ಸ್ಟೇಟಸ್ ಕತೆಗಳು (ಭಾಗ ೧೦೬೮)- ಊಟ
ಅಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಬಂದವರೆಲ್ಲರೂ ಕಾರ್ಯಕ್ರಮದ ಬಗ್ಗೆ ಮಾತನಾಡಲೇಬೇಕು. ಅದಕ್ಕೆ ಹಲವು ತಯಾರಿಗಳು ನಡೆದಿದ್ದು ಪೂರ್ವಭಾವಿ ಸಭೆಯೂ ನಡೆದಿತ್ತು. ಒಬ್ಬೊಬ್ಬರದು ಒಂದೊಂದು ಅನಿಸಿಕೆ. ಅದ್ಭುತವಾದ ವೇದಿಕೆ ವಿನ್ಯಾಸ, ಉತ್ತಮ ಮಾತುಗಾರರು, ಕುಳಿತುಕೊಳ್ಳುವುದಕ್ಕೆ ವಿಶಾಲ ಸಭಾಂಗಣ ಜನರಿಗೆ ಹತ್ತಿರವಾಗುವ ಸ್ಥಳ ಇದೆಲ್ಲವೂ ಪಟ್ಟಿಯಲ್ಲಿತ್ತು. ಅದೆಲ್ಲವನ್ನು ಅದ್ಭುತವಾಗಿ ತಯಾರಿ ಕೂಡ ಮಾಡಿದ್ದರು. ಆದರೆ ಮಧ್ಯಾಹ್ನ ಊಟದ ವ್ಯವಸ್ಥೆ ಸರಿಯಾಗಿರದ ಕಾರಣಕ್ಕೆ ಅದ್ಭುತವಾಗಿ ಆಯೋಜನೆಯಾಗಿದ್ದ ಕಾರ್ಯಕ್ರಮವು ಕೂಡ ಜನರ ಬಾಯಿಯಲ್ಲಿ ತುಂಬಾ ಕೆಟ್ಟದಾಗಿ ಜಾಹೀರಾತು ಪಡೆದುಕೊಳ್ಳುತ್ತಾ ಹೋಯ್ತು. ಕೊನೆಗೆಲ್ಲರಿಗೆ ಅರ್ಥವಾದದ್ದು ಕಾರ್ಯಕ್ರಮ ಎಲ್ಲವೂ ಅಂತಿಮವಾಗಿ ಜನರಿಗೆ ನಾವು ನೀಡುವ ಊಟೋಪಚಾರದ ಮೇಲೆ ನಿಂತಿದೆ. ನಾವು ಊಟೋಪಚಾರವನ್ನು ತುಂಬಾ ಅದ್ಭುತವಾಗಿ ಮಾಡಿದರೆ ಎಂಥಹದೇ ಕಾರ್ಯಕ್ರಮ ಜನರ ಬಾಯಲ್ಲಿ ಹೆಚ್ಚು ಸಮಯ ಓಡಾಡುತ್ತದೆ. ಅವರು ಮುಂದಿನ ಕಾರ್ಯಕ್ರಮದ ಆಯೋಜನೆಯಲ್ಲಿ ಮೊದಲು ಊಟದ ತಯಾರಿಗೆ ಮುಂದಡಿಯಿಟ್ರು. ಹೊಟ್ಟೆ ತುಂಬಿದರೆ ಎಲ್ಲ ಒಳಿತಾಗಿಯೇ ಕಾಣುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ