ಮರಗಳ ವೇದನೆ

ಮರಗಳ ವೇದನೆ

ಬರಹ

ಮರಗಳ ಆಲಾಪ

(1) ಮರಗಳ ಆಲಾಪ

ಇಂಗಾಲವ ಉಗುಳುವ
ವಾಹನಗಳಿಗಾಗಿ
ಆಮ್ಲಜನಕ ಕೊಡುವ
ಮರಗಳಿಗೆ ಎರಗಿ,
ನಗರದ ನಾಗರೀಕರು
ಕುಳಿತವರೆ ಸಾವಿಗೆ
ಒರಗಿ:
ಅಕಾಲೀಕ ಸಾವಿಗೀಡಾದ
ಮರಗಳೆಲ್ಲಾ ಮೊರೆಯಿಟ್ಟವೆ
ಜವರಾಯನ ಹತ್ತಿರ ಹೋಗಿ,
ಹೋಗು ಭೂಮಿಗೆ ನಮ್ಮಪ್ಪ
ಹೋಗಿ ಹಸಿರ ಕೊಂದವರ
ತಲೆಯ ತೆಗಿ,
ಎಂದು ಆಲಾಪಿಸಿ ಬೇಡುತ್ತಿವೆ
ತಲೆಯ ಬಾಗಿ.
------000-----
ಶಿವಶಶಿ

(2)ಮಾನವ ಮಾಯ

ವಿಷವ ಕಾರುವ ವಾಹನಗಳ
ಸಂಚಾರಕ್ಕೆ ಕಂಡು ಹಿಡಿದು
ಉಪಾಯ,
ನಗರಿಗರು ಹೇಳಿದರು
ಮಹಾರಾಜರು ನೆಡಿಸಿದ್ದ
ಮರಗಳಿಗೆ
ವಿದಾಯ ;
ಹುಟ್ಟುವ ಮುನ್ನವೇ
ಹಾಕಿರುವರು ಮಗುವಿನ
ಸಾವಿಗೆ ಅಡಿಪಾಯ,
ನಾಳೆಯೇ ತಪ್ಪಿದಲ್ಲಿ ನಾಳಿದ್ದು
ಖಂಡಿತಾ ಈ ಮಾನವ
ಧರೆಯಿಂದ ಮಾಯ !
----000---
ಶಿವಶಶಿ