ನಾನು - ಆ ವ್ಯಕ್ತಿ
ಸುಮಾರು ನಾಲ್ಕು ಗಂಟೆಯ ಸಮಯ. ನಾನು ಎಂದಿನಂತೆ ಕಾಲೇಜು ಮುಗಿಸಿ ನನ್ನ ರೂಮಿಗೆ ಬರುತ್ತಿದ್ದೆ. ಒಬ್ಬ ವ್ಯಕ್ತಿ (ಸುಮಾರು ಇಪ್ಪತ್ತು ಇರಬಹುದು) ಸುಂಕದಕಟ್ಟೆಲಿ ಬಸ್ ಹತ್ತಿ ನನ್ನ ಪಕ್ಕದಲ್ಲೆ ಇದ್ದ ಸೀಟಿನಲ್ಲಿ ಬಂದು ಕುಳಿತ. ನನ್ನ ಎಂದಿನ ಅಬ್ಯಾಸದಂತೆ ಜೊತೆಯಲ್ಲಿದ್ದ ಆತನೊಂದಿಗೆ ಮಾತು ಪ್ರಾರಂಬಿಸಿದೆ. ಆತ ಹೇಳಿದ ಪ್ರತಿಯೊಂದು ವಿಶಯವು ನನಗೆ ಇನ್ನೂ ನೆನಪಿದೆ. ನೆನಪಿಸಿಕೊಂಡರೆ ತುಂಬಾ ಮುಗುಜರವೆನಿಸುತ್ತದೆ.
ಇಪ್ಪತ್ತೆರಡನೆ ವಯಸ್ಸಿಗೆ ಬೆಂಗಳೂರಿಗೆ ಬಂದ ಆತನ ಕೈಯ್ಯಲ್ಲಿ ಇದ್ದದ್ದು ಕೇವಲ ಐದುನೂರು ರೂಗಳು ಮಾತ್ರ. ಭದ್ರಾವತಿಯಿಂದ ಜೀವನ ಕಟ್ಟಿ ಕೋಳ್ಳಲಿಕ್ಕೆ ಬೆಂಗಳೂರಿಗೆ ಬಂದು, ಇಲ್ಲಿನ ಜೀವನದ ಒಳ ಹೊಕ್ಕು ನೊಡಿ, ಬದುಕಲು ಕಷ್ಟ ಎಂದೆನಿಸಿ ಊರಿಗೂ ಹೊಗಲಾರದೆ, ಇಲ್ಲಿಯು ಬಾಳಲಾರದೆ ತುತ್ತು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಆತನನ್ನು ನೋಡಿ, ಜೀವನ ಅಂದ್ರೆ ಇಷ್ಟೇನಾ ಅಂತಾ ಯೋಚನೆ ಮಾಡಿದೆ. ಆತ ಹೇಳಿದ್ದು ಇಷ್ಟೆ "ಊರು ಬಿಟ್ ಬರೋಕೆ ಮುಂಚೆ ಜೀವನ ಇಷ್ಟ್ ಕಷ್ಟ ಅಂತ ಗೊತ್ತಿದ್ರೆ, ಹಾಯಾಗಿ ನಮ್ಮೂರಿನಲ್ಲೆ ಕೂಲಿನೋ-ನಾಲಿನೋ ಮಾಡಿ ಬದುಕಬಹುದಿತ್ತು". ಅವನ ಮಾತು ಕೇಳಿ ನನಗೆ ಅಶ್ಚರ್ಯ ಅಯಿತು. "ಬದುಕೋದಕ್ಕೆ ಅಂತ ಊರು ಬಿಟ್ಟು ಬಂದಿದೀನಿ, ಬದುಕಿ ತೋರಿಸ್ತೀನಿ" ಅಂತ ಹೇಳ್ತಾನೆ ಅಂದ್ಕೊಂಡಿದ್ದೆ. ಯಾಕಂದ್ರೆ ಕಷ್ಟಗಳಿಗೆ ಬೆನ್ನು ತೋರಿಸೋದು ಅಂದ್ರೆ ನನಗೆ ಆಗೋಲ್ಲ. ಅವನ ಮಾತಿನಲ್ಲಿ ಎದ್ದು ಕಾಣುತ್ತಿದ್ದುದ್ದು ಅದೊಂದೇ, ಅದು ಜೀವನದಲ್ಲಿ ಬರುವ ಕಷ್ಟಗಳಿಗೆ ಬೆನ್ನು ತೋರಿಸೋದು.
ನಿತ್ಯ ಬೆಂಗಳೂರಿಗೆ ಬರುವ ಅದೆಷ್ಟೋ ಜನರ ಕಣ್ಣಲ್ಲೂ ಇದೇ ಆಸೆ ಇರುತ್ತದೆ. ಆದರೆ ಕೆಲವರು ಕಷ್ಟಗಳಿಗೆ ಹೆದರಿ ಓಡಿಹೋಗುತ್ತಾರೆ. ಇನ್ನು ಕೆಲವರು ಇಲ್ಲೆ ಬದುಕು ಕಟ್ಟಿಕೊಳ್ಳುತ್ತಾರೆ. ಹಾಗೆ ಬೇರೆ ಕಡೆಯಿಂದ ವಲಸೆ ಬಂದು ಬದುಕು ಕಟ್ಟಿಕೊಂಡವರ ಪೈಕಿ ಒಬ್ಬರ ವಿಚರ ಹೇಳಲು ತುಂಬಾ ಇಷ್ಟವಾಗುತ್ತೆ. ಅವರ ಹೆಸರು ಗೊತ್ತಿಲ್ಲ. ಆದರೆ ಇವತ್ತಿಗೆ ತುಂಬಾ ದೊಡ್ಡ ವ್ಯಕ್ತಿ. ಅವರ ವೃತ್ತಿಯಲ್ಲಿ ಆಟೋ ಚಾಲಕ. ಕೇಳಿದರೆ ಕೇವಲ ಅನಿಸಬಹುದು, ಆದರೆ ನಿಜ. ಮನೆಯಲ್ಲಿ ಜಗಳ ಆಡಿ, ರಾತ್ರೋ ರಾತ್ರಿ ಊರು ಬಿಟ್ಟು ಬೆಂಗಳೂರಿಗೆ ಬಂದು, ದಿನದ ತುತ್ತಿನ ಕೂಳಿಗೆ ಒಂದು ಆಟೋ ಬಾಡಿಗೆ ಪಡೆದು, ದಿನಕ್ಕೆ ಇನ್ನೂರು ರೂಪಾಯಿ ಸಂಪಾದಿಸಲು ಪ್ರಾರಂಬಿಸಿದವರು ಇವತ್ತು ಎಂಟು ಆಟೋಗಳ ಮಾಲಿಕ. ಬೆಂಗಳೂರಿಗೆ ಬಂದ ಹೊಸತರಲ್ಲಿ ಜೀವನ ಕಲಿಸಿದ ಪಾಠಗಳನ್ನು ಕಲಿತು, ಈಗ ಜೀವನಕ್ಕೇ ಸವಾಲು ಹಾಕುವ ಅ ವ್ಯಕ್ತಿಯ ಧೈರ್ಯ ಮೆಚ್ಚುವಂತದ್ದು. ಆತನಿಂದ ದಿನಾ ಬೆಂಗಳೂರಿಗೆ ವಲಸೆ ಬರುವವರು ಕಲಿಯಬೇಕಾದ್ದು ಒಂದೇ, ಅದು "ಹೇಗೋ ಬದುಕಿದರಾಯಿತು ಅಂದುಕೊಂಡರೆ ಹೇಗ್ ಹೇಗೋ ಬದುಕುತ್ತೀವಿ. ನಾವು ನಮ್ಮ ಜೀವನದಲ್ಲಿ ಹೀಗೇ ಬದುಕಬೇಕು ಅಂದ್ಕೊಂಡ್ರೆ, ನಮಗೆ ಬೇಕಾದ ಹಾಗೆ ಬದುಕಬಹುದು. ಬೇಕಾದುದನ್ನು ಪಡೆಯಬಹುದು". ಸುಮ್ಮನೆ ದಾರಿ ಗೊತ್ತಿಲ್ಲದೆ ನೆಡೆದರೆ ಎನು ಉಪಯೋಗ. ಎಲ್ಲೆಲ್ಲೊ ಹೋಗಿಬಿಡುತ್ತೀವಿ. ನಮ್ಮ ಗುರಿ ತಿಳಿದುತಾನೆ ಮುನ್ನಡೆಯಬೇಕು?