ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂವಿಧಾನ ಸೃಷ್ಟಿಯ ಕತೆ (ಭಾಗ 2)

ಸಂವಿಧಾನ ರಚನೆಯ ಜವಾಬ್ದಾರಿಯೇನೋ ಅಂಬೇಡ್ಕರರ ಮುಡಿಗೇರಿತು. ಆದರೆ ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಪರಿ? ಖಂಡಿತ, ಅಂಬೇಡ್ಕರರು ಮತ್ತವರ ಸಂವಿಧಾನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಅವರು ಮತ್ತು ಇತರರು ಸಂವಿಧಾನ ಸಭೆಗಳಲ್ಲಿ ಮಾಡಿದ ಭಾಷಣಗಳಲ್ಲಿ ನಮಗೆ ಉಲ್ಲೇಖ ಸಿಗುತ್ತದೆ.

Image

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 5)

ಬೆಳಗ್ಗೆ ಇಡೀ ದೇವಸ್ಥಾನವನ್ನು ನೋಡಿ ಮುಗಿಸಿ ನಾವು ಉಪಾಹಾರಕ್ಕೆಂದು ಹೋಟೆಲಿಗೆ ಹೋದೆವು. ಸ್ವಲ್ಪ ಫ್ರೆಷ್‌ ಅಪ್ ಮಾಡಿಕೊಂಡು ನಂತರ ಪುರಿಯಿಂದ ವಾಯವ್ಯ ದಿಕ್ಕಿನಲ್ಲಿ ಕರಾವಳಿಯುದ್ದದ ರಸ್ತೆಯಲ್ಲಿ ಸುಮಾರು 35 ಕಿ.ಮೀ,ದೂರದಲ್ಲಿರುವ ಜಗತ್ಪ್ರಸಿದ್ಧ ಕೋನಾರ್ಕದ ಸೂರ್ಯದೇವಾಲಯವನ್ನು ನೋಡಲು ಹೋದೆವು. ಇದು ಕ್ರಿ.ಶ.13ನೆಯ ಶತಮಾನದಲ್ಲಿ ಕಟ್ಟಿದ ಹಿಂದೂ ದೇವಾಲಯ.

Image

ಚಳಿಗಾಲದಲ್ಲಿ ಕೂದಲಿನ ಸಮಸ್ಯೆ ಪರಿಹಾರಕ್ಕೆ ಕಿತ್ತಳೆ ಸಿಪ್ಪೆ !

ನಿಧಾನವಾಗಿ ಚಳಿಗಾಲ ರಾಜ್ಯವನ್ನು ಆವರಿಸುತ್ತಿದೆ. ಕಳೆದ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಚಳಿ ಇರಲಿದೆ ಎನ್ನುವುದು ಹವಾಮಾನ ಪಂಡಿತರ ಲೆಕ್ಕಾಚಾರ. ಚಳಿಗಾಲದ ಸಮಯದಲ್ಲಿ ಕಿತ್ತಳೆ ಅಥವಾ ಆರೆಂಜ್ ಹಣ್ಣುಗಳು ಯಥೇಚ್ಛವಾಗಿ ಮಾರುಕಟ್ಟೆಗೆ ಬರುತ್ತವೆ. ಕಿತ್ತಳೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಇದರಲ್ಲಿ ವಿಟಮಿನ್ ಸಿ ಯಥೇಚ್ಛವಾಗಿದೆ. ಇದರ ಜೊತೆಗೆ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಗಳೂ ಸಮೃದ್ಧವಾಗಿವೆ.

Image

ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ನಿತಿನ್ ಅಗರ್ ವಾಲ್, ಕನ್ನಡಕ್ಕೆ: ಟಿ ಆರ್ ಅನಂತರಾಮು
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ಅಕ್ಟೋಬರ್ ೨೦೨೩

ಭಾರತದ ರಾಷ್ಟಪತಿಗಳಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಬಗ್ಗೆ ಹಲವಾರು ಪುಸ್ತಕಗಳು ಬಂದಿವೆ. ‘ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?’ ಎಂಬ ಕೃತಿಯು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ದೊಡ್ಡ ದೊಡ್ಡ ಆಕಾರದ ಅಕ್ಷರಗಳನ್ನು ಬಳಸಿಕೊಂಡು, ಸರಳವಾದ ಭಾಷೆಯಲ್ಲಿ ಮಾಹಿತಿಯನ್ನು ನೀಡಿರುವುದರಿಂದ ಮಕ್ಕಳಿಗೆ ಓದಿ ಮನನ ಮಾಡಲು ಅನುಕೂಲ.

ನಗಬೇಡಿ, ಇದು ಸತ್ಯ, ನಾಚಿಕೆ ಪಟ್ಟುಕೊಳ್ಳಿ...

ಸಾಧ್ಯವಾದರೆ ಈ ಅಂಕಿಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ತಪ್ಪಾಗಿದ್ದರೆ ನನಗೆ ತಿಳಿಸಿ, ಸರಿಯಿದ್ದರೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ತಿಳಿಸಿ. ದಂಗು ಬಡಿಸಿತು ಕೇಂದ್ರ ಶಿಕ್ಷಣ ಸಚಿವಾಲಯ ಪ್ರಕಟಿಸಿರುವ ರಾಜ್ಯಗಳ ಸಾಕ್ಷರತೆಯ ಶೇಕಡವಾರು ಪ್ರಮಾಣದ ವರದಿಯ ಸುದ್ದಿಯನ್ನು ನೋಡಿದಾಗ..

Image

ಸ್ಟೇಟಸ್ ಕತೆಗಳು (ಭಾಗ ೧೧೫೫)- ಇಂದು ನಾಳೆ

ಅವನ ನಗು ತುಂಬಾ ಜೋರಾಗಿದೆ. ಅಲ್ಲೋ ಮಾರಾಯ ನಿನಗೆ ನಿನ್ನಲ್ಲಿ ಎಷ್ಟು ಸಮಯ ಉಳಿದಿದೆ ಅನ್ನೋದೇ ಗೊತ್ತಿಲ್ಲ... ಉಳಿದವರಿಗೆ ಜೀವನದ ಸಮಯವನ್ನ ಹೇಗೆ ಸಾಗಿಸುವುದು ಪ್ರತಿಯೊಂದು ಕ್ಷಣವನ್ನು ಹೇಗೆ ಅನುಭವಿಸುವುದು  ಹೀಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದೀಯ ವಿನಃ, ನಿನ್ನ ಬದುಕಿನ ಸಣ್ಣ ಕ್ಷಣಗಳನ್ನು ಅನುಭವಿಸುವುದನ್ನು ನೀನು ಕಲಿತಿಲ್ಲ .

Image

ಸಂವಿಧಾನ ಸೃಷ್ಟಿಯ ಕತೆ (ಭಾಗ 1)

Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ  ಪರಿಹಾರ ಸೂಚಿಸಲು ಬ್ರಿಟಿಷರು ಮೂವರು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಭಾರತಕ್ಕೆ ಕಳುಹಿಸಿದರು. ಆ ಸಮಿತಿಯ ಹೆಸರು ‘ಕ್ಯಾಬಿನೆಟ್ ಮಿಷನ್ ಆಯೋಗ’.

Image

ಬಾಳೆಹಣ್ಣಿನ ಸಾಸಿವೆ

Image

ಬಾಳೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿ, ಕೆಂಪುಮೆಣಸು, ಹಸಿಮೆಣಸು, ಸಾಸಿವೆ, ಎಳ್ಳು, ಕೊತ್ತಂಬರಿ ಅರಿಸಿನ ಹಾಕಿ ರುಬ್ಬಿ ಇದಕ್ಕೆ ಮೊಸರು, ಉಪ್ಪು ಬೇಕಾದರೆ ಬೆಲ್ಲ ಹೆಚ್ಚಿದ ಬಾಳೆಹಣ್ಣು, ಹಾಕಿ ಚೆನ್ನಾಗಿ ಕಯ್ಯಾಡಿಸಿ ಇದಕ್ಕೆ ಕೆಂಪು ಮೆಣಸು, ಸಾಸಿವೆ, ಎಣ್ಣೆ, ಇಂಗು ಹಾಕಿ ಚಟಪಟ ಎಂದ ಮೇಲೆ ಸಾಸಿವೆಗೆ ಹಾಕಿ ಕೈಯ್ಯಾಡಿಸಿ, 

ಬೇಕಿರುವ ಸಾಮಗ್ರಿ

ಬಾಳೆಹಣ್ಣು ೨-೩. ಕಾಯಿತುರಿ ೧/೨ ಲೋಟ, ಸಾಸಿವೆ ೧ ಚಮಚ, ಕೊತ್ತಂಬರಿ ೧/೪ ಚಮಚ. ಎಳ್ಳು ೧/೪ ಚಮಚ,ಕೆಂಪು ಮೆಣಸು ೧/೨ ಚೂರು, ಹಸಿಮೆಣಸು ೧-೨, ಅರಸಿನ ೧/೪ ಚಮಚ. ಮೊಸರು ೧-೨ ಚಿಕ್ಕಸೌಟು, ರುಚಿಗೆ ಉಪ್ಪು ಬೇಕಾದರೆ ಬೆಲ್ಲ. ಒಗ್ಗರಣೆಗೆ ಕೆಂಪು ಮೆಣಸು, ಸಾಸಿವೆ, ಎಣ್ಣೆ ೧ ಚಮಚ, ಬೇಕಾದರೆ ಇಂಗಿನ ಚೂರು,