ಅನ್ಯಾಯದೊಳಗಿನ ತರ್ಕದಿಂದ ಕ್ಷಮೆ, ಅದರ ಬಗೆಗಿನ ಅಸಹಾಯಕತೆಯಿಂದ ಮರೆವು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು-೬೧
(೩೧೧) ಆದಿಭೌತಿಕದಲ್ಲಿ ನಂಬಿಕೆ ಇರಿಸುವುದೊಂದು ಪಲಾಯನವಾದ. ಸ್ವ-ಅನುಮಾನದಿಂದ ಪಲಾಯನ ಮಾಡುವ ವಾದವದು!
(೩೧೨) ಸಧೃಡವಾದ ದೇಹವನ್ನು ’ಪ್ರದರ್ಶಿಸುವುದೆಂದರೆ’ ಕಟ್ಟುಮಸ್ತಾಗಿ ಬೆಳೆಸಿದ್ದರೂ, ಸ್ವಾರ್ಥಕ್ಕಾಗಿ ಬಳಸಲಾಗದ ದೇಹದ 'ತೋರಿಕೆ'ಯನ್ನು ದಾನಮಾಡುವುದು ಎಂದರ್ಥ.
(೩೧೩) ಕ್ಷಮಿಸಿಬಿಡುವುದೆಂದರೆ ನಮಗಾಗಿರುವ ಅನ್ಯಾಯದ ಒಳಗೇ ಒಂದು ತರ್ಕವನ್ನು ಕಾಣುವುದು. ಮರೆಯುವುದೆಂದರೆ ನಮಗಾದ ಅನ್ಯಾಯವನ್ನು ಅಸಹಾಯಕರಾಗಿ ನುಂಗಿಕೊಂಡುಬಿಡುವುದು.
(೩೧೪) ಮಹತ್ತರ ಸಾಧನೆಯೊಂದರ ಅತಿ-ಪರಿಚಿತತೆಯು ಕ್ಲೀಷೆಯಾಗಿ ಕೊನೆಗೊಳ್ಳಬಹುದು. ಆದರೆ ಕ್ಲೀಷೆ ಎಂಬುದನ್ನು ತಿರುವು ಮರೆವು ಮಾಡಲಾಗದು. ಕ್ಲೀಷೆಯೊಂದರ ಅತಿ ಪರಿಚಿತತೆಯೇ ಒಂದು ಮಹತ್ತರ ಸಾಧನೆಯಾಗಲಾಗದು!
(೩೧೫) ಸೋಲೆಂಬುದು ತನ್ನದೇ ಸಾಫಲ್ಯತೆಯನ್ನು ಅರಗಿಸಿಕೊಳ್ಳಲಾಗದ ಅಸಹಾಯಕತೆ!
Rating