ಸಿಹಿ ಸಿಹಿ ಹುಡಿ ಗಿಣ್ಣ

ಸಿಹಿ ಸಿಹಿ ಹುಡಿ ಗಿಣ್ಣ

ಬೇಕಿರುವ ಸಾಮಗ್ರಿ

ಕರುಹಾಕಿ ಹದಿನೈದು ದಿನದೊಳಗಿನ ಎಮ್ಮೆ ಅಥವಾ ಹಸುವಿನ ಹಾಲು- ಒಂದು ಲೀಟರ್.ಕಾಲು ಕೆ.ಜಿ. ಮಧುರವಾದ ಬೆಲ್ಲ, ನಾಲ್ಕು ಏಲಕ್ಕಿ, ನಾಲ್ಕು ಲವಂಗ.

 

ತಯಾರಿಸುವ ವಿಧಾನ

ಸ್ಟೀಲ್ ಅಥವಾ ಚೆನ್ನಾಗಿ ಕಲಾಯಿ ಇರುವ ಹಿತ್ತಾಳೆ ಪಾತ್ರೆಯಲ್ಲಿಹಾಲು- ಬೆಲ್ಲ ಸೇರಿಸಿ ಕಾಯಿಸುತ್ತಾ ಬನ್ನಿ. ಕಾಯಿಸುತ್ತಿರುವಾಗಲೇ ಏಲಕ್ಕಿ-ಲವಂಗ ಅರೆದು ಪುಡಿಮಾಡಿ ಹಾಕಿ. ಹಾಲು ಪೂರ್ತಿ ಗಟ್ಟಿಯಾಗಿ ಒಣ ಪಂಚಕಜ್ಜಾಯದಂತೆ ಗಟ್ಟಿಯಾಗುವ ತನಕ ಕಾಯಿಸಿ. ಅನಂತರ ಕೆಳಗಿಳಿಸಿಡಿ. ಇದು ಹುಡಿ (ಪುಡಿ) ಯಾಗುತ್ತದೆಯಾದ್ದರಿಂದ " ಸಿಹಿ ಸಿಹಿ ಹುಡಿ ಗಿಣ್ಣ" ಸುಮಾರು ಒಂದು ವಾರದ ತನಕ ಹಾಗೇ ಇಟ್ಟರೂ ಹಾಳಾಗುವುದಿಲ್ಲ. ಬಂಧುಗಳು- ಆತ್ಮೀಯರು ಬಂದಾಗ ಪ್ರೀತಿಯಿಂದ ಕೊಡಿ. ಇದನ್ನು ಹಾಗೆಯೇ ಅಥವಾ ದೋಸೆ- ರೊಟ್ಟಿಯೊಂದಿಗೆ ಕೂಡ ಸವಿದು ಚಪ್ಪರಿಸಬಹುದು. ಮಕ್ಕಳಿಂದ ಮುದುಕರಿಗೂ ಅಚ್ಚುಮೆಚ್ಚು

-ಜಿ. ಟಿ. ಶ್ರೀಧರ ಶರ್ಮಾ, ಸಾಗರ