ಹಾಗೆ ಸುಮ್ಮನೆ .. ಇದನ್ನ ಓದಿ ಸ್ವಲ್ಪ ನಕ್ಕು ಬಿಡಿ…

ಹಾಗೆ ಸುಮ್ಮನೆ .. ಇದನ್ನ ಓದಿ ಸ್ವಲ್ಪ ನಕ್ಕು ಬಿಡಿ…

ಮದುವೆಯ ಮಾತುಕತೆಗೆ ಬಂದ ಮಂದಿ.... ತರಕಾರಿಗಳ  ಹೆಸರು ಬಳಸಿ ಬಹಳ ಚೆನ್ನಾಗಿ ಸಂಬಾಷಣೆ ಮಾಡಿದ್ದಾರೆ. 

ಹುಡುಗನ ತಾಯಿ :  ನೋಡಿ..ನಮ್ ಮನೆಗ್ ಬರೋ ಸೊಸೆ ಹೀಗೇ ಇರ್ಬೇಕು ಅಂತ ಜಾಸ್ತಿ ಏನು expectation  ಇಲ್ಲ. ನಮ್ಮದು ಜಾಯಿಂಟ್ ಫ್ಯಾಮಿಲಿ. ನಮ್ ಹುಡುಗನಿಗೆ ಅಮ್ಮ ಅಪ್ಪ ಅಂದ್ರೆ ಬೆಂಡೆಕಾಯಿ ಲೋಳೆ ಥರ.. ತುಂಬಾ attachment.  ಬರೋ ಸೊಸೆಗೆ ಹುಣಸೆ ಹುಳಿ ಥರ ಒಡಕು ಬುದ್ಧಿ ಇರಬಾರದು. ಮೆಣಸಿನಕಾಯಿ ಥರ ಖಾರವಾದ ಮಾತ್ ಇರಬಾರದು. ಸಾಸಿವೆ ಸಿಡಿದ ಹಾಗೆ ಚಟಪಟ ಅಂತ ಮಾತಾಡ್ಕೊಂಡ್, ಓಡಾಡ್ಕೊಂಡ್ ಇರ್ಬೇಕು.. ಒಟ್ನಲ್ಲಿ ಆಲೂಗೆಡ್ಡೆ, ಬಟಾಣಿ ಥರ ಎಲ್ಲಾರ್ ಜೊತೆ ಹೊಂದಿಕೊಂಡ್ ಹೋಗಬೇಕು ಇಷ್ಟೇ.

ಹುಡುಗಿಯ ಅಮ್ಮ:  ನಮಗೂ ಅಷ್ಟೇ. ಜಾಸ್ತಿ ಏನೂ ನಿರೀಕ್ಷೆ ಇಲ್ಲ. ಜಾಯಿಂಟ್ ಫ್ಯಾಮಿಲಿ ಅಂತೀರಾ.. ಅಳಿಯ ಈರುಳ್ಳಿ ಥರ ನನ್ ಮಗಳ ಕಣ್ಣಲ್ಲಿ ನೀರ್ ಹಾಕ್ಸೊನ್ ಆಗಿರಬಾರದು.

ಹುಡುಗಿ: ಅಮ್ಮ..  ಹುಡುಗ ಬೆಳ್ಳುಳ್ಳಿ ಥರ ಸುಲೀತಿದ್ದ ಹಾಗೆ ಮೂಗ್ ಮುಚ್ಕೊಂಡ್ ಓಡಿ ಹೋಗೋ ಥರ ಇರಬಾರದು. ಹೀಗೆಲ್ಲ ಅರ್ದಂಬರ್ಧ ಗಡ್ಡ  ಬಿಟ್ಟು ಕೊಂಡು ಹಲಸಿನಕಾಯಿ ಸಿಪ್ಪೆ  ಥರ ಮುಳ್ಳು ಮುಳ್ಳಾಗಿರಬಾರ್ದು  ಅಂತ ಹೇಳಮ್ಮ.

ಹುಡುಗ: ಏನಂದ್ರಿ..! ನಿಮ್ಮನ್ ನೀವ್ ಅಲ್ಫಾನ್ಸೋ ಮಾವಿನಹಣ್ಣು ಅಂದುಕೊಂಡ್ ಹಾಗಿದೆ.. ಕನ್ನಡಿ ನೋಡ್ಕೊಳ್ಳಿ. ಡ್ರಾಗನ್ ಫ್ರೂಟ್ ಥರ ಇದೀರಾ ಮುಖ ಎಲ್ಲ ಪಿಂಪಲ್ಸ್.

ಹುಡುಗಿ ತಾಯಿ : ಅಯ್ಯೋ ಬಿಡಿಪ್ಪ..ಅವಳಿಗೆ ಹುಡುಗು ಬುದ್ಧಿ.. ಇವೆಲ್ಲಾ ಬಿಡಿ..ನಮಗೆ ಎಲ್ಲಕ್ಕಿಂತ  ಮುಖ್ಯವಾಗಿ ಅಳಿಯ ಆಗ್ ಬರೋನು ಸೋರೆಕಾಯಿ ಥರ ಸಪ್ಪೆಸಪ್ಪೆಯಾಗಿ, ಸ್ವಂತ್ ಬುದ್ಧಿ, ಗುಣ ಏನೂ ಇಲ್ಲದೇ ಇರೋನ್ ಆಗಿರಬಾರದು. ಸೀಸನಲ್ ಅವರೆಕಾಳಿನ ಥರ ಜೊತೆಗೆ ಏನಿರಲಿ ಬಿಡಲಿ, ಸ್ವಂತ ಸೊನೆಯಿಂದ ಕೂಡಿ ಘಮಘಮ ಅನ್ನೋ ಥರ ಸಂಸಾರ ನಡೆಸ್ಕೊಂಡ್ ಹೋದ್ರೆ ಸಾಕು ! 

ಬ್ರೋಕರ್: .. ಒಹೋ.. ಹೀಗೇ ಬಿಟ್ರೆ ಇವರಿಬ್ಬರು ಇಲ್ಲೇ ಬಿಸಿಬೇಳೆಬಾತ್ ಮಾಡಿ ಮುಗಿಸೋ ತರ ಇದೆ..ಆದಷ್ಟು ಬೇಗ ನನ್ ಕಮಿಷನ್ ವಸೂಲಿ ಮಾಡ್ಕೊಂಡ್ ಜಾಗ ಖಾಲಿ ಮಾಡ್ಬೇಕು..ಕರ್ಮ !. 

-ಬಸಯ್ಯ ಜಿ ಮಳಿಮಠ, ಧಾರವಾಡ

ಚಿತ್ರ ಕೃಪೆ: ಇಂಟರ್ನೆಟ್ ತಾಣ