ಒಂದು ಗಝಲ್

ಒಂದು ಗಝಲ್

ಕವನ

ಮನದ ಸಮಸ್ಯೆ ಅದು ನನ್ನದಲ್ಲ ತಿಳಿ

ಜನ ಹೇಳುವ ಹೇಳಿಕೆ ನಿನ್ನದಲ್ಲ ತಿಳಿ

 

ಹಸಿರಿನಂತಿದ್ದೂ ಒಡಲೇಕೆ ಸುಟ್ಟಿತೋ

ಎಚ್ಚರಿಕೆಯ ನಡೆಗಳು ಇವನದಲ್ಲ ತಿಳಿ

 

ಜೀವನದ ಮೌಲ್ಯ ಗಳು ಈಗ ಎಲ್ಲಿದೆ

ಮೌನದ ಮಾತುಗಳು ಅವನದಲ್ಲ ತಿಳಿ

 

ಗರ್ವದಿಂದಿರೆ ಗೌರವಿಸುವರೇ ಹೇಳು

ನೀನು ಸೋತರೆ ಫಲ ಇವಳದಲ್ಲ ತಿಳಿ

 

ಗೆಲ್ಲದ ಕಹಿಯ ಕ್ಷಣ ಯಾರಿಹರು ಈಶಾ

ದುಡಿದು ಗಳಿಸಿರುವುದು ಅವಳದಲ್ಲ ತಿಳಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ್