ಮೂಢ ಉವಾಚ - 7
ಬರಹ
ಮೂಢ ಉವಾಚ - 7
ಬಾರದದು ಜನವು ಧನವು ಕಾಯದು|
ಕರೆ ಬಂದಾಗ ಅಡೆತಡೆಯು ನಡೆಯದು||
ಇರುವ ಮೂರು ದಿನ ಜನಕೆ ಬೇಕಾಗಿ|
ಜಗಕೆ ಬೆಳಕಾಗಿ ಬಾಳೆಲೋ ಮೂಢ||
ಹಸಿದವಗೆ ಹುಸಿ ವೇದಾಂತ ಬೇಡ|
ಕಥೆ ಕವನ ಸಾಹಿತ್ಯ ಬೇಡ ಬೇಡ||
ಬಳಲಿದ ಉದರವನು ಕಾಡಬೇಡ|
ಮುದದಿ ಆದರಿಸಿ ಮೋದಪಡು ಮೂಢ||
****************
-ಕವಿನಾಗರಾಜ್.