ಪ್ರೀತಿ ಮಳೆ
ಕವನ
ಮಳೆ ಜರಿಯ ಕುರುಳು ದನಿ
ಪ್ರೇಮ ಮಂಟಪದಿ ಆಮಂತ್ರಿಸಿದೆ ಪನ್ನೀರ ಹನಿ
ಚಂದಿರನ ಬೆಳಕಲ್ಲಿ ಅರಳಿದೆ ಪಿಸುಮಾತು ತುಟಿಯಲ್ಲಿ
ಖುಷಿಗೆ ಕಾರಣ ಹಲವು ನಿನ್ನ ಸನಿಹದಲ್ಲಿ
ನೀ ಚೆಲ್ಲಿದ ಪ್ರೀತಿ ತುಂಬಿದ ಬಿಂದುಗಳೆ
ಅವಳ ಧವಳ ಕೆನ್ನೆಯ ಹುಡುಕುತಿರೆ ಮುತ್ತುಗಳೆ
ಅಭಾವವಿಲ್ಲದೆ ಭಾವಗಳ ಒಲವಾಗಿದೆ
ಭುವಿ ಗಗನವು ಒಂದಾಗಿದೆ
ಬಾಳಂಗಳದಲ್ಲಿ ಕಾಮನಬಿಲ್ಲು ಬಿಡಿಸಿದೆ ರಂಗೋಲಿಯ ಚಿತ್ತಾರ
ಅನಿಸುತಿದೆ, ನನ್ನೀ ಕಾತರ ನಿನ್ನ ಸೇರಲು ಆತುರ
ಮೋಡಗಳೊಂದಿಗೆ ಆಡೋಣ ಬಾ ಕಣ್ಣಾಮುಚ್ಚಾಲೆಯ
ಜೀವಗಳ ಮೀಟಿ ಬೆಸೆದ ಬಾಂಧವ್ಯದಲ್ಲಿ ಪ್ರೀತಿ ನಿಶ್ಚಯ
Comments
ಉ: ಪ್ರೀತಿ ಮಳೆ
In reply to ಉ: ಪ್ರೀತಿ ಮಳೆ by ಭಾಗ್ವತ
ಉ: ಪ್ರೀತಿ ಮಳೆ
ಉ: ಪ್ರೀತಿ ಮಳೆ