ಡಿ.ಎಲ್.ಐ ನಿಂದ ಬುಕ್ ಡೌನ್‍ಲೋಡ್‍ಗೆ ಒಂದು ಸಾಫ್ಟವೇರ್!

ಡಿ.ಎಲ್.ಐ ನಿಂದ ಬುಕ್ ಡೌನ್‍ಲೋಡ್‍ಗೆ ಒಂದು ಸಾಫ್ಟವೇರ್!

ಬರಹ

ನೀವು ಸಂಪದಕ್ಕೆ ಹೊಸಬರಲ್ಲದಿದ್ದರೆ, http://dli.iiit.ac.in ನಲ್ಲಿ ಟ್ರಿಪಲ್ ಐಟಿಯವರು ಸಾವಿರಾರು ಪುಸ್ತಕಗಳನ್ನು ಆನ್‍ಲೈನ್ ಓದುವದಕ್ಕಾಗಿ ಇಟ್ಟಿರುವದು ನಿಮಗೆ ತಿಳಿದೇ ಇದೆ. ಸುನೀಲ್ ಇದಕೊಂದು ಸಣ್ಣ ಪ್ರೋಗ್ರಮ್ ಬರೆದದ್ದರಿಂದ ಶುರುವಾಗಿ, ರೋಹಿತ್ ಅಜ್ಜಂಪುರ್ ಅವರು ಅದಕ್ಕೊಂದು ಎಗ್ಜೆಕ್ಯುಟೆಬಲ್ ಜಾರ್ ನೀಡಿದ್ದು ಹಲವರಿಗೆ ಗೊತ್ತು.

ಕೆಲವು ಪಿ.ಸಿ.ನಲ್ಲಿ ಜೆ.ಆರ್.ಇ ಇನ್ಸ್’ಸ್ಟಾಲ್ಡ್ ಇರಲ್ಲ. ಹೆಚ್ಚಿನ ಬಳಕೆದಾರರು, ಬಳಸುವ ಓ.ಎಸ್ ಅಂದರೆ ವಿಂಡೋಸ್. ಹಾಗಾಗಿ ಇಸ್ಟಾಲ್‍ ಮಾಡೋದು > ಬಳಸೋದು, ಟೈಪ್‍ನ ಸಾಫ್ಟವೇರ್ ಹೆಚ್ಚಿನವರಿಗೆ ಬಳಸಲು ಸರಳ.

ಡಿ.ಎಲ್.ಐ ನಲ್ಲಿ ಪ್ರತಿಯೊಂದು ಪುಸ್ತಕಕ್ಕೂ ಒಂದು ಬಾರ್ ಕೋಡ್ ಇದೆ. ಈ ಸಾಫ್ಟವೇರ್‌ನಲ್ಲಿ ಬರೀ ಆ ಬಾರ್‌ಕೋಡ್ ಕೊಟ್ಟರೆ ಸಾಕು. ಪುಸ್ತಕವು ಡೌನ್‍ಲೋಡ್ ಆಗಿ, ನೀವು ಸೆಲೆಕ್ಟ್ ಮಾಡಿದ ಫೋಲ್ಡರ್ ನಲ್ಲಿ, ನೀವು ನೀಡಿದ ಫೈಲ್ ಹೆಸರಿನೊಂದಿಗೆ ಪಿ.ಡಿ.ಎಫ್ ರೂಪದಲ್ಲಿ ನಿಮ್ಮ ಪಿ.ಸಿನಲ್ಲಿ ಕುಳಿತುಕೊಳ್ಳುತ್ತದೆ :) ಆನ್‍ಲೈನ್ ಓದೋದಕ್ಕಿಂತ ಇದು ಬೆಟರ್ ಅಲ್ವೇ? ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ಹೆಚ್ಚಿನ ಮಾಹಿತಿ ಮತ್ತು ಈ ಸಾಫ್ಟವೇರನ್ನು ಇಳಿಸಿಕೊಳ್ಳಲು, ಇಲ್ಲಿ ಕ್ಲಿಕ್ಕಿರಿ.