಟ ಫೆಬ್ರುವರಿ ಮಾರ್ಚ್ ತಿಂಗಳುಗಳಲ್ಲಿ

Comments

ಬರಹ

ಶುಕ್ರಚಂದ್ರರ ಯುತಿಯನ್ನು ಮತ್ತೊಮ್ಮೆ ಫೆಬ್ರುವರಿ ೨೭ ಮತ್ತು ೨೮ಱ ನಡುವೆ (ಅಂದರೆ ಬೇಱೆ ದೇಶದವರಿಗೆ ಸರಿಯಾದ ಯುತಿ) ನಮಗೆ ಫೆಬ್ರುವರಿ ೨೭ಱಂದು ಚಂದ್ರ ಶುಕ್ರನಿಗೆ ಸ್ವಲ್ಪ ಹಿಂದೆ (ಪಶ್ಚಿಮದೆಡೆ)ಮತ್ತು ಫೆಬ್ರುವರಿ ೨೮ಱಂದು ಶುಕ್ರನಿಗೆ ಸ್ವಲ್ಪ ಮುಂದೆ (ಪೂರ್ವ ದಿಕ್ಕಿನೆಡೆ) ಸಮೀಪ ಬರುವುದನ್ನು ಸಂಜೆ ೬.೨೦ಱಿಂದ ೮.೨೦ಱವರೆಗೆ ನೋಡಿ. ಹೆಚ್ಚಿನ ವಿವರಗಳಿಗೆ www.skyandtelescope ಅಂತರ್ಜಾಲತಾಣವನ್ನು ನೋಡಿ.

೧೧ನೇ ಫೆಬ್ರುವರಿ ೨೦೦೯ಱಂದು ಸಂಜೆ ೮.೨೦ಱಿಂದ ಮಾಱನೆಯ ದಿವಸ ಬೆಳಿಗ್ಗೆ ಪಶ್ಚಿಮದಲ್ಲಿ ಚಂದ್ರಶನಿ ಮುೞುಗುವವರೆಗೆ ಚಂದ್ರಶನಿಯುತಿಯನ್ನು ನೋಡಿ.

ಹಾಗೆಯೇ ಮಾರ್ಚ್ ೧೦/೧೧, ೨೦೦೯ಱಂದು ಸಂಜೆ (೧೦ಱ ಸಂಜೆ ೭.೦೦ಱಿಂದ) ಮಾಱನೆಯ ದಿನ ೧೧ಱ ಬೆಳಿಗ್ಗೆ ೬.೦೦ಱವರೆಗೆ ಚಂದ್ರ ಶನಿಯುತಿ ಹತ್ತಿರಹತ್ತಿರವಾಗುವುದನ್ನು ತಪ್ಪದೇ ವೀಕ್ಷಿಸಿ. ಈ ವಿಚಾರಗಳಿಗೆ ನನ್ನ ಚಿತ್ರಪುಟಗಳನ್ನು ನೋಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet