ಶಬ್ಧ ಮಾಲಿನ್ಯ ಹೋಗಲಾಡಿಸಿ

ಶಬ್ಧ ಮಾಲಿನ್ಯ ಹೋಗಲಾಡಿಸಿ

ಬರಹ

ಬೆಂಗಳೂರು ನಗರ ನಿವಾಸಿಗಳಿಗೆ ನಿದ್ದೆಗೆಡಿಸುವುದು ವಾಹನದ ಗಲಾಟೆಯಿಂದ. ಅದರಲ್ಲೂ ಮುಖ್ಯವಾಗಿ ರಿಕ್ಷಾಗಳಿಂದ. ಸಾಲುಗಟ್ಟಿ ಬರುವ ರಿಕ್ಷಾಗಳು, ಅವುಗಳಿಂದ ಬರುವ ಶಬ್ಧ ಎಂಥವರಿಗೂ ಬೇಸರವನ್ನುಂಟು ಮಾಡುತ್ತವೆ. ಈ ಎಲ್ಲಾ ರಿಕ್ಷಾಗಳನ್ನು ವಿದ್ಯುತ್ ಚಾಲಿತ ರಿಕ್ಷಾಗಳನ್ನಾಗಿ ಪರಿವರ್ತಿಸಬೇಕು. ಚಾರ್ಜ್ ಮಾಡಲು ಪ್ರತಿ ರಿಕ್ಷಾ ಸ್ಟ್ಯಾಂಡಿನಲ್ಲಿ ಸೋಲಾರ್ ಪೆನಲ್ ವ್ಯವಸ್ಥೆ ಮಾಡಬೇಕು. ಹೀಗೆ ಮಾಡಿದಲ್ಲಿ ಏನೆಲ್ಲಾ ಲಾಭಗಳು ಸಿಗಬಹುದು.
೧. ಪೆಟ್ರೋಲ್ ಅಥವಾ ಗ್ಯಾಸ್ ಬಳಕೆ ಕಡಿಮೆಯಾಗಿ ವಿದೇಶೀ ವಿನಿಮಯ ಉಳಿತಾಯ.
೨.ವಾಯುಮಾಲಿನ್ಯ ಮತ್ತು ಶಬ್ಧ ಮಾಲಿನ್ಯಕ್ಕೆ ತಡೆ.
೩. ಕಡಿಮೆ ದರದಲ್ಲಿ ಹೆಚ್ಚಿನ ದೂರ ಕ್ರಮಿಸುವಿಕೆ. ಇದರಿಂದ ಸಾರ್ವಜನಿಕ ಸಾರಿಗೆಯಾದ ರಿಕ್ಷಾದಲ್ಲಿ ಸಂಚರಿಸುವವರ ಪ್ರಮಾಣ ಏರಿಕೆ.
ಗಾರ್ಡನ್ ಸಿಟಿಗೆ ಇನ್ನೂ ಮೆರಗು ಬರುವುದರಲ್ಲಿ ಸಂಶಯವಿಲ್ಲ. ಸಂಬಂಧಪಟ್ಟವರು ಈ ಕುರಿತು ವಿಚಾರ ಮಾಡುವುದು ಒಳಿತು. ಏನಂತೀರಾ?