ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬನ್ನಿ ದಾರಿಯನ್ನು ಹುಡುಕೋಣ

              ನಮ್ಮ ಜನಗಳ್ ಕರ್ಮ ಏನು ಹೇಳೋದು ಮತ್ತೆ ಮತ್ತೆ ಎಲೆಕ್ಷನ್ ಬರುತ್ತೆ. ಜನರ ಹತ್ರ ಕ್ಯಾಂಡಿಡೇಟ್ ಗಳು ಬ್ಯಾಡ ಅಂದ್ರು ಬರ್ತಾರೆ. ಏನೇನೋ ಹೇಳ್ತಾರೆ. ಬೇಕಾಗಿಯೋ ಬೇಡವಾಗಿಯೋ ಮತಹಾಕಲೇ ಬೇಕು. ಇಲ್ಲಾ ಅಂದ್ರೆ ತಪ್ಪಾಗುತ್ತೆ. ಮತದಾರನಾಗಿ ತನ್ನ ಹಕ್ಕು ಚಲಾಯಿಸುವುದು ರಾಷ್ಟ್ರಧರ್ಮ. ಅದನ್ನು ಮಾಡದೆ ಪ್ರಶ್ನಿಸುವುದು ಕರ್ತವ್ಯ ಲೋಪ. ಅಭ್ಯರ್ಥಿಯ ಆಯ್ಕೆಯಲ್ಲಿ ಮತದಾರ ಯಾವ ಮಾನದಂಡವನ್ನು ಅನುಸರಿಸಬೇಕು ? ಅವನಿಗೆ ಯಾರೂ ಸೂಕ್ತರಾಗಿಲ್ಲವೆನಿಸಿದರೆ ಆಗ ಏನು ಮಾಡಬೇಕು ? ಇದ್ದವರಲ್ಲಿ ಕಡಿಮೆ ದೋಷವುಳ್ಳವನನ್ನು ಅನಿವಾರ್ಯವಾಗಿ ಬೆಂಬಲಿಸಬೇಕಾದುದು, ಒಪ್ಪಿಕೊಳ್ಳಬೇಕಾದುದು ಯಾವ ಸಾಧನೆಗಾಗಿ ?

ಸಾವಿತ್ರಿಯ ಸ೦ಭ್ರಮಕ್ಕೆ ಮತ್ತೊ೦ದು ಗರಿ!

ಕಳೆದು ಹೋಗುತ್ತಿರುವ ಈ ವರುಷ, ನನ್ನನ್ನು ದುಬೈನಿ೦ದ ಬೆ೦ಗಳೂರಿಗೆ ವಾಪಸ್ ಕರೆತ೦ದಿತು, ಜೊತೆಗೆ ಮು೦ದೊ೦ದು ದಿನ ಕುಳಿತು ಬ೦ಧು ಬಾ೦ಧವರೊ೦ದಿಗೆ ಸ್ನೇಹಿತರೊ೦ದಿಗೆ ಕಾಫಿ ಸವಿಯುತ್ತಾ ಮೆಲುಕು ಹಾಕಲು ಕೆಲವು ಅಮೂಲ್ಯ ಕ್ಷಣಗಳನ್ನೂ ನೀಡಿಯೇ ಹೋಗುತ್ತಿದೆ.  ಡೆಸೆ೦ಬರ್ ೫ ರ ಭಾನುವಾರ ಸ೦ಪದ ಸಮ್ಮಿಲನ, ಅದೇ ದಿನ ಸ೦ಜೆ ಚಿ;ಸೌ.ಸಾವಿತ್ರಿಯ ನಿರ್ದೇಶಕಿ ಶೃತಿ ನಾಯ್ಡು ಜನ್ಮದಿನದ ಖುಷಿ, ಜೊತೆಗೆ ಸಾವಿತ್ರಿಯ ನೂರು ಕ೦ತು ಪೂರೈಸಿದ ಸ೦ಭ್ರಮವೂ ಮೇಳೈಸಿ ಅದೊ೦ದು ಮರೆಯಲಾಗದ ದಿನವಾಗಿ ಹೋಯಿತು.  

ಮತ್ತೆ ಡಿಸೆ೦ಬರ್ ೧೭ರ ಶುಕ್ರವಾರ ವೈಕು೦ಠ ಏಕಾದಶಿ, ಸುಮಾರು ನಾಲ್ಕು ವರ್ಷಗಳಿ೦ದ ತಪ್ಪಿ ಹೋಗಿದ್ದ ವೈಕು೦ಠ ದ್ವಾರದಿ೦ದ ಬಾಲಾಜಿಯ ದರ್ಶನದ ಅವಕಾಶ ಈ ಬಾರಿ ಮತ್ತೆ ನನಗೆ ದೊರೆತಿದ್ದು ಮತ್ತಷ್ಟು ಖುಷಿ ನೀಡಿತು.

ಎಲ್ಲೆಲ್ಲೂ ನೀನೇ

ಬಿಳಿಯ ಬೋಳು ಗೋಡೆಯಲ್ಲು
ಮೆಟ್ಟಿಲಿ ಛಾವಣಿಗಳಲ್ಲು
ತಟ್ಟೆ ಲೋಟ ಅನ್ನದಲ್ಲು
ನೀನೇ ಕಾಣುವೆ
ನಾ ನಿನ್ನೇ ಕಾಣುವೆ

ಹಾರುವಾ ಹಕ್ಕಿಗಳಲು
ಮಿನುಗುವಾ ಚುಕ್ಕಿಗಳಲು
ಅರಳುತಿರುವ ಮೊಗ್ಗುಗಳಲು
ನೀನೇ ಕಾಣುವೆ
ನಾ ನಿನ್ನೇ ಕಾಣುವೆ

ಹರಿವ ನೀರ ಜುಳುವಿನಲ್ಲು
ಕರುವ ಮುದ್ದು ಕುಣಿತದಲ್ಲು
ಬಿರಿವ ಚಳಿಯ ಕೊರೆತದಲ್ಲು
ನೀನೇ ಮೂಡುವೆ
ನಾ ನಿನ್ನೇ ಕಾಣುವೆ

ಕೋಪದಲ್ಲು ಪ್ರೀತಿಯಲ್ಲು                 
ಅಳುವಿನಲ್ಲು ನಗುವಿನಲ್ಲು
ಸತ್ ಚಿತ್ ಆನಂದದಲ್ಲು
ನಿಂದೇ ಧ್ಯಾನವೇ
ಸದಾ ನಿಂದೇ ಪ್ರೇಮವೇ.

ಶಬ್ದದಲ್ಲು ಬೆಳಕಿನಲ್ಲು
ಸ್ಪರ್ಶದಲ್ಲು ಸ್ವಾದದಲ್ಲು
ತುಡಿತದೆದೆಯ ಬಡಿತದಲ್ಲು

ಕರುಳಿನ ಕೂಗು (ಕಥೆ)

ಅನುವಾದಿತ ಕಥೆ.
ಶಂಕರನ ತಾಯಿಗೆ ಕೇವಲ ಒಂದೇ ಕಣ್ಣಿದ್ದು ಶಂಕರ ತನ್ನ ತಾಯಿಯನ್ನು ಬಹಳ ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದ. ಅವರದ್ದು ತೀರಾ ಬಡ ಕುಟುಂಬ. ಶಂಕರನ ತಾಯಿ ಒಂದು ಸಣ್ಣ ಗೂಡಂಗಡಿ ನಡೆಸುತ್ತಿದ್ದಳು. ಅದರ ಸಂಪಾದನೆಯಿಂದಲೇ ಮನೆ ನಡೆಯಬೇಕಿತ್ತು. ಒಂದು ದಿನ ಶಂಕರನ ತಾಯಿ ಊಟ ಮರೆತು ಹೋಗಿದ್ದ ಮಗನಿಗೆ ಊಟ ತೆಗೆದುಕೊಂಡು ಶಾಲೆಗೆ ಹೋದಳು. ಅವಳು ಅಲ್ಲಿಗೆ ಬಂದಿದ್ದನ್ನು ಸಹಿಸದ ಶಂಕರ ಮನೆಗೆ ಬಂದುಬಿಟ್ಟ. ಮರುದಿನ ಶಾಲೆಯಲ್ಲಿ ಕೆಲ ಹುಡುಗರು ಶಂಕರನಿಗೆ ನಿನ್ನ ತಾಯಿಗೆ ಒಕ್ಕಣ್ಣು ಎಂದು ಚುಡಾಯಿಸಲು ಶುರು ಮಾಡಿದರು.