ಪ್ರಕೃತಿ ಪ್ರವಾಸ

ಪ್ರಕೃತಿ ಪ್ರವಾಸ

 


  ಪ್ರಕೃತಿ ಪ್ರವಾಸ
 
  ಯಾಂತ್ರಿಕತೆಯಿಂದ ಬೇಸರವೆನಿಸಿತು ನಗರದ ವಾಸ
  ಯೋಚಿಸಿದೆವು ನಾವೆಲ್ಲಾ ಮಾಡಲು ಪುಟ್ಟ ಪ್ರವಾಸ 
 
  ಸಭೆ ಏರ್ಪಡಿಸಿದೆವು ತೀರ್ಮಾನಿಸಲು ಪ್ರವಾಸದ ತಾಣ
  ಬದಲಾವಣೆಗೆ ಮಲೆನಾಡೇ ಒಳ್ಳೆಯದೆಂದ ಒಬ್ಬ ಜಾಣ
 
  ನಾಲ್ವರೂ ಸೇರಿ ಹೊರೆಟೆವು ಹತ್ತಿ ನಮ್ಮ ಕಾರು
  ಉತ್ಸಾಹದಲೇ ಪ್ರವಾಸಕಾಗಿ ಬಿಟ್ಟೆವು ನಮ್ಮ ಊರು
 
  ದಾರಿಯುದ್ದಕೂ ಕಂಡಿತು ಹಚ್ಚ ಹಸಿರ ಗುಡ್ಡ ಬೆಟ್ಟಗಳು
  ಹಸಿರ ಕಾಡ ತಂಪಾಗಿಸಿತ್ತು ಹರಿಯುತ್ತಿದ್ದ  ಝರಿಗಳು
 
  ದಾರಿಯಲ್ಲಿ ಕಾಣ ಸಿಕ್ಕವು ಪುಟ್ಟ ಮೊಲ, ಜಿಂಕೆ, ಕೋತಿ
  ಸಣ್ಣನೆ ಮಂಜು ಹೆಚ್ಚಿಸಿತು ಪ್ರಕೃತಿಯ ರಮ್ಯತೆ ಈ ರೀತಿ 
 
  ಸುಂದರ ನೋಟದ ನಡುವೆ ತಲುಪಿದೆವು ವಿಹಾರಧಾಮ
  ತುಂತುರು ಮಳೆ ಶುರುವಾಗಿ ಹೆಚ್ಚಿಸಿತು ಪ್ರಕೃತಿ ಪ್ರೇಮ  
 
  ಪ್ರವಾಸದಿ ನಾವು ಹೊಕ್ಕಿದೆವು ದಟ್ಟನೆಯ ಅಭಯಾರಣ್ಯ
  ನಾಡಿನ ಅರಣ್ಯ ಸಂಪತ್ತು ನೋಡಿ ನಾವಾದೆವಂದು ಧನ್ಯ
 
  ಯಥೇಚ್ಛ ಪ್ರಕೃತಿ ಸಂಪತ್ತನು ಹೊಂದಿದ ನಾಡು ನಮ್ಮದು
  ಈ ಸಂಪತ್ತನು ರಕ್ಷಿಸಿ ಬೆಳೆಸುವ ಜವಾಬ್ದಾರಿಯು ನಮ್ಮದು
 
  ಪ್ರಕೃತಿಯ ಪ್ರವಾಸದಲಿ ಎಲ್ಲೂ ಪ್ಲಾಸ್ಟಿಕ್ ಬಳಸಿಲಿಲ್ಲ ನಾವು 
  ಹೀಗೆ ಎಲ್ಲಾ ನೋಡಿಕೊಂಡೆವು ಏರದಂತೆ ಭೂಮಿಯ ಕಾವು
 
  - ತೇಜಸ್ವಿ.ಎ.ಸಿ  


 

Rating
No votes yet

Comments