’ಅಕ್ಕ ವಿಶ್ವಕನ್ನಡಸಮ್ಮೇಳನ,’ ದಲ್ಲಿ, ’ಕರ್ನಾಟಕದ ಕವಿಗಳಸಂದೇಶ’ !

’ಅಕ್ಕ ವಿಶ್ವಕನ್ನಡಸಮ್ಮೇಳನ,’ ದಲ್ಲಿ, ’ಕರ್ನಾಟಕದ ಕವಿಗಳಸಂದೇಶ’ !

ಬರಹ

’ಅಕ್ಕ ವಿಶ್ವಕನ್ನಡಸಮ್ಮೇಳನ,’ ದಲ್ಲಿ, ’ಕರ್ನಾಟಕದ ಕವಿಗಳಸಂದೇಶ,’ ವೆಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಲ್ಲಿಭಾಗವಹಿಸಿದ್ದಕವಿಗಳಲ್ಲಿ ಪ್ರಮುಖರು, ಡಾ. ಎಸ್.ಎಲ್. ಬೈರಪ್ಪ, ಡಾ. ಕಂಬಾರ, ಶ್ರೀ. ಜಯಂತ್ ಕಾಯ್ಕಿಣಿ, ಕುಂ. ವೀರಭದ್ರಪ್ಪ, ಮತ್ತು ಇತರರು. ಡಾ. ಎಸ್.ಎಲ್. ಬೈರಪ್ಪ, ಮಾತನಾಡಿಹೇಳುತ್ತಾ, ಪ್ರತಿಭೆ, ಪರಿಶ್ರಮ, ಕರ್ತವ್ಯಪ್ರಜ್ಞೆಯಿಂದ ಕೆಲಸಮಾಡುತ್ತಿರುವ ಕನ್ನಡಿಗರು ಅಮೆರಿಕದಮುಖ್ಯವಾಹಿನಿಯಲ್ಲಿ ಬೆರೆತು ಅತ್ಯುತ್ತಮ ಮಾದರಿಯ ಭಾರತೀಯರೆಂದು ಹೆಸರಾಗಿರುವುದು ಸರ್ವಸಮ್ಮತವಾಗಿದೆ.

ಈ ಕನ್ನಡ ಭಾರತೀಯರು, ಮೊಟ್ಟಮೊದಲು ನೌಕರಿಗಾಗಿಬಂದರು. ಈಗ ಪ್ರಬುದ್ಧಮಾನ ಸ್ಥಿತಿಯಲ್ಲಿದ್ದಾರೆ. ಇದು ಮೆಚ್ಚಬಹುದಾದದ್ದು. ಆದರೆ ಅಷ್ಟಕ್ಕೇ ತೃಪ್ತರಾಗದೇ ತಮ್ಮ ವಲಯದಲ್ಲಿಮಾಡಿರುವ ಸಾಧನೆಗಳನ್ನು ಉಪಯೋಗಿಸಿಕೊಂಡು ತಮ್ಮದೇ ಆದ ಸ್ವಂತವಾದ ಉದ್ಯೋಗವನ್ನು ತೆರೆಯುವಗುರಿಯನ್ನು ಹೊಂದಬೇಕಾದ ಅಗತ್ಯವನ್ನು ಒತ್ತಿಹೇಳಿದರು. ಹಾಗೆಯೇ ಭಾರತದಲ್ಲೂ ತಮ್ಮ ಉದ್ಯಮವನ್ನು ಸ್ಥಾಪಿಸಿ, ಅಮೆರಿಕ-ಭಾರತಗಳಿಗೆ ಕೊಂಡಿಯಾಗಿ ದುಡಿಯುವ ಹೊಣೆಗಾರಿಕೆಯನ್ನು ಜ್ಞಾಪಿಸಿದರು. ಜಾಗತೀಕರಣದ ಸುಳಿಯಲ್ಲಿ ಸಿಕ್ಕಿರುವ ರಾಷ್ಟ್ರಗಳಿಗೆ ಈತರಹದ ಮನೋಸ್ಥಿತಿಯ ಅನಿವಾರ್ಯತೆಯನ್ನು ತಿಳಿಯಹೇಳಿದರು. ಮತ್ತೊಮ್ಮೆ ಭಾರತಕ್ಕೆ ವಾಪಸ್ಸಾಗಿ ತಾಯಿನಾಡಿನ ಒಳಿತಿಗಾಗಿ ಸೇವೆಸಲ್ಲಿಸಬೇಕಾದ ಅಗತ್ಯದಬಗ್ಗೆ ಹಲವು ಉದಾಹರಣೆಗಳಮೂಲಕ ತಿಳಿಸಿದರು.

ಡಾ. ಕಂಬಾರರು ಕನ್ನಡ ಕಾವ್ಯ, ಹಾಗೂ ಜನಪದಸಾಹಿತ್ಯದಬಗ್ಗೆ ಒಲವನ್ನು ಹೆಚ್ಚಿಸಿಕೊಳ್ಳುವ ಅಗತ್ಯವನ್ನು ತಿಳಿಸಿದರು. ಜಯಂತ್ ಕಾಯ್ಕಿಣಿಯವರ ಭಾಷಣ, ಯುವಪ್ರತಿಭೆಗಳಿಗೆ ಚೇತೋಹಾರಿಯಾಗಿತ್ತು. ಅತಿಹೆಚ್ಚಿನವಯೋಮಿತಿಯ ಕವಿಗಳೊಬ್ಬರುಬಂದಿದ್ದರು. ಅವರಜೊತೆಯಲ್ಲಿ ಉಪಸ್ಥಿತರಿದ್ದ ಹಲವರು ಚೆನ್ನಾಗಿ ಮಾತಾಡಿ ಕನ್ನಡದ ಉಳಿವು-ಅಳಿವುಗಳಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕುಂ. ವೀರಭದ್ರಪ್ಪನವರ ಆಂಧ್ರಪ್ರದೇಶದಲ್ಲಿನ ಕನ್ನಡಿಗರ ನೋವಿನಬಗ್ಗೆ, ಹಾಗೂ ಅಲ್ಲಿನಕನ್ನಡಶಾಲೆಗಳ ಶೋಚನೀಯ ಸ್ಥಿತಿಯನ್ನು ಮನದಟ್ಟುಮಾಡುವ ವಿವರಗಳು, ಸ್ವಲ್ಪವಿಷಾದವನ್ನು ಉಂಟುಮಾಡಿದವು. ಅಮೆರಿಕದಕನ್ನಡಿಗರು, ’ಅಕ್ಕ’ ನಂತಹ ಸಂಸ್ಥೆಗಳು ಮುಂದೆಬಂದು ಆರ್ಥಿಕ ಸಹಾಯವನ್ನು ಒದಗಿಸುವಮೂಲಕ, ಅಲ್ಲಿನ ಕನ್ನಡಿಗರಿಗೆ ಸಹಾಯಮಾಡಲು ಅವರು ಪ್ರಾರ್ಥಿಸಿಕೊಂಡರು.

ಇದಾದನಂತರ, ಅಮೆರಿಕದ ಕವಿಗಳ, ಕನ್ನಡನಾಡಿನ ಹೊಸಕವಿಗಳ ಪರಿಚಯ ಹಾಗೂ ಅವರ ಕೃತಿಪರಿಚಯದ ಕಾರ್ಯಕ್ರಮವಿತ್ತು. ಅಮೆರಿಕದಲ್ಲಿದ್ದುಕೊಂಡು ಅತ್ಯಂತ ಶ್ರೇಷ್ಠಮಟ್ಟದ ’ಕರ್ಣಾಟಕಭಾಗವತ,’ ಮಹಾಕಾವ್ಯದ ಲಿಪಿಕಾರ, ಸಂಪಾದಕ, ಸಂಶೋಧಕರಾದ, ಪ್ರೊ. ಚಂದ್ರಶೇಖರ್, ಮತ್ತು ಅತಿಚಿಕ್ಕಪ್ರಾಯದ ಮೈಸೂರಿನಕವಿ, ತಮ್ಮ ’ಮೈಸೂರಿನ ವೊಡೆಯರು’ ಎಂಬ ಪುಸ್ತಕದಬಗ್ಗೆ ವಿಚಾರಗಳ ಪ್ರಸ್ತುತಿಯಮೂಲಕ, ಎಲ್ಲರಗಮನಸೆಳೆದರು. ಹಿರಿಕವಿಯೊಬ್ಬರು ಅಮೆರಿಕದ ಪ್ರವಾಸದಕಥೆ, ಕೆಲವರಿಗೆ ಮೆಚ್ಚುಗೆಯಾಯಿತು. ಬೇರೆಕವಿಗಳೂ ತಮ್ಮ, ಕವನಗಳನ್ನು ಓದಿಹೇಳಿದರು. ಒಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯಂತ ವೈವಿಧ್ಯಪೂರ್ಣವಾಗಿತ್ತು. ಯಥಾಪ್ರಕಾರ, ಇಂತಹಕಾರ್ಯಕ್ರಮಗಳು ಸಾಮಾನ್ಯ ರಸಿಕರನ್ನು ರಂಜಿಸುವುದು ಕಷ್ಟ. ಆದರೆ ಇದ್ದ ಉಪಸ್ಥಿತ-ಸಾಹಿತ್ಯಾಭಿಮಾನಿಗಳಿಗೆ ಅದೊಂದು ರಸಗವಳವೆಂಬ ಮಾತನ್ನು ಅನೇಕರು ಅನುಮೋದಿಸಿದರು.