ವಿದೇಶೀ ಹೆಸರುಗಳ ದೇಸೀಕರಣ – ನವ್ಯ ಸಾಹಿತ್ಯ Some ಶೋಧನೆ

ವಿದೇಶೀ ಹೆಸರುಗಳ ದೇಸೀಕರಣ – ನವ್ಯ ಸಾಹಿತ್ಯ Some ಶೋಧನೆ

ಬರಹ

ನಂ ವಿದೇಶಗಳ ಕೆಲ ನಾಮಧೇಯಗಳು ನಮ್ ಹೆಸರುಗಳಿಗೆ ಹತ್ರವಾಗಿ ಕಂಡು ನಂ ಹೆಸರುಗಳ ಥರ ಊಹೆ ಮಾಡಿ ಬರ್ದೆ ನೋಡಿ. ಅವರ್ಗೂ ನಮಗೂ ಬಹಳ ಜೋಡಿ ಅರ್ಥ ಕಾಣ್ತು ನನಗೆ . .ಅಂದ್ರೆ, ಅವ್ರ ಹೆಸರಲ್ಲೇನ್ ಭಾರಿ ಮೀನಿಂಗೇನೂ ಇರಲ್ಲ ಅಂತ, ನೋಡಿ ಬೇಕಿದ್ರೆ :

Don King – ನಮ್ ‘ಗುರು ರಾಜ’ ತರ ಅಲ್ವಾ ಈ ಹೆಸ್ರು, ಡಾನ್ ಅಂದ್ರೆ ಗುರು, King ಅಂದ್ರೆ ರಾಜ. ಅಂದ ಹಾಗೆ ಇವರು ಬಾಕ್ಸರ್ ಮೈಕ್ ಟೈಸನ್ ಗುರುಗಳು, ಗೊತ್ತಿರಲಿ ನಿಮಗೆ. ಇನ್ನು Goldie Hawn ಅಂತವಳೆ, ಇದಂತೂ ನಮ್ ಕಡೆ ‘ಬಂಗಾರಿ’ ಅಂತಿರಲ್ಲ, ಹಾಗೇ ಇದೂ ಅಲ್ವಾ (ಇವ್ಳು ಖ್ಯಾತ ಹಾಲಿವುಡ್ ತಾರೆ). ಮತ್ತೆ Late. Jade Goody ಗೊತ್ತಲ್ಲ, ನಮ್ ಕಡೆ ಇಡ್ತಾರಲ್ಲ ‘ಅಳ್ಳಿ’ ಅಥವಾ ‘ಚೆನ್ನಿ’ ಅಲ್ವೇನ್ರೀ ಇವ್ಳು (ಜೇಡ್ – ಹರಳು . . Goody – ಒಳ್ಳೆಯವಳು ಅಂದ್ರೆ ಚೆನ್ನಿ ! ಇವಳು ಒಬ್ಬ ಸೆಲೆಬ್ರಿಟಿ). ಹೀಗೇ ಇನ್ನಷ್ಟಿವೆ ನೋಡ್ರಿ :

Godwin – ಪ್ರಭು ವಿಜಯ (ಒಬ್ಬ ವಾಗ್ಮಿ)

Gladstone Small – ಸಂತೋಷ ಕಲ್ಲೇಶಿ ಚಿಕ್ಕ (ಇಂಗ್ಲಂಡ್ನ ಒಬ್ಬ ಮಾಜಿ ಕ್ರಿಕೆಟ್ ಆಟಗಾರ)

Samson – ರಾಮ್ ಕುಮಾರ (ಸಾಮ್ ನಮ್ಮ ರಾಮ್ ಥರಾ ಇರ್ಬೋದಾ ಅಂತ )

Bobby Simpson – ಬಾಬು ಕೇವಲ್ ಕುಮಾರ್ (ಸಿಂಪ್ ಎಂದರೆ ಸಿಂಪಲ್ ಅನ್ನೋ ಅರ್ಥದಲ್ಲಿ )

ಎಂಥಾ ಸೊಗಡು, ಮಣ್ಣಿನ ವಾಸನೆ ಇದೆ ಅಲಾ, ಇನ್ನೂ ಹೀಗೆ ಪದಗಳ್ ಸಿಕ್ರೆ ಸೇರ್ಸಿ, ತೋರ್ಸಣ ಏನೈತಿ ಅವರಾಗೆ, ನಮ್ಮಲ್ಲಿಲ್ಲದ್ದು ಅಂತ ! ಒಳ್ಳೆ ಟೈಮ್ ಪಾಸ್ ಹರಟೆ ಅಲ್ಲಾ