ಸೂರ್ಯೋದಯ
ಕವನ
ಸ್ನೇಹವೆಂಬ ಬೆಳಕ ಚೆಲ್ಲಿ ಸೂರ್ಯ ಮೂಡಿಲಿ
ರೋಷ ದ್ವೇಷ ಅಳಿಸಿ ಹಾಕಿ ಶಾಂತಿ ಮೂಡಲಿ
ಪ್ರೀತಿ ಎಂಬ ಕಿರಣದಿಂದ ಜೀವ ತುಂಬಲಿ
ಕೋಪವನ್ನು ತೊಡೆದು ಹಾಕಿ ಸ್ನೇಹ ಮೂಡಲಿ
ಅಂದವಾದ ಪ್ರಕೃತಿಯಿಂದ ಜಗವು ಬೆಳೆಯಲಿ
ಚಂದವಾದ ಹಕ್ಕಿ ಕೂಗಿ ಹರುಷ ನೀಡಲಿ
ಚಿನ್ನದಂತ ಕಿರಣದಿಂದ ಹೂವು ಅರಳಲಿ
ಬಣ್ಣ ಬಣ್ಣದ ಚಿಟ್ಟೆ ಕೂಡ ನಲಿದು ಕುಣಿಯ
ಮಧುರ ಕಂಠದಿಂದ ಕೋಗಿಲೆ ಹಾಡು ಹಾಡಲಿ
ಚದುರಿ ಹೋದ ಮನಸುಗಳನ್ನು ಒಂದು ಮಾಡಲಿ
ಎಂಥ ಚಂದ ಸೃಷ್ಟಿ ಸೊಬಗು ನೀವು ಕಾಣಿರಿ
ದೇವನಿತ್ತವರವನೆಂದು ಒಲ್ಲೆ ಎನದಿರಿ.
-ಕೆ. ವಾಣಿ ಚನ್ನರಾಯಪಟ್ಟಣ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
