ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ

Comments

ಬರಹ

ಮೊನ್ನೆ ಸಂಪದದಲ್ಲಿ ಬಶೀರ್ ರವರ ಲೇಖನ ಒದಿದೆ.. ಅದರ ಪ್ರಕಾರ ಇಂಗ್ಲೀಶ್ ಶಬ್ದಗಳಲ್ಲಿ ಅಕ್ಷರಗಳನ್ನು ಅದಲು ಬದಲು ಮಾಡಿ ಬರೆದರೂ ಸರಿಯಾಗೆ ಓದಬಹುದಂತೆ.. ಯಾಕೆ ಅಂದ್ರೆ ನಮ್ಮ ಮನಸ್ಸು ಇಂಗ್ಲೀಶ್ ಪದಗಳ ಅಕ್ಷರಗಳನ್ನು ಬಿಡಿಸಿ ಓದುವುದಂತೆ.. ಹೌದು ಇದು ಸರಿ...

http://sampada.net/blog/cherambane/10/11/2008/13464

ಉದಾಹರಣೆಗೆ :

The rset can be a toatl mses and you can sitll raed it wouthit porbelm. Tihs is bcuseae we do not raed ervey lteter by itslef but the wrod as a wlohe.

ಆದ್ರೆ ನನ್ನ ಪ್ರಕಾರ ಈ ಲಾಜಿಕ್ಕು ಕನ್ನಡಕ್ಕೆ ಒಗ್ಗುವುದಿಲ್ಲ.. ಯಾಕೊ ಗೊತಿಲ್ಲ ಇಂಗ್ಲೀಶ್ ತರಹ, ತಪ್ಪು ತಪ್ಪಾಗಿ ಬರೆದ ಕನ್ನಡನ ಸರಿಯಾಗಿ ಓದಲಿಕ್ಕೆ ಆಗ್ಲಿಲ್ಲ..

ಉದಾಹರಣೆಗೆ :

"ಆ ದಿಗನಳ ಜನ ಜಂಗುಳಿಯ ನೀವರ ಗದ್ದದಲ ನನ್ನ ಏಕಾಂತ ರಾತ್ರಿಳಗ ಓಂದು ದಿನ ಸಯಮ ಸುಮಾರು ಎರೆಡು ಘಂಟೆ ಎಲ್ಲರೂ ತಮ್ಮ ಸುದಖ ಸುಪ್ಪತ್ತಿಗೆ ಬೇದಕಾ ನ್ಯೂಸ್ ಪೇಪರ್ ಗಳನ್ನ.. ಇನ್ನಿರತ ಹೊದಿಕೆಗಳನ್ನ ರೆಡಿ ಮಾಡ್ಕೊಂಡು ಕನಸಿನ ಪಯಣಕ್ಕೆ ಹೊರಲುಡ ಅನುಗುವಾತ್ತಿದ್ದರು. ಈ ಬಾರಿಯ ಅಮೇರಿದಕ ಆರ್ಥಿಕ ಕುಸಿದತ ಪ್ರಮಾಣ ಸುಮಾರು ೭೨ ಟ್ರಿಲಿಯನ್ ಡಾಲರ್ ಗಳಂತೆ ಹಾಗಿಗಾ ಇದು ಬಹಳ ದೊಡ್ಡಪ್ರಮಾದಣ ಕುಸಿವಾತಗಿರುತ್ತದೆ ಎಂದು ಪಂತಡಿರ ಆಂಬೋಣ. "

ನಾನು ಮೇಲಿನದನ್ನು ಓದಿದಾಗ ಎಲ್ಲಾ ತಪ್ಪುಗಳು ನನ್ನ ಗಮನಕ್ಕೆ ಬಂದವು. ಯಾಕೆ ಅಂದ್ರೆ ಇಂಗ್ಲೀಶ್ ನ ಕೆಲವು ಅಕ್ಷರಗಳಿಗೆ ಕೆಲವು ಸಂದರ್ಬದಲ್ಲಿ ಸ್ವಂತ ಅಸ್ತಿತ್ವವಿರುವುದಿಲ್ಲ. ಆದ್ರೆ ಕನ್ನಡದಲ್ಲಿ ಪ್ರತಿಯೊಂದು ಅಕ್ಷರಗಳಿಗೂ ಸ್ವಂತ ಅಸ್ತಿತ್ವವಿರುತ್ತದೆ. ಆದ್ದರಿಂದ ಬಹುಷ: ನಮ್ಮ ಮನಸ್ಸು ಕನ್ನಡದ ಪದಗಳನ್ನು ಇಂಗ್ಲೀಶ್ ತರಹ ಜೋಡಿಸಿ ಓದದೆ, ಅಕ್ಷರಗಳನ್ನು ಬಿಡಿಸಿ ಓದುತ್ತದೆ. ತಪ್ಪು ತಪ್ಪಾಗಿ ಬರೆದ ಕನ್ನಡನ ಸರಿಯಾಗಿ ಓದಲಿಕ್ಕೆ ಆಗುವುದಿಲ್ಲ 'ಯಾಕೆ ಅಂದ್ರೆ ಕನ್ನಡ ಭಾಷೆ ಸ್ಪಷ್ಟ, ಸುಂದರ ಮತ್ತು ನಿಖರ'. ಇದು ಕೇವಲ ನನ್ನ ಅನುಭವ. ನೀವು ಪ್ರಯತ್ನಿಸಿ ನಿಮ್ಮ ಅನುಭವ ತಿಳಿಸಿ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet