ರಾಷ್ಟ್ರಪಿತನ ಸ್ಮರಣೆಯಲ್ಲಿ…
ಕವನ
ಬಾ ಬಾಪು ಬಾ
ರಾಷ್ಟ್ರಪಿತ ನೀನಾದೆ
ಜಗದ ದೇವನಾದೆ
ನಿನ್ನ ಆಗಮನವೇ
ನಮಗೆ ವರದಾನ//
ಬಾ ಬಾಪು ನೀನೊಮ್ಮೆ
ವ್ಯವಸ್ಥೆಗಳ ಸರಿಪಡಿಸು
ಮೌಲ್ಯಗಳ ಕಗ್ಗೊಲೆ
ನಿರಂತರ ಹಾಹಾಕಾರಗಳ ಮಾಲೆ//
ಶ್ರಮ ಬದುಕು ಬಿತ್ತಿದೆ
ಅಹಿಂಸೆಯ ಸಾರಿದೆ
ಸರಳ ಜೀವಿಯಾದೆ
ಜನಮನಕೆ ಹತ್ತಿರವಾದೆ//
ರಾಮರಾಜ್ಯದ ಕನಸು
ನನಸಾಗಲೇ ಇಲ್ಲ
ಆತಂಕದ ಜೀವನ
ಸಾವು ನೋವೇ ಎಲ್ಲ//
ಮೇಲಿಂದ ಇಳಿದು ಬಾ
ನಮ್ಮೊಡನೆ ಬೆರೆಯು ಬಾ
ಶಾಂತಿ ಮಂತ್ರವ ಬಿತ್ತು ಬಾ
ಅನ್ಯಾಯವ ಅಳಿಸು ಬಾ//
-ರತ್ನಾ ಭಟ್ ತಲಂಜೇರಿ
******
ಗಝಲ್
ನಿನ್ನಯ ಆಗಮನಕೆ
ಕಾಯುತ್ತಿದ್ದೇನೆ ಬಾಪು|
ಮನದ ನೋವನ್ನು
ಹೇಳುತ್ತಿದ್ದೇನೆ ಬಾಪು||
ಅಹಿಂಸೆ ಸತ್ಯಗಳ
ಸಾಕಾರ ಮೂರ್ತಿಯಾದೆ|
ಕಹಿಯ ನೆನೆಪುಗಳ
ಅರುಹುತ್ತಿದ್ದೇನೆ ಬಾಪು||
ಮರೆಯಾಗದೆ ಹೃದಯದಿ
ಉಳಿದಿರುವೆ ನೀನು|
ಕರವನು ಮುಗಿದು
ಹಾಡುತ್ತಿದ್ದೇನೆ ಬಾಪು||
ಪರಂಗಿಯವರ ಬಂಧನದ
ದಾಸ್ಯವನು ಬಿಡಿಸಿಕೊಟ್ಟೆ|
ಚರಣಕ್ಕೆ ಬಾಗುತಲಿ
ನಮಿಸುತ್ತಿದ್ದೇನೆ ಬಾಪು||
ಮೇರುಗಿರಿ ಕವಿಯಾದ
ಅಭಿನವನ ಗಝಲಿನಲ್ಲಿರುವೆ|
ಸಾರುತಲಿ ನುಡಿಗಳ
ಹೇಳುತ್ತಿದ್ದೇನೆ ಬಾಪು||
-ಶಂಕರಾನಂದ ಹೆಬ್ಬಾಳ
ಚಿತ್ರ್
