ದೂರಾದ ಕ್ಷಣಗಳು....

ದೂರಾದ ಕ್ಷಣಗಳು....

ಖಾಲಿ ಕರಿಯ ಇರುಳುಗಳೊಡನೆ

ಈಗ ನನ್ನ ಗೆಳೆತನ

ಅ೦ತ್ಯವೇ ಇಲ್ಲದ ನೋವಿನ ದಾರಿಯಲ್ಲಿ

ಈಗ ಕಳೆದಿದೆ ನನ್ನತನ

ಪ್ರತಿದಿನ ಪ್ರತಿಕ್ಷಣ

ನಾ ಕಳೆಯುವ ರೀತಿ ಹೇಗೆ ನಿನಗೆ ಹೇಳಲಿ

ಪ್ರತಿದಿನ ಪ್ರತಿಕ್ಷಣ

ನನಗೆ ನಾ ಹೇಗೆ ತಾನೆ ಹೇಳಿಕೊಳ್ಳಲಿ

ನಿನ್ನ ನಾ ಮರೆತೆನೆ೦ದು,

ನಿನ್ನ ಮರೆತರೂ ಕರಗದು ಕಣ್ಣೀರೆ೦ದು...

 

ನಿನ್ನ ನೆನಪಲಿ ನಾ ಬರೆದ ಕವನ

ಈಗಲೂ ಕೇಳುತಿದೆ ನನ್ನ ಕಿವಿಗಳಲಿ

ಜೊತೆ ಕಳೆದ ಕ್ಷಣಗಳು, ’ದೂರವಾದುದೇಕೇ’

ಕೇಳಿದರೆ ನಾ ಏನು ಹೇಳಲಿ

 

ನಿನ್ನೆಡೆಗೆ ನನಗೊ೦ದು ಸೆಳೆವಿತ್ತು

ನಿನ್ನ ಪ್ರೀತಿಯಲ್ಲಿ ವಿರಹದ ತಿರುವಿತ್ತು

ನೀ ನನ್ನಿ೦ದ ಬೇರೆಯಾದಾಗ

ನಾ ನನ್ನಿ೦ದಲೇ ಬೇರೆಯಾದೆ

 

ನೀನೀಗ ನನಗಾಗಿ ಪ್ರಾರ್ಥಿಸು

ದೇವರಿಗೆ ನನ್ನ ನೋವು ಕೇಳಿಸು

ನೀನಿಲ್ಲದ ಕೊನೆಯಲ್ಲಿ

ಕೇಳುವೆನು ಇದ ನಾನು....