ಚೆಲುವೆಯೇ... ನಿನ್ನ ನೋಡಲು,

ಚೆಲುವೆಯೇ... ನಿನ್ನ ನೋಡಲು,

ಕವನ
ಚೆಲುವೆಯೇ... ನಿನ್ನ ನೋಡಲು,
ನನಗೇನು ಆತುರ ಇಲ್ಲ...
ಆದರೆ, ಪದೇ ಪದೇ ಆಸೆ ಅಷ್ಟೇ!
ಅರಗಿಳಿಯ ಮಾತು ಕೇಳಲು, 
ಕಾಡುವ ಕಾತುರವೇನು ಇಲ್ಲ...
ಸುಮ್ನೆ ಕೇಳ್ತಾ ಇರಬೇಕು
ಅಂತ ಇಷ್ಟ ಅಷ್ಟೇ!
ನಿನ್ನ ರಮಿಸಿ ಮುದ್ದಾಡಲು,
ಬಿಸಿ ಬಯಕೆಯೇನು ಉಕ್ಕುತ್ತಿಲ್ಲ...
ಆದ್ರೆ ಒಳಗಿನ ಪುಳಕವ,
ತಡೆಯೋಕೆ ಆಗ್ತಿಲ್ಲ ಅಷ್ಟೇ!
ನಿನ್ನನ್ನು ಮೆಚ್ಚಿ ಇಷ್ಟಪಡಲು,
ಹೊಸ ಕಾರಣವೇನು ಬೇಕಿಲ್ಲಾ,
ಅರಿವಿಲ್ಲದೆ ನನ್ನ ಮನಸ್ಸು,
ಖುಷಿ ಖುಷಿಯಾಗಿದೆ ಅಷ್ಟೇ! 
ನೀ ನನಗೆ ಬೇಕೆನಲು,  
ಸಂಕೋಚವೇನು  ಆಗ್ತಾ ಇಲ್ಲ...
ಹತ್ತಿರ ನೀನಿಲ್ಲ ಅಂದ್ರೆ,
ತುಂಬಾ ಬೇಸರ ಆಗುತ್ತೆ ಅಷ್ಟೇ!
ನಿನ್ನಿಂದ ದೂರ ಹೋಗಲು, 
ತುಂಬಾ ಕಷ್ಟವೇನು ಇಲ್ಲ...
ನಾನಿಲ್ಲದೆ ನೀ ಕೊರಗಿಬಿಡ್ತೀಯ,
ಅನ್ನೋ ಕಾಳಜಿ ಅಷ್ಟೇ.

 

ಚೆಲುವೆಯೇ... ನಿನ್ನ ನೋಡಲು,

ನನಗೇನು ಆತುರ ಇಲ್ಲ...

ಆದರೆ, ಪದೇ ಪದೇ ಆಸೆ ಅಷ್ಟೇ!


ಅರಗಿಳಿಯ ಮಾತು ಕೇಳಲು, 

ಕಾಡುವ ಕಾತುರವೇನು ಇಲ್ಲ...

ಸುಮ್ನೆ ಕೇಳ್ತಾ ಇರಬೇಕು

ಅಂತ ಇಷ್ಟ ಅಷ್ಟೇ!


ನಿನ್ನ ರಮಿಸಿ ಮುದ್ದಾಡಲು,

ಬಿಸಿ ಬಯಕೆಯೇನು ಉಕ್ಕುತ್ತಿಲ್ಲ...

ಆದ್ರೆ ಒಳಗಿನ ಪುಳಕವ,

ತಡೆಯೋಕೆ ಆಗ್ತಿಲ್ಲ ಅಷ್ಟೇ!


ನಿನ್ನನ್ನು ಮೆಚ್ಚಿ ಇಷ್ಟಪಡಲು,

ಹೊಸ ಕಾರಣವೇನು ಬೇಕಿಲ್ಲಾ,

ಅರಿವಿಲ್ಲದೆ ನನ್ನ ಮನಸ್ಸು,

ಖುಷಿ ಖುಷಿಯಾಗಿದೆ ಅಷ್ಟೇ! 


ನೀ ನನಗೆ ಬೇಕೆನಲು,

 ಸಂಕೋಚವೇನು  ಆಗ್ತಾ ಇಲ್ಲ...

ಹತ್ತಿರ ನೀನಿಲ್ಲ ಅಂದ್ರೆ,

ತುಂಬಾ ಬೇಸರ ಆಗುತ್ತೆ ಅಷ್ಟೇ!


ನಿನ್ನಿಂದ ದೂರ ಹೋಗಲು, 

ತುಂಬಾ ಕಷ್ಟವೇನು ಇಲ್ಲ...

ನಾನಿಲ್ಲದೆ ನೀ ಕೊರಗಿಬಿಡ್ತೀಯ,

ಅನ್ನೋ ಕಾಳಜಿ ಅಷ್ಟೇ.

http://fromdaya.blogspot.com/