ಲೈಫು ಇಷ್ಟೇನೆ : ನೀವೇನಂತೀರಿ?

ಲೈಫು ಇಷ್ಟೇನೆ : ನೀವೇನಂತೀರಿ?

ಇಂದಿನ ಆಧುನಿಕ ಬದುಕಿನಲ್ಲಿನ ವಿಚಿತ್ರ ಸಂಗತಿಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ನಮ್ಮ ಜೀವನದಲ್ಲಿ ವಿಚಿತ್ರ ಆದರೂ ಸತ್ಯವಾಗಿರುವ ಲೈಫು ಇಷ್ಟೇನೆ ಎಂಬಂತಹ ವಿಶೇಷಗಳಿವು. ಓದಿ, ನೀವೇನಂತೀರಿ?
೧. ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ, ಆದರೆ ಸ್ಫೋಟಿಸುವ ಸ್ವಭಾವಗಳೂ ಇವೆ.
೨. ರಸ್ತೆಗಳು ವಿಶಾಲವಾಗಿವೆ, ಆದರೆ ದೃಷ್ಟಿಕೋನಗಳು ಸಂಕುಚಿತವಾಗಿವೆ.
೩. ನಾವು ಹೆಚ್ಚು ಖರೀದಿಸುತ್ತೇವೆ, ಆದರೆ ಕಡಿಮೆ ಉಪಯೋಗಿಸುತ್ತೇವೆ.
೪. ನಮ್ಮ ಮನೆಗಳು ದೊಡ್ಡದಾಗುತ್ತಿವೆ, ಆದರೆ ಕುಟುಂಬ ಚಿಕ್ಕದಾಗುತ್ತಿದೆ.
೫. ಅಸಾಮಾನ್ಯ ವಿದ್ಯಾರ್ಹತೆಗಳಿವೆ, ಆದರೆ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ.
೬. ವಿಷಯ ಸಂಗ್ರಹ ಹೆಚ್ಚಾಗಿದೆ ಆದರೆ ವಿವೇಚನೆ ಕಡಿಮೆ ಆಗಿದೆ.
೭. ಪರಿಣಿತರು ಹೆಚ್ಚಿದ್ದಾರೆ, ಸಮಸ್ಯೆಗಳೂ ಹೆಚ್ಚಾಗಿವೆ.
೮. ಔಷಧಿಗಳು ಹೆಚ್ಚಾಗಿವೆ, ಆರೋಗ್ಯ ಕಡಿಮೆಯಾಗಿದೆ.
೯. ನಾವು ಹೆಚ್ಚು ಗಳಿಸುತ್ತೇವೆ, ಆದರೆ ಕಡಿಮೆ ನಗುತ್ತೇವೆ.
೧೦. ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ, ಬೆಳಿಗ್ಗೆ ತುಂಬ ಬಳಲಿಕೆಯಿಂದ ಏಳುತ್ತೇವೆ.
೧೧. ಕಡಿಮೆ ಓದುತ್ತೇವೆ, ತುಂಬ ಟಿವಿ ನೋಡುತ್ತೇವೆ, ಮತ್ತು ಅಪರೂಪಕ್ಕೆ ಪ್ರಾರ್ಥಿಸುತ್ತೇವೆ.
೧೨. ನಮ್ಮ ಆಸ್ತಿಪಾಸ್ತಿಯ ಬೆಲೆ ಏರಿದೆ, ಆದರೆ ನಮ್ಮ ಮೌಲ್ಯಗಳೇ ಇಳಿದಿವೆ.
೧೩. ತುಂಬ ಹೆಚ್ಚು ಮಾತನಾಡುತ್ತೇವೆ, ತುಂಬ ಕಡಿಮೆ ಪ್ರೀತಿಸುತ್ತೇವೆ, ತುಂಬ ಸುಳ್ಳು ಹೇಳುತ್ತೇವೆ.
೧೪. ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ, ಆದರೆ ನಮ್ಮ ಕಂಪೌಂಡ್ ದಾಟಿ ನೆರೆಯವರನ್ನು ಭೇಟಿಯಾಗಲು ಹೋಗಿಲ್ಲ.
೧೫. ನಾವು ಬಹಿರಂಗದಲ್ಲಿ ಗೆಲ್ಲುತ್ತಿದ್ದೇವೆ, ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ.
೧೬. ಗಾಳಿಯನ್ನು ಶುದ್ಧೀಕರಿಸಿದ್ದೇವೆ, ಆದರೆ ನಮ್ಮ ಆತ್ಮವನ್ನು ಮಲಿನಗೊಳಿಸಿದ್ದೇವೆ.
೧೭. ಅಣುವನ್ನೂ ಖಂಡತುಂಡ ಮಾಡಿದ್ದೇವೆ, ಆದರೆ ನಮ್ಮ ಅಹಂ ಅಖಂಡವಾಗಿ ಉಳಿದಿದೆ.
೧೮. ಬರವಣಿಗೆ ಹೆಚ್ಚಾಗಿದೆ, ಆದರೆ ಅರಿವು ಕಡಿಮೆಯಾಗಿದೆ.
೧೯. ಹೆಚ್ಚು ಯೋಜಿಸುತ್ತೇವೆ, ಆದರೆ ಕಡಿಮೆ ಸಾಧಿಸುತ್ತೇವೆ.
೨೦. ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ ಆದರೆ ನೈತಿಕತೆ ಕುಸಿದಿದೆ.
೨೧. ಇದು ವಿವಿಧ ಭಕ್ಷ್ಯಗಳ, ಆದರೆ ಕಡಿಮೆ ಜೀರ್ಣಶಕ್ತಿಯ ಕಾಲ.
೨೨. ಎತ್ತರದ ಆಕಾರ ಆದರೆ ಕುಬ್ಜ ವ್ಯಕ್ತಿತ್ವದ ಮನುಷ್ಯರ ಕಾಲ.
೨೩. ಒಳ್ಳೆ ಲಾಭ ಸಂಪಾದನೆ ಆದರೆ ಟೊಳ್ಳು ಸಂಬಂಧಗಳ ಕಾಲ.
೨೪. ವಿಶ್ವಶಾಂತಿಯ ಬಗ್ಗೆ ಮಾತನಾಡುತ್ತೇವೆ, ಆದರೆ ಮನೆಯವರೊಂದಿಗೆ ಕಾದುತ್ತೇವೆ.
-ಸಿದ್ಧರಾಮ ಹಿರೇಮಠ.

Comments