ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದಿಗರೆಲ್ಲರಿಗೂ‌ ಹೊಸ ವರ್ಷದ ಶುಭಾಶಯಗಳು

 

ಎಲ್ಲರಿಗೂ‌ ಹೊಸ ವರ್ಷದ ಶುಭಾಶಯಗಳು

 

(ಚಿತ್ರದಲ್ಲಿರುವುದು ಅವರೇ ಗಿಡದ ಹೂವು. ಈ ಬಾರಿ ಊರಿಗೆ ಹೋದಾಗ ತೆಗೆದದ್ದು)

ಅನ್ಯಾಯದೊಳಗಿನ ತರ್ಕದಿಂದ ಕ್ಷಮೆ, ಅದರ ಬಗೆಗಿನ ಅಸಹಾಯಕತೆಯಿಂದ ಮರೆವು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು-೬೧

(೩೧೧) ಆದಿಭೌತಿಕದಲ್ಲಿ ನಂಬಿಕೆ ಇರಿಸುವುದೊಂದು ಪಲಾಯನವಾದ. ಸ್ವ-ಅನುಮಾನದಿಂದ ಪಲಾಯನ ಮಾಡುವ ವಾದವದು!
(೩೧೨) ಸಧೃಡವಾದ ದೇಹವನ್ನು ’ಪ್ರದರ್ಶಿಸುವುದೆಂದರೆ’ ಕಟ್ಟುಮಸ್ತಾಗಿ ಬೆಳೆಸಿದ್ದರೂ, ಸ್ವಾರ್ಥಕ್ಕಾಗಿ ಬಳಸಲಾಗದ ದೇಹದ 'ತೋರಿಕೆ'ಯನ್ನು ದಾನಮಾಡುವುದು ಎಂದರ್ಥ.
(೩೧೩) ಕ್ಷಮಿಸಿಬಿಡುವುದೆಂದರೆ  ನಮಗಾಗಿರುವ ಅನ್ಯಾಯದ ಒಳಗೇ ಒಂದು ತರ್ಕವನ್ನು ಕಾಣುವುದು. ಮರೆಯುವುದೆಂದರೆ ನಮಗಾದ ಅನ್ಯಾಯವನ್ನು ಅಸಹಾಯಕರಾಗಿ ನುಂಗಿಕೊಂಡುಬಿಡುವುದು.
(೩೧೪) ಮಹತ್ತರ ಸಾಧನೆಯೊಂದರ ಅತಿ-ಪರಿಚಿತತೆಯು ಕ್ಲೀಷೆಯಾಗಿ ಕೊನೆಗೊಳ್ಳಬಹುದು. ಆದರೆ ಕ್ಲೀಷೆ ಎಂಬುದನ್ನು ತಿರುವು ಮರೆವು ಮಾಡಲಾಗದು. ಕ್ಲೀಷೆಯೊಂದರ ಅತಿ ಪರಿಚಿತತೆಯೇ ಒಂದು ಮಹತ್ತರ ಸಾಧನೆಯಾಗಲಾಗದು!

ಎಲ್ಲಾ ಸಂಪದಿಗರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

ಎಲ್ಲಾ ಸಂಪದಿಗರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು
ನಿಮ್ಮ
ಕಾಮತ್ ಕುಂಬ್ಳೆ

ಲೈಫು ಇಷ್ಟೇನೆ : ನೀವೇನಂತೀರಿ?

ಇಂದಿನ ಆಧುನಿಕ ಬದುಕಿನಲ್ಲಿನ ವಿಚಿತ್ರ ಸಂಗತಿಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ನಮ್ಮ ಜೀವನದಲ್ಲಿ ವಿಚಿತ್ರ ಆದರೂ ಸತ್ಯವಾಗಿರುವ ಲೈಫು ಇಷ್ಟೇನೆ ಎಂಬಂತಹ ವಿಶೇಷಗಳಿವು. ಓದಿ, ನೀವೇನಂತೀರಿ?
೧. ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ, ಆದರೆ ಸ್ಫೋಟಿಸುವ ಸ್ವಭಾವಗಳೂ ಇವೆ.

ಆನ್ ಡ್ರೊಯ್ಡ್

ಏನಿದು ಆನ್ ಡ್ರೊಯ್ಡ್ ?ಕಂಡ ಕಂಡ ಮೊಬೈಲ್ ಕಂಪನಿಗಳೆಲ್ಲ ದಿನೇ ದಿನೇ ಒಂದು ಪ್ರೊಡಕ್ಟ್ ಹೊರತಂದಾಗ ಇದು ಆನ್ ಡ್ರೊಯ್ಡ್  ಫೋನ್ ಎಂದು ಹೇಳಿಕೊಳ್ಳುತ್ತಿವೆ.ಹಾಗಾದರೆ ಏನಿದೆ ಇದರಲ್ಲಿ ಅಂಥ ವಿಶೇಷ?

ಮೊಬೈಲ್ ಕಂಪನಿಗಳಲ್ಲಿ ನೊಕಿಯ,ಸಾಮ್ ಸಂಗ್,ಸೋನಿ,ಎಲ್ ಜಿ ,ಹೆಚ್ ಟಿ  ಸಿ,ಬ್ಲ್ಯಾಕ್ ಬೆರ್ರಿ,ಐ ಫೋನ್  ದಿಗ್ಗಜರು.ಇವರ ಜೊತೆಗೆ ಈಗ ಕೆಲವು ಹೊಸ ಕಂಪನಿಗಳು ಈಗ ಅವರಿಗೆ  ತಾವೇನು ಕಮ್ಮಿ ಎಂಬಂತೆ ತಮ್ಮ ಪ್ರೊಡಕ್ಟ್ ಗಳನ್ನು ಹೊರತರುತ್ತಿವೆ.ಅವರಿಗೆ ಬೇಕಾದ (Operating System)ಗಳನ್ನು  ಬಳಸಿಕೊಳ್ಳುತ್ತವೆ.ಇದರಲ್ಲಿ ಸಿಂಬಿಯನ್ ,ಆನ್ ಡ್ರೊಯ್ಡ್,ಬ್ಲ್ಯಾಕ್ ಬೆರ್ರಿ ಇತ್ಯಾದಿ.

ಕಾಲದ ಜೊತೆ ಕಾಲಿರಲಿ


ಎಂದಿನಂತೆ ನಾಳೇನೂ ಮೂಡಣದಲ್ಲಿ ನೇಸರನ ಉದಯವಾಗಲಿದೆ, ಆ ಉದಯದೊಂದಿಗೆ ಹೊಸ ವರುಷದ ಆಗಮನವಾಗಲಿದೆ, ಕಾಲಚಕ್ರದ ಇನ್ನೊಂದು ಅದ್ಯಾಯದ ಉದಯವಾಗಲಿದೆ.ಎಲ್ಲಾ ಸಂಪದಿಗರಿಗೆ ಆ ಉದಯ ರವಿ ಸವಿ-ಸುಖವನ್ನು ಹೊತ್ತುತರಲಿ, ಮನೆ-ಮನಗಳಲಿ ನಲಿವಿರಲಿ, ನೋವಿನ ಸುಳಿವಿರದಿರಲಿ.

ಎಲ್ಲರಿಗೂ ಹೊಸವರುಷದ ಶುಭಾಶಯಗಳು
ನಿಮ್ಮ
ಕಾಮತ್ ಕುಂಬ್ಳೆ

ನನ್ನ ಡೈರಿ - ಸತ್ಯ ಕಥೆ

ಇದೊಂದು ಸತ್ಯ ಘಟನೆಯನ್ನಾಧಾರಿತ ಆಂಗ್ಲ ಕಥೆ. ಮಿಂಚಂಚೆಯಲ್ಲಿ ಬಂದದ್ದು. ಕನ್ನಡದ ಸಹಜಗೆತೆ ಸ್ವಲ್ಪ ತಿದ್ದುಪಡಿ ಮಾಡಿ ಅನುವಾದಿಸಿದ್ದೇನೆ.

* ಹೊಸ ವರ್ಷದ ಶುಭಾಶಯಗಳು *

 


ಶತಮಾನವು ಬರುತಿಹುದು,
ಶತ ಕೋಟಿ ಜೀವವು ಬರುತಿಹುದು,


ಶತಮಾನದಿಂದ ಬಂದ ಸಂಪ್ರದಾಯ ಮರೆತಿಹುದು,


 


ಹೊಸ ವರ್ಷವು ನಗುತಿಹುದು,


ಹೊಸ ಯೋಜನೆಯು ತರುತಿಹುದು
ಹಳೆಯದೆಲ್ಲಾ ಈಗ ನೆನಪಿಗೆ ಸರಿದಿಹುದು,


 


ಯುಗ ಯೋಗ ಮುಗಿಯುವುದು,
ಬವ ಭೋಗ ಬಿಡದವರು,


ಬಗೆ ರೋಗವ ಪಡೆಯುವರು


 


ಚಿತ್ರ ವಿಚಿತ್ರ ಜಗವಿಹುದು,


ಛತ್ರ, ಚಾಮರ, ಪಲ್ಲಂಗ ಮೆರೆಯುವರು
ಜೀವನ ಚದುರಂಗದಾಟದಿ ಮರೆಯಾಗುವರು.


 


ಜಗದೊಡೆಯನ ಚಿತ್ತವೇ ನಡೆವುದು,
ಮನುಜನ ಚಿತ್ತಕ್ಕೆ ಬಂದುದು ನಡೆಯದು,
ಜಗದೋದ್ದಾರನ ನೆನೆದರೆ ಎಲ್ಲವೂ ಶುಭವದು.