೨೦೦೮ ರ ೫ ನೆಯ, 'ಅಕ್ಕ, ವಿಶ್ವ-ಕನ್ನಡ ಸಮ್ಮೇಳನ,' ವನ್ನು ಪ್ರಾಯೋಜಿತಗೊಳಿಸಿದ್ದ ಸ್ಥಳ !

೨೦೦೮ ರ ೫ ನೆಯ, 'ಅಕ್ಕ, ವಿಶ್ವ-ಕನ್ನಡ ಸಮ್ಮೇಳನ,' ವನ್ನು ಪ್ರಾಯೋಜಿತಗೊಳಿಸಿದ್ದ ಸ್ಥಳ !

ಬರಹ

'Donald E. Stephens Convention Center', Rosemont, chicago, Illinoi State. (Formerly the Rosemont Convention Center) ನಿಳಾಸ : 5555 N. River Road Rosemont, IL 60018 ದೂರಧ್ವನಿ : 847-694-2220 (Admin. Offices) Fax: 847-696-9700 ೨೦೦೮ ರ ಆಗಸ್ಟ್, ೨೯, ೩೦, ೩೧ ರಂದು ನಡೆದ, ೩ ದಿನಗಳ 'ಅಕ್ಕ, ವಿಶ್ವ-ಕನ್ನಡ ಸಮ್ಮೇಳನ,' ವನ್ನು ಇಲ್ಲಿ ಹಮ್ಮಿಕೊಂಡಿದ್ದರು. ಈಗಾಗಲೇ ಹತ್ತಿರ-ಹತ್ತಿರ, ಎರಡು ತಿಂಗಳುಗಳಾಗುತ್ತ ಬಂತು. ಅದರ ಕೆಲವು ಸುಮಧುರ ಕ್ಷಣಗಳು ಅಲ್ಲಿಗೆ ಹೋಗಿ ಭಾಗವಹಿಸಿದವರ ನೆನೆಪಿನಲ್ಲಿ ಇನ್ನೂ ಹಸಿರಾಗಿ ಉಳಿದಿವೆ. ಸುಮಾರು ೪,೦೦೦ ಜನ ಕನ್ನಡ 'ಡೆಲಿಗೇಟ್,' ಗಳಿಗೆ ಕುಳಿತುಕೊಂಡು ಕಾರ್ಯಕ್ರಮಗಳನ್ನು ವೀಕ್ಷಿಸಲು, ಆಸನ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದರು. ಇಂತಹ ಭಾರಿ-ಭಾರಿ ಸಮಾರಂಭಗಳನ್ನು ಸುಲಲಿತವಾಗಿ ಆಯೋಜಿಸಲು, ಹೇಳಿಮಾಡಿಸಿದ ತಾಣವಿದು. ಎಲ್ಲ ಸೌಕರ್ಯಗಳಿಗೆ,ಹೆಸರುವಾಸಿಯಾದ ಸ್ಥಳ. ವಿಶಾಲವಾದ ಲಾಬಿ, ಊಟದ ವ್ಯವಸ್ಥೆಗಾಗಿಯೇ ಏರ್ಪಡಿಸಿದ ಜಾಗ, ರಿಸೆಪ್ಷನ್, ಮೇಲಿನ ಅಂತಸ್ತಿಗೆ ಹೋಗಲು, 'ಎಸ್ಕಲೇಟರ್,' ಹಾಗೂ ಅತಿಥಿಗಳನ್ನು ಬರಮಾಡಿಕೊಳ್ಳಲು ಜಾಗ, ಇತ್ಯಾದಿಗಳಿಂದ ಸುವ್ಯವಸ್ಥಿತವಾಗಿದೆ. 'ಡೋನಾಲ್ಡ್ ಇ. ಸ್ಟಿಫೆನ್ಸ್ ಕನ್ವೆನ್ಷನ್ ಸೆಂಟರ್,' ಇಲಿನಾಯ್ ರಾಜ್ಯದ, 'ರೋಸ್ಮಾಂಟ್ ' ನಲ್ಲಿದೆ. ಓಹೇರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನಿಂದ ಕೆಲವೇ ನಿಮಿಷಗಳ ಡ್ರೈವ್ ಅಷ್ಟೆ. ಸುಮಾರು ೮೪೦,೦೦೦ ಚ. ಅಡಿ ಜಾಗವನ್ನು ವಸ್ತುಪ್ರದರ್ಶನಕ್ಕೆ ಮೀಸಲಾಗಿಟ್ಟಿದ್ದಾರೆ. ಈ ಕಟ್ಟಡದಲ್ಲಿ ಸಾರ್ವನಿಕರ ಮಾಹಿತಿ-ನೋಟಕ್ಕೆ, ಮನರಂಜನೆಗಾಗಿ, ಹಾಗೂ ಟ್ರೇಡ್ ಫೇರ್ ಗಳಿಗಾಗಿ ಮೀಸಲಾಗಿಟ್ಟ ಜಾಗದಲ್ಲಿ , ಸುಮಾರು ೮,೦೦೦ ಕಾರ್ ಗಳನ್ನು ನಿಲ್ಲಿಸಬಹುದು. ’ಕಾರ್ ಪಾರ್ಕಿಂಗ್,’ ಸಲುವಾಗಿಯೇ, ಈ ಜಾಗವನ್ನು ಕಾದಿರಿಸಿದ್ದಾರೆ. ಒಂದು ಸ್ಕೈ ಬ್ರಿಡ್ಜ್, 'ಡೋನಾಲ್ಡ್ ಇ. ಸ್ಟಿಫೆನ್ಸ್ ಕನ್ವೆನ್ಷನ್ ಸೆಂಟರ್, ನಿಂದ ಕಾರ್ ರ್ಪಾರ್ಕ್ ಏರಿಯಾಕ್ಕೆ ಹಾಗೂ ಅಕ್ಕ-ಪಕ್ಕದ ೩ ಹೋಟೆಲ್ ಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಡೋನಾಲ್ಡ್ ಇ. ಸ್ಟಿಫೆನ್ಸ್ ಕನ್ವೆನ್ಷನ್ ಸೆಂಟರ್ ನ ಮೊದಲ ಹೆಸರು, 'ದ ರೋಸ್ಮಾಂಟ್ ಕನ್ವೆನ್ಷನ್ ಸೆಂಟರ್, ಎಂದು. ನಂತರ, ಮೇಯರ್ ಡೋನಾಲ್ಡ್ ಇ. ಸ್ಟಿಫೆನ್ಸ್ ರವರ ಗೌರವಾರ್ಥವಾಗಿ , ಈಗಿನ ಹೆಸರಿಸಲಾಯಿತು. ಡೋನಾಲ್ಡ್ ಇ. ಸ್ಟಿಫೆನ್ಸ್ ರವರು, ೧೯೫೬ 'ರೋಸ್ಮಾಂಟ್ ಹಳ್ಳಿಯನ್ನು ಮೊದಲು ಹೆಸರಿಸಿದವರು, ಹಾಗೂ ಅಂದಿನಿಂದ ಇದುವರೆಗೂ ಅವರೇ ಅಲ್ಲಿನ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಸ್ಥಾಪಿಸಿರುವ, * 'ಡೋನಾಲ್ಡ್ ಇ. ಸ್ಟೀಫನ್ Museum of Hummels, ನಲ್ಲಿ ಸುಮಾರು ೧,೦೦೦ ದಷ್ಟು, I. Hummel figurines, ಗಳನ್ನು ನೋಡಬಹುದು. ೮ ಅಡಿ ಎತ್ತರದವರೆಗೂ ಇವೆ. Mayor Stephens ರವರು ತಾವು ಹಣವನ್ನು ದಾನಮಾಡಿದ್ದಲ್ಲದೆ, ಹಣ-ಸಂಗ್ರಹಿಸಿ, ೧೯೮೪ ರಲ್ಲಿ, ರೋಸ್ ಮಾಂಟ್ ಹಳ್ಳಿಗೆ ಕೊಟ್ಟರು. ಈಗಿರುವ ಜಾಗ, ೫೫೫೫, ನಾರ್ತ್ ರಿವಿಯರ್ ರಸ್ತೆ, ರೋಸ್ಮಾಂಟ್, ಶಿಕಾಗೋ ನಗರ, ಕಡೆ ’ಎಕ್ಸ್ ಪ್ರೆಸ್ ಹೈವೆ ,’ ಯ ದಕ್ಷಿಣಕ್ಕೆ, ೨ ಮೈಲಿ, ದೂರದಲ್ಲಿ, ’ಓಹೇರ್, ಶಿಕಾಗೋ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (’ಟ್ರಿ ಸ್ಟೇಟ್ ಟೋಲ್ವೇ,’ ಗೇಟ್ ಬಳಿ) ಎರಡು-ಮೂರು ಕಟ್ಟಡಗಳನ್ನು ಹಾದುಹೋದರೆ ಸಿಗುತ್ತದೆ. (I294) ನಿಮಗೆ 'ಡೋನಾಲ್ಡ್ ಇ. ಸ್ಟಿಫೆನ್ಸ್ ಕನ್ವೆನ್ಷನ್ ಸೆಂಟರ್,' ಬಗ್ಗೆ, ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕೆಳಗೆ ದಾಖಲುಮಾಡಲಾಗಿದೆ. ಮುಂದೆ ಯಾವಾಗಲಾದರೂ ಅಲ್ಲಿ ನೀವು ಸ್ಥಳ ಕಾದಿರಿಸಬಹುದು : The Donald E. Stephens Convention Center offers a total 840,000 square feet of flexible exhibition space. Configure it any way you like. You may need a 500-booth to 800-booth area, or 100 to 200 booths. If you’re planning a larger show, you’ll appreciate our continuous 250,000 square-foot space for 1,225 booths. Or you can create a multiple hall layout for up to 3,566 booths. Customized floor plans are our specialty, so just ask.

1.  http://www.rosemont.com/news_detail.php?id=29

ವಿಶ್ವದ ಅತಿಹೆಚ್ಚು ಹಮಿಲ್ ಗಳ ಸಂಗ್ರಹವನ್ನು ಡೋನಾಲ್ಡ್ ಇ. ಸ್ಟೀಫನ್ಸ್ ರವರು ೧೯೬೦ ರಲ್ಲಿ ಸಂಗ್ರಹಿಸಿದರು. ಅದು ಈಗಲೂ ಮುಂದುವರೆದಿದೆ. (ಆರ್ಟಿಸ್ಟಿಕ್ ಮಾದರಿಯ ಬೊಂಬೆಗಳು, ಪೋರ್ಟ್ರೇಟ್ ಗಳು, ಇತ್ಯಾದಿ).

-ಚಿತ್ರ- ವೆಂಕಟೇಶ್. -